ಸ್ಪುಟ್ನಿಕ್ V ತಯಾರಕರಿಂದ ದೆಹಲಿಗೆ ಲಸಿಕೆ ಸರಬರಾಜು: ಕೇಜ್ರಿವಾಲ್

ಕೋವಿಡ್-19 ವಿರುದ್ಧದ ರಷ್ಯಾದ ಲಸಿಕೆ ಸ್ಪುಟ್ನಿಕ್ V ನ್ನು ದೆಹಲಿಗೆ ಸರಬರಾಜು ಮಾಡುವುದಕ್ಕೆ ಉತ್ಪಾದಕರು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: ಕೋವಿಡ್-19 ವಿರುದ್ಧದ ರಷ್ಯಾದ ಲಸಿಕೆ ಸ್ಪುಟ್ನಿಕ್ V ನ್ನು ದೆಹಲಿಗೆ ಸರಬರಾಜು ಮಾಡುವುದಕ್ಕೆ ಉತ್ಪಾದಕರು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ರಷ್ಯಾದ ಉತ್ಪಾದಕ ಸಂಸ್ಥೆ ದೆಹಲಿಗೆ ಲಸಿಕೆ ಪೂರೈಕೆ ಮಾಡುವುದಕ್ಕೆ ಒಪ್ಪಿಗೆ ನೀಡಿದೆ, ಆದರೆ ಪ್ರಮಾಣವನ್ನು ಇನ್ನಷ್ಟೇ ನಿರ್ಧರಿಬೇಕಿದೆ ಎಂದು ಹೇಳಿದ್ದಾರೆ.
 
ದೆಹಲಿಯಲ್ಲಿರುವ ಬ್ಲಾಕ್ ಫಂಗಸ್ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡಿರುವ ದೆಹಲಿ ಸಿಎಂ ಕೇಜ್ರಿವಾಲ್, ರಾಷ್ಟ್ರ ರಾಜಧಾನಿಯಲ್ಲಿ ಈ ವರೆಗೂ 620 ಬ್ಲಾಕ್ ಫಂಗಸ್ ಪ್ರಕರಣಗಳಿವೆ. ಆದರೆ ಇದರ ವಿರುದ್ಧದ ಚಿಕಿತ್ಸೆಗೆ ಬಳಕೆ ಮಾಡಲಾಗುವ ಆಂಫೊಟೆರಿಸಿನ್-ಬಿ ಚುಚ್ಚುಮದ್ದು ಕೊರತೆ ಉಂಟಾಗಿದೆ ಎಂದು ಸಿಎಂ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ಸ್ಪುಟ್ನಿಕ್ ತಯಾರಕರ ಜೊತೆಗೆ ಮಾತುಕತೆ ಮುಂದುವರೆದಿದೆ. ಅವರು ಲಸಿಕೆ ನೀಡುವುದಕ್ಕೆ ಒಪ್ಪಿದ್ದಾರೆ, ಆದರೆ ಲಸಿಕೆಯ ಪ್ರಮಾಣದ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ, ಮಾಡರ್ನಾ ಮತ್ತು ಫಿಜರ್ ಮಕ್ಕಳಿಗೆ ನೀಡಲು ಯೋಗ್ಯವಾದ ಲಸಿಕೆಯಾಗಿದ್ದು, ಕೇಂದ್ರ ಸರ್ಕಾರ ಮಕ್ಕಳಿಗೆ ನೀಡುವುದಕ್ಕೆ ಈ ಲಸಿಕೆಗಳನ್ನು ಶೀಘ್ರವೇ ಸಂಗ್ರಹಿಸಬೇಕಿದೆ ಎಂದು ದೆಹಲಿ ಸಿಎಂ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com