ಫ್ಯಾಬಿಫ್ಲು ಕೋವಿಡ್ ಔಷಧಿ ಎಲ್ಲಿಂದ ದೊರೆಯಿತು?: ಗೌತಮ್‌ ಗಂಭೀರ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ

ಕೋವಿಡ್ -19 ಔಷಧಿ ಫ್ಯಾಬಿಫ್ಲುವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ವಿತರಿಸಿದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಈ ಔಷಧವನ್ನು ಹೇಗೆ ಸಂಗ್ರಹಿಸಿದರು...
ಗೌತಮ್ ಗಂಭೀರ್
ಗೌತಮ್ ಗಂಭೀರ್

ನವದೆಹಲಿ: ಕೋವಿಡ್ -19 ಔಷಧಿ ಫ್ಯಾಬಿಫ್ಲುವನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ವಿತರಿಸಿದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಈ ಔಷಧವನ್ನು ಹೇಗೆ ಸಂಗ್ರಹಿಸಿದರು ಎಂಬುದರ ಕುರಿತು ತನಿಖೆ ನಡೆಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ನಿರ್ದೇಶನ ನೀಡಿದೆ.

ಸಾಂಕ್ರಾಮಿಕ ಸಮಯದಲ್ಲಿ ಔಷಧಿಗಳನ್ನು ಸಂಗ್ರಹಿಸಿಟ್ಟಿದ್ದಕ್ಕಾಗಿ ಗಂಭೀರ್ ಮತ್ತು ಎಎಪಿ ಶಾಸಕರಾದ ಪ್ರೀತಿ ತೋಮರ್ ಮತ್ತು ಪ್ರವೀಣ್ ಕುಮಾರ್ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಪಿನ್ ಸಿಂಗ್ ಮತ್ತು ಜಸ್ಮೀತ್ ಸಂಘಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಗಂಭೀರ್ ಉದ್ದೇಶ ಸರಿಯಾಗಿದ್ದರೂ, ಕಡಿಮೆ ಪೂರೈಕೆಯಾದಾಗ ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸುವ ಮೂಲಕ ಅವರು ನಿಯಮ ಉಲ್ಲಂಘಿಸಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಯಾವುದೇ ತನಿಖೆ ನಡೆದರೂ, ಔಷಧ ನಿಯಂತ್ರಕ ಅದನ್ನು ಪರಿಶೀಲಿಸಲಿ. ಗೌತಮ್ ಗಂಬೀರ್ ರಾಷ್ಟ್ರೀಯ ಆಟಗಾರರಾಗಿದ್ದಾರೆ. ಅವರಿಗೆ ಒಳ್ಳೆಯ ಉದ್ದೇಶಗಳಿವೆ ಎಂದು ತಮಗೆ ಖಾತ್ರಿಯಿದೆ. ಆದರೆ ಅವರು ಅದರ ಬಗ್ಗೆ ನಡೆದುಕೊಂಡ ರೀತಿ, ಅವರು ನಿಜವಾಗಿಯೂ ಅಪಚಾರ ಮಾಡಿದ್ದಾರೆ ಎಂದಿದೆ.

ಔಷಧಿ ನಿಯಂತ್ರಕಕ್ಕೆ ಒಂದು ವಾರದೊಳಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com