ದೇಶದಲ್ಲಿ ತಗ್ಗಿದ ಕೊರೋನಾ ಅಲೆ: ಸೋಂಕು ಪಾಸಿಟಿವಿಟಿ ಪ್ರಮಾಣ ಶೇ.9.54ಕ್ಕೆ ಇಳಿಕೆ

ದೇಶದಲ್ಲಿ ವ್ಯಾಪಕವಾಗಿ ಅಬ್ಬರಿಸಿದ್ದ ಕೊರೋನಾ ಸಾಂಕ್ರಾಮಿಕದ 2ನೇ ಅಲೆ ಇದೀಗ ತಗ್ಗಿದ್ದು, ಸೋಂಕು ಸಕಾರಾತ್ಮಕ ದರ ಶೇ.9.54ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ (ಸಂಗ್ರಹ ಚಿತ್ರ)
ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ (ಸಂಗ್ರಹ ಚಿತ್ರ)

ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಅಬ್ಬರಿಸಿದ್ದ ಕೊರೋನಾ ಸಾಂಕ್ರಾಮಿಕದ 2ನೇ ಅಲೆ ಇದೀಗ ತಗ್ಗಿದ್ದು, ಸೋಂಕು ಸಕಾರಾತ್ಮಕ ದರ ಶೇ.9.54ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ದೈನಂದಿನ ಕೋವಿಡ್-19 ಸಕಾರಾತ್ಮಕ ದರವು ಕಡಿಮೆಯಾಗುತ್ತಿದ್ದು, ಶೇಕಡಾ 9.54 ರಷ್ಟಿದೆ.ಅಂತೆಯೇ ದೈನಂದಿನ ಚೇತರಿಕೆ ಪ್ರಮಾಣ ಕೂಡ ಸತತ 12 ನೇ ದಿನವೂ ಹೊಸ ಪ್ರಕರಣಗಳಿಗಿಂತ ಹೆಚ್ಚಿದ್ದು, ಇದು ಸೋಂಕು ಸಕಾರಾತ್ಮಕ ದರ ಕುಸಿಯಲು ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ  ಸಚಿವಾಲಯ ಮಂಗಳವಾರ ತಿಳಿಸಿದೆ.

ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಪ್ರಮಾಣ ಕೂಡ 25,86,782ಕ್ಕೆ ಇಳಿದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 1,33,934ರಷ್ಟು ಕುಸಿತವಾಗಿದೆ. ಇದು ದೇಶದ ಸೋಂಕು ಸಾಕಾರಾತ್ಮಕ ದರ 9.54ಕ್ಕೆ ಕುಸಿಯಲು ಕಾರಣವಾಗಿದೆ. ದೇಶದಲ್ಲಿ ಮೇ 10ರಂದು ಗರಿಷ್ಠ ಪ್ರಮಾಣದ ಸಕ್ರಿಯ ಪ್ರಕರಣಗಳಿದ್ದವು. ಬಳಿಕ ಸೋಂಕು ಗಣನೀಯವಾಗಿ ತಗ್ಗುತ್ತಿದೆ.

ದೇಶದಲ್ಲಿ ಸತತ 12ನೇ ದಿನ ದೈನಂದಿನ ಸೋಂಕು ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣ ಹೆಚ್ಚಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 3,26,850 ರೋಗಿಗಳು ಚೇತರಿಸಿಕೊಂಡಿದ್ದಾರೆ.  ಆ ಮೂಲಕ ಭಾರತದ ಚೇತರಿಕೆ ಕಂಡ ಸೋಂಕಿತರ ಸಂಖ್ಯೆ 2,40,54,861 ಕ್ಕೆ ತಲುಪಿದೆ. ಅಂತೆಯೇ  ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ಒಟ್ಟು 20,58,112 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟು 33,25,94,176 ಪರೀಕ್ಷೆಗಳನ್ನು ಈವರೆಗೆ ಮಾಡಲಾಗಿದೆ.  

ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಸಿದ್ಧಪಡಿಸಿದ ತಾತ್ಕಾಲಿಕ ವರದಿಯ ಪ್ರಕಾರ ಒಟ್ಟು 19,85,38,999 ಲಸಿಕೆ ಡೋಸ್ ಗಳನ್ನು 28,41,151 ಸೆಷನ್‌ಗಳ ಮೂಲಕ ನೀಡಲಾಗಿದೆ. ಮೊದಲ ಡೋಸ್ ತೆಗೆದುಕೊಂಡ 97,79,304 ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯು) ಮತ್ತು ಎರಡನೇ ಡೋಸ್  ತೆಗೆದುಕೊಂಡ 67,18,723 ಎಚ್‌ಸಿಡಬ್ಲ್ಯೂ, ಮೊದಲ ಡೋಸ್ ಪಡೆದ 1,50,79,964 ಮುಂಚೂಣಿ ಕಾರ್ಯಕರ್ತರು (ಎಫ್‌ಎಲ್‌ಡಬ್ಲ್ಯೂ) ಮತ್ತು 83,55,982 ಎಫ್‌ಎಲ್‌ಡಬ್ಲ್ಯೂಗಳು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. 18-44 ವರ್ಷ ವಯಸ್ಸಿನ 1,19,11,759 ಫಲಾನುಭವಿಗಳು  ಮೊದಲ ಡೋಸ್ ಪಡೆದಿದ್ದಾರೆ. 18-44 ವಯೋಮಾನದವರಲ್ಲಿ 12.82 ಲಕ್ಷ ಡೋಸ್ ಲಸಿಕೆಗಳನ್ನು 24 ಗಂಟೆಗಳ ಅವಧಿಯಲ್ಲಿ ನೀಡಲಾಯಿತು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com