ಪೊಲೀಸರ ಬೆದರಿಕೆ ತಂತ್ರಗಳು ಆತಂಕಕಾರಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಟ್ವಿಟರ್ ಕಳವಳ

ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ, ಕಾಂಗ್ರೆಸ್ ಪಕ್ಷದ್ದು ಎನ್ನಲಾದ ಕೋವಿಡ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟರ್ ಕಚೇರಿಗೆ ಮೇಲೆ ದೆಹಲಿ ಪೊಲೀಸರ ದಾಳಿಯನ್ನು ಸಾಮಾಜಿಕ ಜಾಲತಾಣ ಸಂಸ್ಥೆ ಆತಂಕಕಾರಿ ಎಂದು ವಿಶ್ಲೇಷಿಸಿದೆ. 
ಟ್ವಿಟರ್
ಟ್ವಿಟರ್

ನವದೆಹಲಿ: ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ, ಕಾಂಗ್ರೆಸ್ ಪಕ್ಷದ್ದು ಎನ್ನಲಾದ ಕೋವಿಡ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟರ್ ಕಚೇರಿಗೆ ಮೇಲೆ ದೆಹಲಿ ಪೊಲೀಸರ ದಾಳಿಯನ್ನು ಸಾಮಾಜಿಕ ಜಾಲತಾಣ ಸಂಸ್ಥೆ ಆತಂಕಕಾರಿ ಎಂದು ವಿಶ್ಲೇಷಿಸಿದೆ. 

ದೆಹಲಿ ಪೊಲೀಸರ ನಡೆಯನ್ನು ಬೆದರಿಕೆಯ ತಂತ್ರ ಎಂದು ಹೇಳಿರುವ ಟ್ವಿಟರ್, ಈ ರೀತೀಯ ಬೆದರಿಕೆ ತಂತ್ರಗಳು ಆತಂಕಕಾರಿಯಾಗಿವೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯಕಾರಿ ಎಂದು ಟ್ವಿಟರ್ ಹೇಳಿದೆ. 

ಕಾಂಗ್ರೆಸ್ ನ ಕೋವಿಡ್ ಟೂಲ್ ಕಿಟ್ ನ್ನು ಹಂಚಿಕೊಂಡಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರ ಟ್ವೀಟ್ ನ್ನು ಟ್ವಿಟರ್ ತಿರುಚಿಲಾಗಿರುವ ಮೀಡಿಯಾ ಎಂದು ಹೇಳಿತ್ತು. ಇದೇ ವೇಳೆ ತಾನು ಭಾರತದಲ್ಲಿ ಸೇವೆಯನ್ನು ಮುಂದುವರೆಸುವುದಕ್ಕಾಗಿ ಅಗತ್ಯವಿರುವ ಕಾನೂನುಗಳನ್ನು ಪಾಲಿಸುವುದನ್ನು ಶ್ರಮಿಸುವುದಾಗಿ ಹೇಳಿದೆ. ಅದು ಉಚಿತ, ಮುಕ್ತ ಸಾರ್ವಜನಿಕ ಸಂಭಾಷಣೆಯನ್ನು ತಡೆಯುವ ನಿಟ್ಟಿನಲ್ಲಿರುವ ಐಟಿ ನಿಯಮಗಳಲ್ಲಿ ಬದಲಾವಣೆಗಳನ್ನು ಬೆಂಬಲಿಸುವುದಾಗಿ ಟ್ವಿಟರ್ ಹೇಳಿದೆ. 

ಈಗ ಭಾರತದಲ್ಲಿರುವ, ನಮ್ಮ ಉದ್ಯೋಗಿಗಳೆಡೆಗೆ ನಡೆದ ಘಟನೆಗಳ ಬಗ್ಗೆ ಆತಂಕ ಮೂಡಿದೆ. ಈ ಬೆಳವಣಿಗೆಗಳು ಆತಂಕಕಾರಿಯಾಗಿದ್ದು ನಾವು ಸೇವೆಗಳನ್ನು ಒದಗಿಸುವ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಟ್ವಿಟರ್ ಹೇಳಿದೆ. 

ಪೊಲೀಸರ ಬೆದರಿಕೆ ತಂತ್ರಗಳು ಹಾಗೂ ಭಾರತದ ಹೊಸ ಐಟಿ ನಿಯಮಗಳ ಬಗ್ಗೆ ನಾವು ಹಾಗೂ ಭಾರತದಾದ್ಯಂತ, ವಿಶ್ವಾದ್ಯಂತ ಇರುವ ನಾಗರಿಕ ಸಮಾಜ ಆತಂಕಕ್ಕೊಳಗಾಗಿದ್ದೇವೆ ಎಂದು ಟ್ವಿಟರ್ ಹೊಸ ಐಟಿ ಕಾನೂನುಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ. 

ಸೋಮವಾರದಂದು ಸಂಜೆ ದೆಹಲಿಯ ಇಬ್ಬರು ಪೊಲೀಸರನ್ನೊಳಗೊಂಡ ತಂಡ ಗುರಂಗಾವ್ ನ ಟ್ವಿಟರ್ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿತ್ತು. 

ವಾಡಿಕೆಯ ಪ್ರಕ್ರಿಯೆ ಭಾಗವಾಗಿ ಟ್ವಿಟರ್ ಗೆ ನೋಟಿಸ್ ಒಂದನ್ನು ನೀಡಲು ಅದರ ಎರಡು ಕಡೆಗಳಲ್ಲಿನ ಕಚೇರಿಗೆ ದೆಹಲಿ ಪೊಲೀಸ್ ತಂಡ ತೆರಳಿತ್ತು. ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಬಹಳ ಅಸ್ಪಷ್ಟವಾಗಿ ಪ್ರತಿಕ್ರಿಯಿಸಿರುವುದರಿಂದ ಸರಿಯಾದ ವ್ಯಕ್ತಿ ಎಂಬುದನ್ನು ತಿಳಿಯಲು ಇದು ಅಗತ್ಯವಾಗಿದೆ ಎಂದು ದೆಹಲಿ ಪೊಲೀಸ್ ಪಿಆರ್ ಒ ಚಿನ್ಮೋಯ್ ಬಿಸ್ವಾಲ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com