ದೇಶದಲ್ಲಿನ ಕೋವಿಡ್ ಸಾವುಗಳ ಕುರಿತ ನ್ಯೂಯಾರ್ಕ್ ಟೈಮ್ಸ್ ವರದಿ ಆಧಾರ ರಹಿತ, ತಪ್ಪು: ಕೇಂದ್ರ ಸರ್ಕಾರ

ಕಳೆದ ವಾರದಿಂದಲೂ 24 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳು ಕುಸಿತದೊಂದಿಗೆ ಕಳೆದ 20 ದಿನಗಳಲ್ಲಿ ದೇಶದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಕುಸಿತವಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ವಾರದಿಂದಲೂ 24 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳು ಕುಸಿತದೊಂದಿಗೆ ಕಳೆದ 20 ದಿನಗಳಲ್ಲಿ ದೇಶದಲ್ಲಿ  ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಕುಸಿತವಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ. ದೇಶದಲ್ಲಿ ಕೋವಿಡ್-19 ಎರಡನೇ ಅಲೆಯೂ ಕುಸಿಯುತ್ತಿರುವುದನ್ನು  ಉಲ್ಲೇಖಿಸಿದೆ.

ದೇಶದಲ್ಲಿನ ಕೋವಿಡ್-19 ಸಾವಿನ ಅಂದಾಜು ಕುರಿತ ಇತ್ತೀಚಿನ ನ್ಯೂಯಾರ್ಕ್ ಟೈಮ್ಸ್ ವರದಿ ಸಂಪೂರ್ಣವಾಗಿ ನಿರಾಧಾರ ಮತ್ತು ತಪ್ಪಿನಿಂದ ಕೂಡಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಯಾವುದೇ ಪುರಾವೆಗಳು ಬೆಂಬಲಿಸುವುದಿಲ್ಲ ಮತ್ತು ವಿಕೃತ ಅಂದಾಜುಗಳ ಮೇಲಿನ ವರದಿ ಇದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ನಾವು ಕೋವಿಡ್-19 ಎರಡನೇ ಅಲೆಯ ಕುಸಿತದಲ್ಲಿದ್ದು, ನಿರ್ಬಂಧಗಳು ಗಮನಾರ್ಹವಾಗಿ ಸಡಿಲಗೊಂಡರೂ ಕುಸಿತ ಇರಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಸಚಿವಾಲಯ ಹೇಳಿದೆ.

ಕಳೆದ ವಾರದಿಂದಲೂ 24 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳು ಕುಸಿತದೊಂದಿಗೆ ಕಳೆದ 20 ದಿನಗಳಲ್ಲಿ ದೇಶದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ ಕುಸಿತವಾಗಿದೆ. ಕೋವಿಡ್-19 ಪರೀಕ್ಷೆಯಲ್ಲಿ ಹೆಚ್ಚಳವಾಗಿದ್ದು, ವಾರದ ಕೋವಿಡ್-19 ಪಾಸಿಟಿವಿಟಿ ದರದಲ್ಲಿ ಕಳೆದ ಮೂರು ವಾರಗಳಿಂದಲೂ ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಬೇರೆ ಕೋವಿಡ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡರೆ, ಯಾವುದೇ ಗಮನಾರ್ಹ ಪ್ರತಿಕೂಲ ಪರಿಣಾಮ ಅಸಂಭವವಾಗಿದೆ, ಆದರೆ ಈ ನಿಟ್ಟಿನಲ್ಲಿ  ನಮಗೆ ಹೆಚ್ಚಿನ ಪರಿಶೀಲನೆ ಮತ್ತು ತಿಳುವಳಿಕೆಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com