ನಾರದಾ ಸ್ಟಿಂಗ್ ಆಪರೇಷನ್ ಕೇಸು: ಹೈಕೋರ್ಟ್ ನ ಗೃಹ ಬಂಧನ ಆದೇಶ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಸಿಬಿಐ

ನಾರದ ಸ್ಟಿಂಗ್ ಆಪರೇಷನ್ ಕೇಸಿನಲ್ಲಿ ನಾಲ್ವರು ಟಿಎಂಸಿ ನಾಯಕರನ್ನು ಗೃಹ ಬಂಧನಕ್ಕೊಳಪಡಿಸುವಂತೆ ಕೋಲ್ಕತ್ತಾ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ನಾರದ ಸ್ಟಿಂಗ್ ಆಪರೇಷನ್ ಕೇಸಿನಲ್ಲಿ ನಾಲ್ವರು ಟಿಎಂಸಿ ನಾಯಕರನ್ನು ಗೃಹ ಬಂಧನಕ್ಕೊಳಪಡಿಸುವಂತೆ ಕೋಲ್ಕತ್ತಾ ಹೈಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಅಲ್ಲದೆ ಪ್ರಕರಣದ ವಿಚಾರಣೆಯನ್ನು ಇಂದಿಗೆ ಮುಂದೂಡುವಂತೆ ಕೂಡ ಸಿಬಿಐ ಕೋರಿದೆ.

ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್ ಹಕಿಮ್, ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಕೋಲ್ಕತ್ತಾದ ಮಾಜಿ ಮೇಯರ್ ಸೊವನ್ ಚಟರ್ಜಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಕಳೆದ ಮೇ 7ರಂದು ಅನುಮತಿ ನೀಡಿದ್ದರು.

ಈ ಕುರಿತು ಸಿಬಿಐ ರಾಜ್ಯಪಾಲರಿಗೆ ಕೋರಿಕೆ ಸಲ್ಲಿಸಿತ್ತು.ಈ ನಾಲ್ವರು ನಾಯಕರು ಲಂಚ ಪಡೆದುಕೊಳ್ಳುವುದು ರಹಸ್ಯ ಕ್ಯಾಮರಾ ಕಾರ್ಯಾಚರಣೆಯಲ್ಲಿ ಸೆರೆಯಲಾಗಿದೆ ಎಂಬ ಆರೋಪವಿದ್ದು ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ತೀವ್ರ ನಾಟಕೀಯ ಸನ್ನಿವೇಶ ಮಧ್ಯೆ ಈ ನಾಲ್ವರನ್ನು ಸಿಬಿಐ ಬಂಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com