'ಯಾಸ್' ಚಂಡಮಾರುತ ಬಾಲಸೋರ್ ಗೆ ಅಪ್ಪಳಿಸುವ ಸಾಧ್ಯತೆ; ಒಡಿಶಾ ಕರಾವಳಿ ಜಿಲ್ಲೆಗಳಿಂದ ಜನರ ಸ್ಥಳಾಂತರ, 4 ಜಿಲ್ಲೆಗಳಿಗೆ ರೆಡ್ ಅಲರ್ಟ್ 

ಯಾಸ್ ಚಂಡಮಾರುತ ಒಡಿಶಾದ ಬಾಲಸೋರೆಗೆ ಅಪ್ಪಳಿಸಿ ಉತ್ತರ ಕರಾವಳಿ ಜಿಲ್ಲೆಗಳಲ್ಲಿ ತನ್ನ ಪ್ರಭಾವವನ್ನು ತೋರಿಸಿ ತೀವ್ರ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಗೃಹ ಇಲಾಖೆಯ ರಾಜ್ಯ ಕಾರ್ಯದರ್ಶಿ ದಿಬ್ಯಶಂಕರ್ ಮಿಶ್ರಾ ಅವರನ್ನು ಪರಿಸ್ಥಿತಿ ನಿಗಾವಹಿಸಲು ನೇಮಿಸಿದ್ದಾರೆ.
ಪುರಿ ತೀರದಲ್ಲಿ ದೋಣಿಗಳು ವಿಶ್ರಾಂತಿ ಪಡೆಯುತ್ತಿರುವುದು
ಪುರಿ ತೀರದಲ್ಲಿ ದೋಣಿಗಳು ವಿಶ್ರಾಂತಿ ಪಡೆಯುತ್ತಿರುವುದು

ಭುವನೇಶ್ವರ: ಯಾಸ್ ಚಂಡಮಾರುತ ಒಡಿಶಾದ ಬಾಲಸೋರೆಗೆ ಅಪ್ಪಳಿಸಿ ಉತ್ತರ ಕರಾವಳಿ ಜಿಲ್ಲೆಗಳಲ್ಲಿ ತನ್ನ ಪ್ರಭಾವವನ್ನು ತೋರಿಸಿ ತೀವ್ರ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಗೃಹ ಇಲಾಖೆಯ ರಾಜ್ಯ ಕಾರ್ಯದರ್ಶಿ ದಿಬ್ಯಶಂಕರ್ ಮಿಶ್ರಾ ಅವರನ್ನು ಪರಿಸ್ಥಿತಿ ನಿಗಾವಹಿಸಲು ನೇಮಿಸಿದ್ದಾರೆ.

ಒಡಿಶಾ ಸರ್ಕಾರ ಕೇಂದ್ರಪಾರ, ಜಗತ್ಸಿಂಗ್ ಪುರ, ಬಲಸೊರೆ ಮತ್ತು ಭದ್ರಕ್ ಜಿಲ್ಲೆಗಳಲ್ಲಿನ ತೀರಗಳ ಜನರನ್ನು ಸಾಮೂಹಿಕವಾಗಿ ಸ್ಥಳಾಂತರ ಮಾಡುತ್ತಿದೆ.ಈ ಜಿಲ್ಲೆಗಳ ಸುಮಾರು 30 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಜಿಲ್ಲಾಡಳಿತಗಳು ಸ್ಥಳಾಂತರಿಸಿವೆ. 5,100ಕ್ಕೂ ಅಧಿಕ ಮಂದಿಯನ್ನು ಚಂಡಮಾರುತ ಆಶ್ರಯ ಕೇಂದ್ರಗಳಿಗೆ ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. ಭದ್ರಕ್ ಜಿಲ್ಲೆಯ 400ಕ್ಕೂ ಅಧಿಕ ಗ್ರಾಮಗಳಿಂದ ಸುಮಾರು 1 ಲಕ್ಷ ಮಂದಿಯನ್ನು ಗುರುತಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಸಾಮೂಹಿಕ ಸಿದ್ದತೆ ಮಾಡಿಕೊಂಡಿದೆ. 50ಕ್ಕೂ ಹೆಚ್ಚು ಎನ್ ಡಿಆರ್ ಎಫ್, 60 ಒಡಿಆರ್ ಎಎಫ್ ಮತ್ತು 180 ಅಗ್ನಿಶಾಮಕ ಸಿಬ್ಬಂದಿಗಳ ತಂಡಗಳನ್ನು ಈ ಜಿಲ್ಲೆಗಳ ಅಪಾಯದಲ್ಲಿರುವ ಪ್ರದೇಶಗಳಿಗೆ ನಿಯೋಜಿಸಲಾಗಿದೆ.

ಈ ಮಧ್ಯೆ, ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ತೀವ್ರವಾದ ಚಂಡಮಾರುತ ಬಿರುಗಾಳಿ ‘ಯಾಸ್’ ಕಳೆದ 6 ಗಂಟೆಗಳಲ್ಲಿ ಸುಮಾರು 10 ಕಿ.ಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಸಾಗಿದೆ. ಪ್ಯಾರಡೀಪ್‌ನ ಆಗ್ನೇಯಕ್ಕೆ 320 ಕಿ.ಮೀ, ಬಾಲಸೋರ್‌ನ ಆಗ್ನೇಯಕ್ಕೆ 430 ಕಿ.ಮೀ ಮತ್ತು ದಿಘಾದ ಆಗ್ನೇಯಕ್ಕೆ 420 ಕಿ.ಮೀನಲ್ಲಿ ಬೀಸಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇದು ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ, ಮುಂದಿನ 12 ಗಂಟೆಗಳಲ್ಲಿ ತೀವ್ರವಾದ ಚಂಡಮಾರುತ ಬಿರುಗಾಳಿಗೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಇದು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಮುಂದುವರಿಯುತ್ತದೆ, ಮತ್ತಷ್ಟು ತೀವ್ರಗೊಳ್ಳುತ್ತದೆ ಮತ್ತು ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಗಳ ಬಳಿಯಿರುವ ವಾಯುವ್ಯ ಬಂಗಾಳ ಕೊಲ್ಲಿಗೆ ತಲುಪುತ್ತದೆ.

ನಾಳೆ ಮಧ್ಯಾಹ್ನ, ತೀವ್ರ ಚಂಡಮಾರುತ ಬಿರುಗಾಳಿಯಂತೆ, ಬಾಲಾಸೋರ್ ಸುತ್ತಮುತ್ತಲಿನ ಪ್ಯಾರಡಿಪ್ ಮತ್ತು ಸಾಗರ್ ದ್ವೀಪದ ನಡುವೆ ಉತ್ತರ ಒಡಿಶಾ-ಪಶ್ಚಿಮ ಬಂಗಾಳ ತೀರಗಳನ್ನು ದಾಟಬಹುದು ಎಂದು ಹೇಳಲಾಗುತ್ತಿದೆ.

ನಾಲ್ಕು ಜಿಲ್ಲೆಗಳಿಗೆ ಕಟ್ಟೆಚ್ಚರ: ನಾಳೆ ಒಡಿಶಾದಲ್ಲಿ ಯಾಸ್ ಚಂಡಮಾರುತ ಇಳಿಯುವುದಕ್ಕೆ ಮುನ್ನ ಸರ್ಕಾರ ಕೆಂದ್ರಪರ, ಭದ್ರಕ, ಜಗತ್ಸಿಂಗ್ ಪುರ್ ಮತ್ತು ಬಾಲಸೋರೆ ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ಘೋಷಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಉಪ ನಿರ್ದೇಶಕ ಉಮಾಶಂಕರ್ ದಾಸ್, ಈ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಘೋಷಿಸಿದ್ದೇವೆ. 20 ಸೆಂಟಿಮೀಟರ್ ಗಿಂತಲೂ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com