'ಯಾಸ್' ತೀವ್ರ ಬಿರುಗಾಳಿ ಸಹಿತ ಚಂಡಮಾರುತ: ಮೇ 26ಕ್ಕೆ ಒಡಿಶಾ-ಪಶ್ಚಿಮ ಬಂಗಾಳ ತೀರ ದಾಟುವ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಯಾಸ್ ಚಂಡಮಾರುತ ಪ್ರಭಾವ ತೀವ್ರಗೊಂಡಿದ್ದು, ಮೇ 26ರಂದು ಒಡಿಶಾ-ಪಶ್ಚಿಮ ಬಂಗಾಳ ತೀರವನ್ನು ದಾಟಿ  ತೀವ್ರ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ/ಕೋಲ್ಕತ್ತಾ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಯಾಸ್ ಚಂಡಮಾರುತ ಪ್ರಭಾವ ತೀವ್ರಗೊಂಡಿದ್ದು, ಮೇ 26ರಂದು ಒಡಿಶಾ-ಪಶ್ಚಿಮ ಬಂಗಾಳ ತೀರವನ್ನು ದಾಟಿ  ತೀವ್ರ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಾಡಿದ್ದು ಬುಧವಾರ ಅಪರಾಹ್ನ ಹೊತ್ತಿಗೆ ಯಾಸ್ ಚಂಡಮಾರುತ ಒಡಿಶಾ ಪಶ್ಚಿಮ ಬಂಗಾಳ ತೀರದಲ್ಲಿ ಪ್ಯಾರದೀಪ್ ಮತ್ತು ಸಾಗರ ದ್ವೀಪವನ್ನು ದಾಟಿ ಗಂಟೆಗೆ ಗಾಳಿಯ ವೇಗ 155ರಿಂದ 165 ಕಿಲೋ ಮೀಟರ್ ವರೆಗೆ ಚಂಡಮಾರುತ ಬಿರುಗಾಳಿ ಬೀಸಲಿದೆ ಎಂದು ಕೋಲ್ಕತ್ತಾದ ಸ್ಥಳೀಯ ಹವಾಮಾನ ಕೇಂದ್ರದ ಉಪ ನಿರ್ದೇಶಕ ಸಂಜಿಬ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.

ಯಾಸ್ ಚಂಡಮಾರುತ,ಇಂದು ಬೆಳಿಗ್ಗೆ ಒಡಿಶಾದ ಪ್ಯಾರಾದೀಪ್‌ನ ದಕ್ಷಿಣ-ಆಗ್ನೇಯಕ್ಕೆ 540 ಕಿ.ಮೀ ಮತ್ತು ಪಶ್ಚಿಮ ಬಂಗಾಳದ ಆಗ್ನೇಯಕ್ಕೆ 630 ಕಿ.ಮೀ ದೂರದಲ್ಲಿದೆ. ಇದು ಉತ್ತರ-ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಮತ್ತು ನಾಳೆಯಿಂದ ನಾಡಿದ್ದು ಬುಧವಾರ ಬೆಳಗ್ಗೆ ಹೊತ್ತಿಗೆ ಚಂಡಮಾರುತದ ಪ್ರಭಾವ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದ ಸ್ಥಿತಿಗತಿ ಮತ್ತು ಅದರ ಪ್ರಭಾವದ ಬಗ್ಗೆ ನಿಗಾವಹಿಸಲು ಪಶ್ಚಿಮ ಬಂಗಾಳ ಸರ್ಕಾರ ರಾಜ್ಯ ಸಚಿವಾಲಯ ನಬನ್ನದಲ್ಲಿ ನಿಗಾ ಕೊಠಡಿಯನ್ನು ತೆರೆದಿದೆ. ಕರಾವಳಿ ಜಿಲ್ಲೆಗಳಾದ ಪುರ್ಬಾ ಮತ್ತು ಪಾಸ್ಚಿಮ್ ಮದಿನಿಪುರ, ದಕ್ಷಿಣ ಮತ್ತು ಉತ್ತರ 24 ಪರ್ಗಾನಾ, ಹೌರಾ ಮತ್ತು ಹೂಗ್ಲಿ ಜೊತೆಗೆ ಹೆಚ್ಚಿನ ಸ್ಥಳಗಳಲ್ಲಿ ನಾಳೆಯಿಂದ ಹಗುರದಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com