ಬಲೂನ್ ಕಟ್ಟಿ ಸಾಕು ನಾಯಿಯನ್ನು ಹಾರಿಸಿದ್ದ ದೆಹಲಿಯ ಯೂಟ್ಯೂಬರ್ ಬಂಧನ!

ಬಲೂನ್ ಕಟ್ಟಿ ತನ್ನ ಸಾಕು ನಾಯಿಯನ್ನು ಹಾರಿಸಿ ವಿಡಿಯೋ ಮಾಡಿದ್ದ ದೆಹಲಿಯ ಯುಟ್ಯೂಬರ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 
ವಿಡಿಯೋ ದೃಶ್ಯ
ವಿಡಿಯೋ ದೃಶ್ಯ

ನವದೆಹಲಿ: ಬಲೂನ್ ಕಟ್ಟಿ ತನ್ನ ಸಾಕು ನಾಯಿಯನ್ನು ಹಾರಿಸಿ ವಿಡಿಯೋ ಮಾಡಿದ್ದ ದೆಹಲಿಯ ಯುಟ್ಯೂಬರ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ನಾಯಿಯ ಬೆನ್ನಿಗೆ ಬಲೂನ್ ಗಳನ್ನು ಕಟ್ಟಿ ಅಪಾರ್ಟ್ ಮೆಂಟ್ ಮೇಲಿನಿಂದ ಎಸೆಯಲಾಗಿದ್ದು ಕೆಳಗೆ ಯೂಟ್ಯೂಬರ್ ಗೌರವ್ ಶರ್ಮಾ ತಾಯಿ ಹುರಿದುಂಬಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ವಿಡಿಯೋ ವೈರಲ್ ಆಗಿ ತೀವ್ರ ಟೀಕೆಗಳು ಎದುರಾದ ನಂತರ ಗೌರವ್ ಶರ್ಮಾ ವಿಡಿಯೋವನ್ನು ಡಿಲೀಟ್ ಮಾಡಿ, ನಂತರ ಮತ್ತೊಂದು ವಿಡಿಯೋ ಮಾಡಿ ಕ್ಷಮೆಯಾಚಿಸಿದ್ದಾನೆ.

'ಪೀಪಲ್ ಫಾರ್ ಅನಿಮಲ್ಸ್ ಸೊಸೈಟಿಗೆ' ಸೇರಿದ ಗೌರವ್ ಗುಪ್ತಾ ಎಂಬುವರು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ  ಗೌರವ್ ಶರ್ಮಾನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಪೊಲೀಸ್ ಉಪ ಆಯುಕ್ತ (ಡಿಸಿಪಿ) (ದಕ್ಷಿಣ) ಅತುಲ್ ಠಾಕೂರ್ ಹೇಳಿದ್ದಾರೆ.

'ಗೌರವ್ ಶರ್ಮಾ ಎಂಬಾತ ತಮ್ಮ ಸಾಕು ನಾಯಿಯನ್ನು ಹೀಲಿಯಂ ಬಲೂನ್ ಗಳಿಗೆ ಕಟ್ಟಿ ಹಾರಿಸಿರುವ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ. ಆ ಮೂಲಕ ನಾಯಿಯನ್ನು ಗಾಳಿಯಲ್ಲಿ ಹಾರಿಸಿ ಅದರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಲೈವ್ ವೀಡಿಯೊವನ್ನು ಮೇ 21ರಂದು ಚಿತ್ರೀಕರಿಸಲಾಗಿದೆ "ಎಂದು ಠಾಕೂರ್ ಹೇಳಿದರು.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 188 ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸೆಕ್ಷನ್ 11(1) (ಎ) ಮತ್ತು ಸೆಕ್ಷನ್ 11(1) (ಡಿ) ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಲ್ವಿಯಾ ನಗರ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com