ನಿಷ್ಕ್ರೀಯ ವೆಂಟಿಲೇಟರ್ ಗಳು ಗಂಭೀರ ವಿಚಾರ: ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಯಸಿದ ಬಾಂಬೆ ಹೈಕೋರ್ಟ್

ಪಿಎಂ ಕೇರ್ಸ್ ನಿಧಿ ಮೂಲಕ ಮಹಾರಾಷ್ಟ್ರದ ಮರಾಠವಾಡ ವಲಯದಲ್ಲಿನ ಆಸ್ಪತ್ರೆಗಳಿಗೆ ಪೂರೈಸಲಾಗಿರುವ ನೂರಕ್ಕೂ ಹೆಚ್ಚು ವೆಂಟಿಲೇಟರ್ ಗಳು ನಿಷ್ಕೀಯವಾಗಿರುವುದು ಗಂಭೀರ ವಿಚಾರವಾಗಿದೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದ್ದು, ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಯಸಿದೆ.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್

ಮುಂಬೈ: ಪಿಎಂ ಕೇರ್ಸ್ ನಿಧಿ ಮೂಲಕ ಮಹಾರಾಷ್ಟ್ರದ ಮರಾಠವಾಡ ವಲಯದಲ್ಲಿನ ಆಸ್ಪತ್ರೆಗಳಿಗೆ ಪೂರೈಸಲಾಗಿರುವ ನೂರಕ್ಕೂ ಹೆಚ್ಚು ವೆಂಟಿಲೇಟರ್ ಗಳು ನಿಷ್ಕೀಯವಾಗಿರುವುದು ಗಂಭೀರ ವಿಚಾರವಾಗಿದೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದ್ದು, ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಯಸಿದೆ.

ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಆರ್ ವಿ ಘುಗೆ ಮತ್ತು ಬಿ ಯು ದೇಬಾಡ್ವಾರ್ ಅವರನ್ನೊಳಗೊಂಡ ಔರಂಗಬಾದ್ ಪೀಠ, ಆಸ್ಪತ್ರೆಗಳ ಡೀನ್‌ಗಳು ವೆಂಟಿಲೇಟರ್ ದೋಷಯುಕ್ತವಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಮರ್ಥರಾಗಿದ್ದಾರೆ ಮತ್ತು  ಅವರ ಅಭಿಪ್ರಾಯವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿತು.

ಔರಂಗಬಾದ್ ನ ಸರ್ಕಾರಿ ಮೆಡಿಕಲ್ ಕಾಲೇಜಿನ ಡೀನ್ ಪಿಎಂ ಕೇರ್ಸ್ ಫಂಡ್ ಮೂಲಕ 150 ವೆಂಟಿಲೇಟರ್ ಗಳನ್ನು ಪಡೆದಿದ್ದಾರೆ. ಆಸ್ಪತ್ರೆ 17 ಯೂನಿಟ್ ಗಳನ್ನು ಬಳಸುತ್ತಿದ್ದು, 41 ವೆಂಟಿಲೇಟರ್ ಗಳನ್ನು ಔರಂಗಬಾದಿನ ಐದು ಖಾಸಗಿ ಆಸ್ಪತ್ರೆಗಳಿಗೆ ನೀಡಿದೆ. 55 ವೆಂಟಿಲೇಟರ್ ಗಳನ್ನು ಇತರ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದಿರುವ 37 ಪೆಟ್ಟಿಗೆಯಿಲ್ಲದೆ ಹಾಗೆಯೇ ಬಿದ್ದಿವೆ ಎಂದು ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ ಆರ್ ಕಾಳೆ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

 ಕಾಳೆ ನೀಡಿರುವ ಮಾಹಿತಿ ಪ್ರಕಾರ, ಎಲ್ಲಾ 113 ವೆಂಟಿಲೇಟರ್ ಗಳು ನಿಷ್ಕೀಯಗೊಂಡಿವೆ. ಈ ವೆಂಟಿಲೇಟರ್ ಗಳ ಪರಿಸ್ಥಿತಿಯನ್ನು ಗುರುತಿಸಿದ್ದು, ಇದೊಂದು ಗಂಭೀರ ವಿಚಾರವಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಯಾವ ಕ್ರಮ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿರಿ ಎಂಬುದರ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರಸರ್ಕಾರಕ್ಕೆ ನಿರ್ದೇಶಿಸಿದರು. 

ಕಂಪನಿ ವಿರುದ್ಧ ಕೈಗೊಳ್ಳುವ ಕ್ರಮದ ಬಗ್ಗೆ ತಿಳಿಸಬೇಕು, ಇದರಿಂದ ಕಂಪನಿ ಕೂಡಾ ಪಲಾಯನವಾಗಬಾರದು, ಇದು ಸಾರ್ವಜನಿಕ ಖಜಾನೆಯ ಹಣ ಎಂದು ಹೇಳಿದ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com