ಮಕ್ಕಳಿಗಾಗಿ ಉಚಿತ ಕೋವಿಡ್-19 ಕೇರ್ ಕೇಂದ್ರಗಳ ಸ್ಥಾಪನೆ

ಮಕ್ಕಳಿಗಾಗಿ ಉಚಿತ ಕೋವಿಡ್-19 ಕೇರ್ ಕೇಂದ್ರಗಳನ್ನು ಪ್ರಾರಂಭಿಸಲು ಸ್ವಯಂ ಸೇವಕ ಹಾಗೂ ನಾಗರಿಕ ಸಂಘಟನೆಗಳು ಮುಂದಾಗಿವೆ. 
ಮಕ್ಕಳಿಗಾಗಿ ಡ್ರೀಮ್ ಇಂಡಿಯಾ ನೆಟ್ವರ್ಕ್ ಪ್ರಾರಂಭಿಸಿರುವ ಉಚಿತ ಕೋವಿಡ್-19 ಕೇರ್ ಕೇಂದ್ರಗಳು
ಮಕ್ಕಳಿಗಾಗಿ ಡ್ರೀಮ್ ಇಂಡಿಯಾ ನೆಟ್ವರ್ಕ್ ಪ್ರಾರಂಭಿಸಿರುವ ಉಚಿತ ಕೋವಿಡ್-19 ಕೇರ್ ಕೇಂದ್ರಗಳು

ಬೆಂಗಳೂರು: ಮಕ್ಕಳಿಗಾಗಿ ಉಚಿತ ಕೋವಿಡ್-19 ಕೇರ್ ಕೇಂದ್ರಗಳನ್ನು ಪ್ರಾರಂಭಿಸಲು ಸ್ವಯಂ ಸೇವಕ ಹಾಗೂ ನಾಗರಿಕ ಸಂಘಟನೆಗಳು ಮುಂದಾಗಿವೆ. 

ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿ ಪ್ರಮುಖ ಎರಡು ಪ್ರಮುಖ ಮಕ್ಕಳ ಮತ್ತು ಮದರ್ ಕೇರ್ ಆಸ್ಪತ್ರೆಗಳು ಮಕ್ಕಳಿಗಾಗಿ ಉಚಿತ ಕೋವಿಡ್-19 ಕೇರ್ ಕೇಂದ್ರಗಳನ್ನು ಪ್ರಾರಂಭಿಸಿವೆ. ಕೋವಿಡ್-19 ಕಾರಣದಿಂದಾಗಿ ಅನಾಥರಾಗಿರುವ ಮಕ್ಕಳು ಅಥವಾ ಕೋವಿಡ್-19 ಸೋಂಕಿಗೆ  ಗುರಿಯಾಗಿರುವವರ ಆರೈಕೆಯನ್ನು ಈ ಕೋವಿಡ್-19 ಕೇರ್ ಕೇಂದ್ರಗಳು ನೋಡಿಕೊಳ್ಳಲಿದೆ.

ಡ್ರೀಮ್ ಇಂಡಿಯಾ ನೆಟ್ವರ್ಕ್ (ಡಿಐಎನ್) ವೈಟ್ ಫೀಲ್ಡ್ ರೈಸಿಂಗ್, ಮದರ್ ಹುಡ್ ಹಾಗೂ ರೈನ್ ಬೋ ಆಸ್ಪತ್ರೆಗಳು ಸಂಪೂರ್ಣ ಸುಸಜ್ಜಿತ ಸಿಸಿಸಿಗಳನ್ನು ಕೆ.ಆರ್ ಪುರಂ ನ ಕಿತ್ತಗನೂರ್ ನಲ್ಲಿ 6-18 ವರ್ಷದ ಮಕ್ಕಳಿಗಾಗಿ ತೆರೆದಿವೆ. " ಇಂದು ನಾವು 11 ಮಕ್ಕಳನ್ನು ಕೆ.ಆರ್ ಪುರಂ ನಲ್ಲಿರುವ ತಂಬುಚೆಟ್ಟಿಪಾಳ್ಯದ ಕ್ವಾರಂಟೈನ್ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದೇವೆ. ಸಿಸಿಸಿಗೆ ದಾಖಲಾಗಿದ್ದ ಈ ಮಕ್ಕಳಿಗೆ ಈಗ ಕೋವಿಡ್-19 ನೆಗೆಟೀವ್ ವರದಿ ಬಂದಿದೆ" ಎಂದು ಡಿಐಎನ್ ನ ನಿರ್ದೇಶಕ ಎಡ್ವರ್ಡ್ ಥಾಮಸ್ ಹೇಳಿದ್ದಾರೆ.

ಕೋವಿಡ್ ಕೇರ್ ಕೇಂದ್ರ ಸುಸಜ್ಜಿತವಾಗಿದ್ದು, ನುರಿತ ನರ್ಸ್ ಗಳು ವೈದ್ಯರು, 24/7 ತುರ್ತು ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಆಂಬುಲೆನ್ಸ್ ಗಳಿವೆ. ಕೋವಿಡ್-19 ಸೋಂಕಿತ, ಸಂತ್ರಸ್ತ ಮಕ್ಕಳ ಚಿಕಿತ್ಸೆ, ಆರೈಕೆಗಾಗಿ ನೇಮಕ ಮಾಡಲಾಗಿರುವ ಐಎಎಸ್ ಅಧಿಕಾರಿ ಮೋಹನ್ ರಾಜ್ ಕೋವಿಡ್-19 ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಮಾತನಾಡಿದ್ದಾರೆ. ಕೋವಿಡ್ ಕೇರ್ ಕೇಂದ್ರವನ್ನು 7306230034/9110829548 or 1098 – ಮೂಲಕ ಸಂಪರ್ಕಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com