ವಿಜಯವಾಡ: ಮಕ್ಕಳಿಗೆ ಸೋಂಕು ತಗುಲುತ್ತದೆ ಎಂಬ ಭಯದಿಂದ ಕೋವಿಡ್ ಪಾಸಿಟಿವ್ ದಂಪತಿ ಆತ್ಮಹತ್ಯೆಗೆ ಶರಣು
ಕೊರೋನಾ ಪಾಸಿಟಿವ್ ದೃಢಪಟ್ಟಿದ್ದ ದಂಪತಿಗಳಿಬ್ಬರು ತಮ್ಮ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ಭಯದಿಂದ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪೆಡಾನಾದಲ್ಲಿ ಗುರುವಾರ ರಾತ್ರಿ ನಡೆದಿದೆ.
Published: 22nd May 2021 02:24 PM | Last Updated: 22nd May 2021 02:46 PM | A+A A-

ಸಾಂದರ್ಭಿಕ ಚಿತ್ರ
ವಿಜಯವಾಡ: ಕೊರೋನಾ ಪಾಸಿಟಿವ್ ದೃಢಪಟ್ಟಿದ್ದ ದಂಪತಿಗಳಿಬ್ಬರು ತಮ್ಮ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ಭಯದಿಂದ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪೆಡಾನಾದಲ್ಲಿ ಗುರುವಾರ ರಾತ್ರಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಕುಟುಂಬ ಸದಸ್ಯರು ಎಚ್ಚರಗೊಂಡು ನೋಡಿದಾಗ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಪೆಡಾನಾ ಪೊಲೀಸರ ಪ್ರಕಾರ, ಜಕ್ಕುಲಾ ಲೀಲಾ ಪ್ರಸಾದ್ (40) ಮತ್ತು ಭಾರತಿ (37) ದಂಪತಿಗಳು ಕಳೆದ 10 ದಿನಗಳಿಂದ ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿದ್ದರು ಮತ್ತು ಅವರು ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಹೀಗಾಗಿ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು.
ಈ ದಂಪತಿಗೆ ಒಂಬತ್ತು ಮತ್ತು ಐದು ವರ್ಷ ವರ್ಷದ ಹೆಣ್ಣುಮಕ್ಕಳಿದ್ದು, ಅವರಿಗೆ ಸೋಂಕು ಹರಡಬಹುದೆಂಬ ಭಯದಿಂದ, ದಂಪತಿಗಳು ಖಿನ್ನತೆಗೆ ಒಳಗಾಗಿದ್ದರು, ಏಕೆಂದರೆ ಕುಟುಂಬದ ಯಾವುದೇ ಸದಸ್ಯರು ಅವರ ರಕ್ಷಣೆಗೆ ಬಂದಿರಲಿಲ್ಲ. ಹೀಗಾಗಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ಈ ಸಂಬಂಧ ಸಿಆರ್ ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.