ಅಲೋಪತಿ ಕುರಿತು ತಪ್ಪು ಪ್ರತಿಪಾದನೆ: ರಾಮ್ ದೇವ್ ವಿರುದ್ಧ ಎಐಎಂ ಪೊಲೀಸ್ ದೂರು ದಾಖಲು

 ಅಲೋಪತಿ ಕುರಿತು ಅಪ್ರಾಮಾಣಿಕ ಮತ್ತು ತಪ್ಪಾದ ಪ್ರತಿಪಾದನೆ ಕುರಿತಂತೆ ಯೋಗ ಗುರು ರಾಮ್ ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಗುರುವಾರ ಪೊಲೀಸ್ ದೂರು ದಾಖಲಿಸಿದೆ.
ಯೋಗಗುರು ರಾಮ್ ದೇವ್
ಯೋಗಗುರು ರಾಮ್ ದೇವ್

ನವದೆಹಲಿ: ಅಲೋಪತಿ ಕುರಿತು ಅಪ್ರಾಮಾಣಿಕ ಮತ್ತು ತಪ್ಪಾದ ಪ್ರತಿಪಾದನೆ ಕುರಿತಂತೆ ಯೋಗ ಗುರು ರಾಮ್ ದೇವ್
 ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಗುರುವಾರ ಪೊಲೀಸ್ ದೂರು ದಾಖಲಿಸಿದೆ.

ಐಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವೈದ್ಯಕೀಯ ಸಂಘ, ಅನುಮೋದಿತ ಔಷಧ ಮತ್ತು ವಿಧಾನದ ಮೂಲಕ
 ಕೋವಿಡ್-19 ರೋಗಿಗಳಿಗೆ ನೀಡಲಾದ ಚಿಕಿತ್ಸೆ ಬಗ್ಗೆ ರಾಮ್ ದೇವ್ ಉದ್ದೇಶಪೂರ್ವಕವಾಗಿ ನಿರಾಧಾರ ಮತ್ತು ತಪ್ಪಾದ ದುರುದ್ದೇಶಪೂರಿತ ಮಾಹಿತಿಯನ್ನು ಹಬ್ಬಿಸಿದ್ದಾರೆ ಎಂದು ಹೇಳಿದೆ. 

ದೂರನ್ನು ಸ್ವೀಕರಿಸಲಾಗಿದ್ದು, ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು
ಹೇಳಿದ್ದಾರೆ. ಕೋವಿಡ್ -19 ವೈರಸ್ ಗೆ ಅಲೋಪತಿ ಔಷಧ ಮತ್ತಿತರ ಅನುಮೋದಿತ ಆಧುನಿಕ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೋವಿಡ್ 19 ಪರಿಸ್ಥಿತಿ ಅನುಕೂಲ ಮಾಡಿಕೊಂಡ ರಾಮ್ ದೇವ್, ಸಾರ್ವಜನಿಕ ವೇದಿಕೆಯಲ್ಲಿ ಅಪ್ರಾಮಾಣಿಕ ಮತ್ತು ದುರುದ್ದೇಶಿತ ಪೂರಿತ ಮಾಹಿತಿ ನೀಡಿದ್ದಾರೆ ಎಂದು ಐಎಂಎ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದೆ.

ಲಸಿಕೆ ಬಗ್ಗೆ ದುರುದ್ದೇಶಪೂರಿತ ಪ್ರಚಾರದ ಆರೋಪ ಮತ್ತು ಕೋವಿಡ್-19 ಚಿಕಿತ್ಸೆಗಾಗಿ ಸರ್ಕಾರದ ಶಿಷ್ಟಾಚಾರ ಸವಾಲು ಆರೋಪದ ಮೇರೆಗೆ ರಾಮ್ ದೇವ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಐಎಂಎ ಪ್ರಧಾನಿ ಮೋದಿ ಅವರಿಗೆ ಈ ಹಿಂದೆ ಪತ್ರ ಬರೆದಿತ್ತು. 

ಅಲೋಪತಿ ಕುರಿತ ಅಪಪ್ರಚಾರಕ್ಕಾಗಿ ರಾಮ್ ದೇವ್ ಅವರಿಗೆ ಭಾರತೀಯ ವೈದ್ಯಕೀಯ ಸಂಘ ಮಾನನಷ್ಟ ನೋಟಿಸ್ ಕಳುಹಿಸಿ 15 ದಿನಗಳೊಳಗೆ ಕ್ಷಮೆ ಕೇಳುವಂತೆ ಒತ್ತಾಯಿಸಿತ್ತು, ಕ್ಷಮೆ ಕೇಳದಿದ್ದರೆ 1 ಸಾವಿರ ಕೋಟಿ ಪರಿಹಾರಕ್ಕೆ ಬೇಡಿಕೆ ಇಡುವುದಾಗಿ ಹೇಳಿತ್ತು. ಭಾನುವಾರ ರಾಮ್ ದೇವ್ ಒತ್ತಾಯಪೂರ್ವಕವಾಗಿ ಹೇಳಿಕೆಯನ್ನು ಹಿಂಪಡೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com