The New Indian Express
ರಾಯ್ ಪುರ: ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಯುವಕನಿಗೆ ಥಳಿಸಿದ್ದ ಸೂರಜ್ ಪುರ ಜಿಲ್ಲಾಧಿಕಾರಿಯನ್ನು ತೆಗೆದುಹಾಕಲು ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್ ಆದೇಶ ನೀಡಿದ್ದಾರೆ.
ಅಧಿಕಾರಿಗಳು ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕೊರೋನಾ ತಡೆಗೆ ಲಾಕ್ ಡೌನ್ ವಿಧಿಸಿರುವ ನಡುವೆಯೂ ಯುವಕನೋರ್ವ ಸಂಚರಿಸುತ್ತಿದ್ದ, ಇದನ್ನು ಅಧಿಕಾರಿಗಳು ಕಂಡೊಡನೆಯೇ ಆತ ತಾನು ಸಂಚರಿಸುತ್ತಿದ್ದದ್ದಕ್ಕೆ ಕಾರಣವನ್ನೂ ನೀಡಲು ಯತ್ನಿಸಿದ್ದ. ಆಡರೆ ಮೊಬೈಲ್ ಹಾಗೂ ಯುವಕ ನೀಡುತ್ತಿದ್ದ ಕಾಗದವನ್ನು ಎಸೆದು ಕಾರಾಣವನ್ನು ಆಲಿಸದೇ ಅಧಿಕಾರಿಗಳು ಯುವಕನನ್ನು ಥಳಿಸಿದ್ದರು.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಜಿಲ್ಲಾಧಿಕಾರಿಗಳನ್ನು ತೆಗೆದುಹಾಕುವಂತೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಘಟನೆಯನ್ನು ಖಂಡಿಸಿರುವ ಸಿಎಂ, "ಚತ್ತೀಸ್ ಗಢದಲ್ಲಿ ಇಂತಹ ಘಟನೆಗಳನ್ನು ಸಹಿಸುವುದಿಲ್ಲ" ಎಂದು ಹೇಳಿದ್ದಾರೆ.