ರೇಲ್ವೆಯಿಂದ ಕರ್ನಾಟಕಕ್ಕೆ 1063, ವಿವಿಧ ರಾಜ್ಯಗಳಿಗೆ 16 ಸಾವಿರ ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ

ಭಾರತೀಯ ರೈಲ್ವೆ ದಕ್ಷಿಣ ಭಾರತದ ರೈಲುಗಳ ಪೈಕಿ ತಮಿಳುನಾಡು ಮತ್ತು ಕರ್ನಾಟಕಕ್ಕೆ ತಲಾ 1000ಕ್ಕೂ ಅಧಿಕ ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಕ್ಸಿಜನ್ ಪೂರೈಸಿದೆ.
ಆಕ್ಸಿಜನ್ ಎಕ್ಸ್ ಪ್ರೆಸ್
ಆಕ್ಸಿಜನ್ ಎಕ್ಸ್ ಪ್ರೆಸ್

ನವದೆಹಲಿ: ಭಾರತೀಯ ರೈಲ್ವೆ ದಕ್ಷಿಣ ಭಾರತದ ರೈಲುಗಳ ಪೈಕಿ ತಮಿಳುನಾಡು ಮತ್ತು ಕರ್ನಾಟಕಕ್ಕೆ ತಲಾ 1000ಕ್ಕೂ ಅಧಿಕ ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಕ್ಸಿಜನ್ ಪೂರೈಸಿದೆ.

ಈವರೆಗೆ ಭಾರತೀಯ ರೈಲ್ವೆ ದೇಶಾದ್ಯಂತ ಹಲವು ರಾಜ್ಯಗಳಿಗೆ 977ಕ್ಕೂ ಅಧಿಕ ಟ್ಯಾಂಕರ್ ಗಳ ಮೂಲಕ 16023ಟನ್ ಆಕ್ಸಿಜನ್ ಪೂರೈಸಲಾಗಿದೆ. 

ಈ ನಡುವೆ ಗುಜರಾತಿನ ಜಾಮ್ ನಗರದಿಂದ 114 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ 12ನೇ ಆಕ್ಸಿಜನ್ ಎಕ್ಸ್ಪ್ರೆಸ್ ಮಂಗಳವಾರ ಬೆಂಗಳೂರಿಗೆ ತಲುಪಿದೆ. ಈ ಪ್ರಕಟಣೆ ಹೊರಬೀಳುವ ವೇಳೆಗೆ ಮಹಾರಾಷ್ಟ್ರಕ್ಕೆ 614 ಎಂಟಿ ಆಕ್ಸಿಜನ್, ಉತ್ತರ ಪ್ರದೇಶಕ್ಕೆ ಸುಮಾರು 3649 ಎಂಟಿ, ಮಧ್ಯಪ್ರದೇಶಕ್ಕೆ 633, ದೆಹಲಿಗೆ 4600 ಎಂಟಿ, ಹರಿಯಾಣಕ್ಕೆ 1759, ರಾಜಸ್ಥಾನಕ್ಕೆ 98, ಕರ್ನಾಟಕಕ್ಕೆ 1063, ಉತ್ತರಾಖಂಡಕ್ಕೆ 320, ತಮಿಳುನಾಡಿಗೆ 1024, ಆಂಧ್ರಪ್ರದೇಶಕ್ಕೆ 730, ಪಂಜಾಬ್ ಗೆ 225, ಕೇರಳಕ್ಕೆ 246, ತೆಲಂಗಾಣಕ್ಕೆ 976 ಮತ್ತು ಅಸ್ಸಾಂಗೆ 80 ಮೆ. ಟನ್ ಆಕ್ಸಿಜನ್ ತಲುಪಿಸಲಾಗಿದೆ.

ಈವರೆಗೆ 227 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ತಮ್ಮ ಪ್ರಯಾಣ ಪೂರ್ಣಗೊಳಿಸಿವೆ. ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ನಿನ್ನೆ ಒಂದೇ ದಿನ 1142 ಟನ್ ಅಧಿಕ ಆಕ್ಸಿಜನ್ ಪೂರೈಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com