ಮರಾಠಿ ನಟಿ ಸೊನಾಲಿ ಕುಲಕರ್ಣಿ ಮನೆಗೆ ನುಗ್ಗಿದ ಆಗಂತುಕ; ತಂದೆ ಮೇಲೆ ಚಾಕುವಿನಿಂದ ಹಲ್ಲೆ

ಖ್ಯಾತ ಮರಾಠಿ ನಟಿ ಸೊನಾಲಿ ಕುಲಕರ್ಣಿ ಮನೆಗೆ ಆಗಂತುಕನೋರ್ವ ನುಗ್ಗಿದ್ದು, ನಟಿಯ ತಂದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

Published: 25th May 2021 04:42 PM  |   Last Updated: 25th May 2021 05:02 PM   |  A+A-


Sonalee Kulkarni

ನಟಿ ಸೋನಾಲಿ ಕುಲಕರ್ಣಿ

Posted By : Srinivasamurthy VN
Source : PTI

ಪುಣೆ: ಖ್ಯಾತ ಮರಾಠಿ ನಟಿ ಸೊನಾಲಿ ಕುಲಕರ್ಣಿ ಮನೆಗೆ ಆಗಂತುಕನೋರ್ವ ನುಗ್ಗಿದ್ದು, ನಟಿಯ ತಂದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಮಹಾರಾಷ್ಟ್ರದ ಪುಣೆ ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಪುಣೆಯ ನಿಗ್ಡಿಯಲ್ಲಿರುವ ನಟಿ ಸೋನಾಲಿ ಕುಲಕರ್ಣಿ ಅವರ ಅಪಾರ್ಟ್ ಮೆಂಟ್ ನಲ್ಲಿ ದರೋಡೆ ಮಾಡಲು ಆತ ಯತ್ನಿಸಿದ್ದು, ಅಪಾರ್ಟ್ ಮೆಂಟ್ ನ ಮೇಲ್ಛಾವಣಿ ಮುಖಾಂತರವಾಗಿ ಆತ  ಮನೆಯೊಳಗೆ ನುಗ್ಗಿದ್ದಾನೆ. ಈ ವೇಳೆ ಕಳ್ಳನನ್ನು ಗಮನಿಸಿದ ನಟಿಯ ತಂದೆ ಆತನನ್ನು ಹಿಡಿಯಲು ಯತ್ನಿಸಿದ್ದು, ಈ ವೇಳೆ ಆತ ಚಾಕುವಿನಿದಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ನಟಿ ತಂದೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮನೆಯವರ ಕೂಗಾಟ ಕೇಳೆ ಎಚ್ಚೆತ್ತ ಅಕ್ಕಪಕ್ಕದ ಮನೆಯವರು  ಓಡಿ ಹೋಗುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಕಳ್ಳನನ್ನು 28 ವರ್ಷದ ಅಜಯ್ ಶೆಗ್ಟೆ ಎಂದು ಗುರುತಿಸಲಾಗಿದೆ.

ತಾನು ಸೋನಾಲಿ ಅಭಿಮಾನಿ ಎಂದು ಹೇಳಿಕೊಂಡಿದ್ದ ಆಗಂತುಕ:
ಇನ್ನು ಮನೆಗೆ ಬಂದು ನಟಿ ತಂದೆಯ ಕೈಗೆ ಸಿಕ್ಕ ಆತ ತಾನು ಸೋನಾಲಿ ಅಭಿಮಾನಿ ಎಂದು ಹೇಳಿಕೊಂಡಿದ್ದನಂತೆ. ಈ ವೇಳೆ ಮನೆಯವರು ಮನೆಯಿಂದ ಹೊರಗೆ ಹೋಗುವಂತೆ ಕೇಳಿಕೊಂಡರೂ ಆತ ಅವರ ಮಾತು ಕೇಳಿರಲಿಲ್ಲ. ಈ ವೇಳೆ ನಟಿ ತಂದೆ ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆತ  ತನ್ನಲ್ಲಿದ್ದ ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟರಲ್ಲಿ, ನೆರೆಹೊರೆಯವರು ಮತ್ತು ಇತರರು ಆ ವ್ಯಕ್ತಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಕೆಲವರು ಆತನ ಮೇಲೆ ಖಾರದ ಪುಡಿ ಎರಚಿ ಹಿಡಿದಿದ್ದಾರೆ.

ಇದಾದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಆತನನ್ನು ಬಂಧಿಸಿದ್ದಾರೆ. ಬಳಿಕ ಅತನನ್ನು ಪರಿಶೀಲಿಸಲಾಗಿದ್ದು, ಆತನ ಬಳಿ ಚಾಕು ಮತ್ತು ಮೆಣಸಿನ ಕಾಯಿ ಪುಡಿ ಇರುವುದು ಪತ್ತೆಯಾಗಿದೆ. ಅಲ್ಲದೆ ಆತ ಸೊನಾಲಿ ಅಭಿಮಾನಿ ಎಂಬ ಮಾತು ಕೂಡ ಶಂಕಿಸುವಂತಾಗಿದೆ. ನಿಜಕ್ಕೂ ಆತ ನಟಿಯನ್ನು  ನೋಡಲು ಬಂದಿದ್ದನೇ ಎಂಬುದು ಇದೀಗ ಪ್ರಶ್ನೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇತ್ತೀಚೆಗಷ್ಟೇ ನಟಿ ಸೊನಾಲಿ ಕುಲಕರ್ಣಿ ಅವರು ದುಬೈನಲ್ಲಿ ಉದ್ಯಮಿ ಕುನಾಲ್ ಬೆನೋದೇಕರ್ ​​ಅವರನ್ನು ವಿವಾಹವಾಗಿದ್ದರು.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp