ಕುಸ್ತಿಪಟು ಹತ್ಯೆ ಪ್ರಕರಣ: ವಿಚಾರಣೆ ವೇಳೆ ಸುಶೀಲ್ ಕುಮಾರ್ ಪದೇ ಪದೇ ಹೇಳಿಕೆ ಬದಲು
ಕುಸ್ತಿಪಟು ಸಾಗರ್ ಧನ್ಕರ್ ಅವರ ಹತ್ಯೆ ಪ್ರಕರಣದಲ್ಲಿ ದೆಹಲಿಯ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಬಂಧಿತ ಸುಶೀಲ್ ಕುಮಾರ್ ಹಾಗೂ ಆತನ ಸಹಚರ ಅಜಯ್ ಬಕ್ಕಾರ್ವಾಲ ಅವರನ್ನು ದೆಹಲಿಯ ಮೂರು ಪ್ರದೇಶಗಳಿಗೆ ಕರೆದೊಯ್ದಿದ್ದರು.
Published: 25th May 2021 03:09 PM | Last Updated: 25th May 2021 04:47 PM | A+A A-

ಸುಶೀಲ್ ಕುಮಾರ್ ಬಂಧನ (ಸಂಗ್ರಹ ಚಿತ್ರ)
ನವದೆಹಲಿ: ಕುಸ್ತಿಪಟು ಸಾಗರ್ ಧನ್ಕರ್ ಅವರ ಹತ್ಯೆ ಪ್ರಕರಣದಲ್ಲಿ ದೆಹಲಿಯ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಬಂಧಿತ ಸುಶೀಲ್ ಕುಮಾರ್ ಹಾಗೂ ಆತನ ಸಹಚರ ಅಜಯ್ ಬಕ್ಕಾರ್ವಾಲ ಅವರನ್ನು ದೆಹಲಿಯ ಮೂರು ಪ್ರದೇಶಗಳಿಗೆ ಕರೆದೊಯ್ದಿದ್ದರು.
ಹತ್ಯೆಯ ಘಟನೆಯ ಸಂಬಂಧ ಮಾಡಲ್ ಟೌನ್, ಶಲಿಮಾರ್ ಭಾಗ್, ಛತ್ರಸಲ್ ಸ್ಟೇಡಿಯಂ ಗಳಿಗೆ ಕರೆದೊಯ್ಯಲಾಗಿತ್ತು.
ದೆಹಲಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ವಿಚಾರಣೆಯ ವೇಳೆ ಕುಸ್ತಿಪಟುವನ್ನು ಕೇಳಿದ ಪ್ರಶ್ನೆಗೆ ಆತ ಮಾನಸಿಕ ಒತ್ತಡಕ್ಕೆ ಒಳಗಾದವನಂತೆ ತೋರುತ್ತಿದ್ದ. ಅಷ್ಟೇ ಅಲ್ಲದೇ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾವಣೆ ಮಾಡುತ್ತಿದ್ದ ಎಂದೂ ತಿಳಿದುಬಂದಿದೆ.
ಸುಶೀಲ್ ಕುಮಾರ್ ನಾಪತ್ತೆಯಾಗಿದ್ದಾಗ ಆತನಿಗೆ ಸಹಾಯ ಮಾಡಿದ್ದು ಯಾರು ಎಂಬುದೂ ಸೇರಿದಂತೆ ಕ್ರೈಮ್ ಬ್ರಾಂಚ್ ತಂಡ ಈ ಘಟನೆಯನ್ನು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಸುತ್ತಿದೆ.
ಘಟನೆಗೆ ಸಂಬಂಧಪಟ್ಟಂತೆ ಎರಡನೇ ಪ್ರದೇಶವಾಗಿರುವುದು ಮಾಡಲ್ ಟೌನ್ ನಲ್ಲಿರುವ ಫ್ಲಾಟ್. ಇಲ್ಲಿಂದಲೇ ಸುಶೀಲ್ ಸಾಗರ್ ಧನ್ಕರ್ ಹಾಗೂ ಸೋನು ಎಂಬುವವರನ್ನು ಸ್ಟೇಡಿಯಂ ಗೆ ಕರೆತಂದಿದ್ದ. ಮೂರನೇ ಪ್ರದೇಶ ಶಾಲಿಮರ್ ಭಾಗ್ ನಲ್ಲಿರುವ ಸುಶೀಲ್ ಕುಮಾರ್ ಫ್ಲಾಟ್ ಆಗಿದೆ.
ಈ ಮೂರೂ ಪ್ರದೇಶಗಳಿಗೆ ಪ್ರಮುಖ ಆರೋಪಿಗಳನ್ನು ಕರೆದೊಯ್ದು ವಿಚಾರಣೆ ನಡೆಸಲಾಯಿತು. ಆತನೊಂದಿಗೆ ಇನ್ನು ಯಾರು ಇದ್ದರು ಎಂಬ ಮಾಹಿತಿ ಪಡೆಯಲು ವಿಚಾರಣೆ ನಡೆಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಸುಶೀಲ್ ಕುಮಾರ್ ಸಾಗರ್ ಧನ್ಕರ್ ನ್ನು ಥಳಿಸುತ್ತಿರುವ ವಿಡಿಯೋವನ್ನೂ ಪೊಲೀಸರು ಪರಿಶೀಲಿಸಲು ಯತ್ನಿಸಿದ್ದಾರೆ.
"ಎರಡು ಗುಂಪುಗಳ ನಡುವೆ ಉಂಟಾಗಿದ್ದ ಘರ್ಷಣೆಯನ್ನು ತಡೆಯಲು ತಾವು ಮಧ್ಯಸ್ಥಿಕೆ ವಹಿಸುವುದಕ್ಕಾಗಿ ಛತ್ರಸಾಲ್ ಸ್ಟೇಡಿಯಂನಲ್ಲಿ ಇದ್ದಿದ್ದಾಗಿ ಸುಶೀಲ್ ಕುಮಾರ್ ಒಪ್ಪಿಕೊಂಡಿದ್ದಾರೆ. ಆದರೆ ಸಾಗರ್ ಧನ್ಕರ್ ನ್ನು ತಾವು ಕರೆತಂದಿರುವುದನ್ನು ಒಪ್ಪಿಲ್ಲ ಎಂದು ಪೊಲೀಸರು ಹೇಳಿದ್ದಾರೆ.