'ಕೋವಿಡ್ ಟೂಲ್ ಕಿಟ್' ತನಿಖೆ: ನೋಟಿಸ್ ನೀಡಲು ಟ್ವಿಟರ್ ಕಚೇರಿಗೆ ತೆರಳಿದ್ದ ದೆಹಲಿ ಪೊಲೀಸ್ ತಂಡ!

'ಕೋವಿಡ್ ಟೂಲ್ ಕಿಟ್' ಆರೋಪದ ತನಿಖೆಗೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾಗೆ ನೋಟಿಸ್ ನೀಡಲು ದೆಹಲಿ ಪೊಲೀಸ್ ವಿಶೇಷ ಘಟಕದ ಎರಡು ತಂಡಗಳು ಸೋಮವಾರ ದೆಹಲಿ ಮತ್ತು ಗುರಂಗಾವ್ ನ ಟ್ವಿಟರ್ ಕಚೇರಿಗೆ ತೆರಳಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ಟ್ವಿಟರ್
ಟ್ವಿಟರ್

ನವದೆಹಲಿ: 'ಕೋವಿಡ್ ಟೂಲ್ ಕಿಟ್' ಆರೋಪದ ತನಿಖೆಗೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾಗೆ ನೋಟಿಸ್ ನೀಡಲು ದೆಹಲಿ ಪೊಲೀಸ್ ವಿಶೇಷ ಘಟಕದ ಎರಡು ತಂಡಗಳು ಸೋಮವಾರ ದೆಹಲಿ ಮತ್ತು ಗುರಂಗಾವ್ ನ ಟ್ವಿಟರ್ ಕಚೇರಿಗೆ ತೆರಳಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ವಾಡಿಕೆಯ ಪ್ರಕ್ರಿಯೆ ಭಾಗವಾಗಿ ಟ್ವಿಟರ್ ಗೆ ನೋಟಿಸ್ ಒಂದನ್ನು ನೀಡಲು ಅದರ ಎರಡು ಕಡೆಗಳಲ್ಲಿನ ಕಚೇರಿಗೆ ದೆಹಲಿ ಪೊಲೀಸ್ ತಂಡ ತೆರಳಿತ್ತು. ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಬಹಳ ಅಸ್ಪಷ್ಟವಾಗಿ ಪ್ರತಿಕ್ರಿಯಿಸಿರುವುದರಿಂದ ಸರಿಯಾದ ವ್ಯಕ್ತಿ ಎಂಬುದನ್ನು ತಿಳಿಯಲು ಇದು ಅಗತ್ಯವಾಗಿದೆ ಎಂದು ದೆಹಲಿ ಪೊಲೀಸ್ ಪಿಆರ್ ಒ ಚಿನ್ಮೋಯ್ ಬಿಸ್ವಾಲ್ ಹೇಳಿದ್ದಾರೆ.

ಇದಕ್ಕೂ ಮುನ್ನಾ, ಕೋವಿಡ್ ಟೂಲ್ ಕಿಟ್ ಆರೋಪದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಹಾಗೂ ಗುರಗಾಂವ್ ನ ಟ್ವಿಟರ್ ಕಚೇರಿಗಳ ಮೇಲೆ ದೆಹಲಿ ಪೊಲೀಸ್ ವಿಶೇಷ ಘಟಕದ ತಂಡ ಸೋಮವಾರ ಸಂಜೆ ದಾಳಿ ನಡೆಸಿರುವುದಾಗಿ ಅಧಿಕೃತಗಳು ಮೂಲಗಳು ಹೇಳಿದ್ದವು.

ಕೋವಿಡ್-19 ಟೂಲ್ ಕಿಟ್ ಆರೋಪದ ತನಿಖೆಗೆ ಸಂಬಂಧಿಸಿದ ವಿಚಾರಣೆಗಾಗಿ ಟ್ವಿಟರ್ ಗೆ ವಿಶೇಷ ಘಟಕದಿಂದ ನೋಟಿಸ್ ಕಳುಹಿಸಲಾಗಿತ್ತು. ಬಿಜೆಪಿ ಮುಖಂಡ ಸಂಬೀತ್ ಪಾತ್ರ ತಿರುಚಿರುವ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡುವಂತೆ ಮೈಕ್ರೋಬ್ಲಾಗಿಂಗ್ ಸೈಟ್ ಗೆ ಕೇಳಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೊಲೀಸರಿಗೆ ಗೊತ್ತಿಲ್ಲದ ಕೆಲವೊಂದು ಮಾಹಿತಿಯನ್ನು ಟ್ವಿಟರ್ ಹೊಂದಿದೆ. ಈ ಮಾಹಿತಿ ತನಿಖೆಗೆ ಪ್ರುಸ್ತುತವಾಗಿದೆ ಎಂದು ದೆಹಲಿ
ಪೊಲೀಸ್ ಪಿಆರ್ ಒ ಚಿನ್ಮಾಯಿ ಬಿಸ್ವಾಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com