ಸರ್ಕಾರದ ಕೋವಿಡ್-19 ನಿಯಂತ್ರಣ ಅಭಿಯಾನ ವೇಳೆ ಧರ್ಮ ಪ್ರಚಾರ ಮಾಡುತ್ತಿದ್ದ ಮಹಿಳಾ ಡಾಕ್ಟರ್; ವಿಡಿಯೋ

ಮಧ್ಯಪ್ರದೇಶ ಸರ್ಕಾರದ ಗುತ್ತಿಗೆ ಮಹಿಳಾ ವೈದ್ಯೆಯೊಬ್ಬರು, ಕೊರೋನಾವೈರಸ್ ಸೋಂಕಿನಿಂದ ದೂರವಿರಲು ಅಥವಾ ಸಾಂಕ್ರಾಮಿಕದಿಂದ ಗುಣಮುಖರಾಗಲು ನಿರ್ದಿಷ್ಠ ಧರ್ಮವೊಂದರ ದೇವರನ್ನು ಪೂಜಿಸುವಂತೆ ಜನರಿಗೆ ಹೇಳುವುದು ವಿಡಿಯೋವೊಂದರಲ್ಲಿ ಸೆರೆಯಾದ ಬಳಿಕ ವಿವಾದವೊಂದು ಭುಗಿಲೆದ್ದಿದೆ.
ಮಹಿಳಾ ಡಾಕ್ಟರ್
ಮಹಿಳಾ ಡಾಕ್ಟರ್

ರಾಟ್ಲಾಂ: ಮಧ್ಯಪ್ರದೇಶ ಸರ್ಕಾರದ ಗುತ್ತಿಗೆ ಮಹಿಳಾ ವೈದ್ಯೆಯೊಬ್ಬರು, ಕೊರೋನಾವೈರಸ್ ಸೋಂಕಿನಿಂದ ದೂರವಿರಲು
ಅಥವಾ ಸಾಂಕ್ರಾಮಿಕದಿಂದ ಗುಣಮುಖರಾಗಲು ನಿರ್ದಿಷ್ಠ ಧರ್ಮವೊಂದರ ದೇವರನ್ನು ಪೂಜಿಸುವಂತೆ ಜನರಿಗೆ ಹೇಳುವುದು
ವಿಡಿಯೋವೊಂದರಲ್ಲಿ ಸೆರೆಯಾದ ಬಳಿಕ ವಿವಾದವೊಂದು ಭುಗಿಲೆದ್ದಿದೆ.

ರಾಟ್ಲಾಂ ಜಿಲ್ಲೆಯ ಭಜ್ನಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ.ಸಾಂಕ್ರಾಮಿಕ ರೋಗ ನಿಯಂತ್ರಣ ಅಭಿಯಾನ ವೇಳೆ ಸರ್ಕಾರದ ಗುತ್ತಿಗೆ ವೈದ್ಯೆಯೊಬ್ಬರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿದ್ದ ಬಗ್ಗೆ ದೂರು ಸ್ವೀಕರಿಸಿರುವುದಾಗಿ ತಹಸೀಲ್ದಾರ್ ಬಿಎಸ್ ಠಾಕೂರ್ ಶನಿವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಧಾರ್ಮಿಕ ಕರಪತ್ರಗಳು ಕೂಡಾ ಆ ಮಹಿಳೆ ಬಳಿ ಪತ್ತೆಯಾಗಿವೆ. ವರದಿ ತಯಾರಿಸಿ, ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಹೇಳಿದರು.

ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ವ್ಯಕ್ತಿಯೊಂದಿಗೆ ಮಾಸ್ಕ್ ಧರಿಸಿರುವ ಮಹಿಳಾ ಡಾಕ್ಟರ್ ಮಾತನಾಡುವ ದೃಶ್ಯ
ವಿಡಿಯೋದಲ್ಲಿದೆ. ಯೇಸುವನ್ನು ಪ್ರಾರ್ಥಿಸುವುದರಿಂದ ಗುಣಮುಖರಾಗುವುದಾಗಿ ಏಕೆ ಜನರಿಗೆ ಹೇಳುತ್ತಿದ್ದೀರಿ? ತಮ್ಮ ಸ್ವಂತ ಧರ್ಮದ ಪ್ರಾರ್ಥನೆ ಮಾಡುವಂತೆ ಜನರಿಗೆ ಏಕೆ ಹೇಳುತ್ತಿಲ್ಲ? ಎಂದು ಕೇಳುತ್ತಾನೆ. ಆದಕ್ಕೆ ಪ್ರತಿಕ್ರಿಯಿಸುವ ಆ ಮಹಿಳೆ,
ಯೇಸುವನ್ನು ಪ್ರಾರ್ಥಿಸುವುದರಿಂದ ಗುಣಮುಖರಾಗಿದ್ದಾಗಿ ಜನರು ಹೇಳುತ್ತಿರುವುದನ್ನು ಕೇಳಿದ್ದಾಗಿ ಹೇಳುವುದು ವಿಡಿಯೋದಲ್ಲಿದೆ.

ಈ ವಿಡಿಯೋವನ್ನು ಕೆಲ ಬಿಜೆಪಿ ಮುಖಂಡರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ತನಿಖೆ ನಂತರ ಕೇಸ್ ದಾಖಲಿಸಲಾಗುವುದು ಎಂದು ಭಜ್ನಾ ಪೊಲೀಸ್ ಠಾಣೆ ಉಸ್ತುವಾರಿ ದಿಲೀಪ್ ರಾಜೊರಿಯಾ ಹೇಳಿದ್ದಾರೆ. ಈವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ  ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com