ಒಡಿಶಾ, ಬಂಗಾಳ ಕಡಲಿಗೆ ಅಪ್ಪಳಿಸಿದ ಬಳಿಕ ಯಾಸ್ ಚಂಡಮಾರುತದ ತೀವ್ರತೆ ಕುಸಿತ; ಮಳೆ ಮುಂದುವರಿಕೆ

ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕಡಲಿಗೆ ಅಪ್ಪಳಿಸಿದ ಬಳಿಕ ಯಾಸ್ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು, ಗುರುವಾರದ ವರೆಗೂ ಮಳೆ ಮುಂದುವರೆಯಲಿದೆ.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಯಾಸ್ ಭೂಸ್ಪರ್ಶಕ್ಕೂ ಮುನ್ನ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿ ಕಂಡುಬಂದ ದೃಶ್ಯ
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಯಾಸ್ ಭೂಸ್ಪರ್ಶಕ್ಕೂ ಮುನ್ನ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿ ಕಂಡುಬಂದ ದೃಶ್ಯ

ಬಾಲಾಸೋರ್: ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕಡಲಿಗೆ ಅಪ್ಪಳಿಸಿದ ಬಳಿಕ ಯಾಸ್ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು, ಗುರುವಾರದ ವರೆಗೂ ಮಳೆ ಮುಂದುವರೆಯಲಿದೆ.

ಯಾಸ್ ಚಂಡಮಾರುತ ಎರಡು ಕಡಲ ತೀರದ ನಗರಗಳಿಗೆ ಪ್ರತಿ ಗಂಟೆಗೆ 130-145 ಕಿ.ಮೀ ವೇಗದಲ್ಲಿ ಅಪ್ಪಳಿಸಿತ್ತು.

ಚಂಡಮಾರುತ ಭೂಸ್ಪರ್ಶ (ಲ್ಯಾಂಡ್ ಫಾಲ್) ಪ್ರಕ್ರಿಯೆಯ ಹಂತವನ್ನು ದಾಟಿದ್ದು, ಮೀನುಗಾರರು ಇನ್ನೂ ಒಂದು ದಿನ ಕಡಲ ಬಳಿ ಹೋಗದಂತೆ ಹವಾಮಾನ ಇಲಾಖೆ (ಐಎಂಡಿ) ಸಲಹೆ ನೀಡಿದ್ದು, ಮುಂದಿನ 24 ಗಂಟೆಗಳು (ಗುರುವಾರದವರೆಗೂ) ಮಳೆಯಾಗುವ ಸಾಧ್ಯತೆ ಇದೆ ಎಂದು ಭುವನೇಶ್ವರದ ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ಹೇಳಿದ್ದಾರೆ.

ತೀವ್ರ ಚಂಡಮಾರುತ ಎಂದು ಪರಿಗಣಿಸಲಾಗಿದ್ದ ಯಾಸ್ ಒಡಿಶಾದ ಭದ್ರಕ್ ಜಿಲ್ಲೆಯ ಧಮ್ರಾದ ಉತ್ತರ ಭಾಗದ ಕಡಲ ತೀರಕ್ಕೆ ಅಪ್ಪಳಿಸಿತ್ತು ಹಾಗೂ ಪ್ರತಿ ಗಂಟೆಗೆ 50 ಕಿ.ಮೀ ವೇಗದಲ್ಲಿ ದಕ್ಷಿಣ ಬಾಲಸೋರ್ ಗೆ ಬೆಳಿಗ್ಗೆ 9 ಗಂಟೆಗೆ ಪ್ರವೇಶಿಸಿತ್ತು. ಭೂಸ್ಪರ್ಶ ಪ್ರಕ್ರಿಯೆ ಮಧ್ಯಾಹ್ನ 1.30 ಕ್ಕೆ ಪೂರ್ಣಗೊಂಡಿದೆ ಎಂದು ಐಎಂಡಿ ಹೇಳಿದೆ.

"ಚಂಡಮಾರುತದ ಪರಿಣಾಮವಾಗಿ ಸಮುದ್ರದ ನೀರು ಬಾಲಾಸೋರ್ ಜಿಲ್ಲೆಯ ಬಹಾನಗ ಹಾಗೂ ರೆಮುನಾ ಗ್ರಾಮಗಳಿಗೆ ಹಾಗೂ ಭದ್ರಕ್ ಜಿಲ್ಲೆಯ ಧಮ್ರಾ, ಬಾಸುದೇವ್ ಪುರ ಗ್ರಾಮಗಳನ್ನು ಪ್ರವೇಶಿಸಿವೆ" ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿಕೆ ಜೆನಾ ತಿಳಿಸಿದ್ದಾರೆ.

ಸಮುದ್ರದ ನೀರನ್ನು ಗ್ರಾಮಗಳಿಂದ ಹೊರಹಾಕುವುದಕ್ಕೆ ಜಿಲ್ಲಾಡಳಿತ ಸ್ಥಳೀಯರಿಗೆ ಸಹಕರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಯೂರ್ ಭಂಜ್ ಜಿಲ್ಲೆಯ ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನದಲ್ಲಿ ಮಳೆ ಉಂಟಾಗಿರುವುದು ಬುಧಬಲಂಗಾ ನದಿಯಲ್ಲಿ ಪ್ರವಾಹದ ಭೀತಿಯನ್ನುಂಟು ಮಾಡಿದೆ.

ನದಿಯ ನಿನ ಮಟ್ಟ 21 ಮೀಟರ್ ನಷ್ಟಿದ್ದು 27 ಮೀಟರ್ ಅಪಾಯದ ಮಟ್ಟವಾಗಿದೆ. ಮಯೂರ್ ಭಂಜ್ ಜಿಲ್ಲೆಯಲ್ಲಿ ಅಪಾಯವಿರುವ ಪ್ರದೇಶಗಳಿಂದ ಜನರನ್ನು ಬೆರೆಡೆಗೆ ಸ್ಥಳಾಂತರಿಸುವ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com