ಕೋವಿಡ್ ನಮ್ಮೊಂದಿಗೆ ಇನ್ನೆಷ್ಟು ಕಾಲ ಇರಲಿದೆ?: ತಜ್ಞರು ನೀಡಿದ ಉತ್ತರ ಹೀಗಿದೆ..

ಕೋವಿಡ್-19 ಇನ್ನೆಷ್ಟು ಕಾಲ ನಮ್ಮೊಂದಿಗೆ ಇರಲಿದೆ ಎಂಬುದಕ್ಕೆ ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ನಿರ್ದೇಶಕ ಪ್ರೊಫೆಸರ್ ಜಿವಿಎಸ್ ಮೂರ್ತಿ ಮಾಹಿತಿ ನೀಡಿದ್ದಾರೆ.
ಕೋವಿಡ್-19 (ಸಾಂಕೇತಿಕ ಚಿತ್ರ)
ಕೋವಿಡ್-19 (ಸಾಂಕೇತಿಕ ಚಿತ್ರ)

ನವದೆಹಲಿ: ಕೋವಿಡ್-19 ಇನ್ನೆಷ್ಟು ಕಾಲ ನಮ್ಮೊಂದಿಗೆ ಇರಲಿದೆ ಎಂಬುದಕ್ಕೆ ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ನಿರ್ದೇಶಕ ಪ್ರೊಫೆಸರ್ ಜಿವಿಎಸ್ ಮೂರ್ತಿ ಮಾಹಿತಿ ನೀಡಿದ್ದಾರೆ.

ಶೀತಜ್ವರದ ರೀತಿಯಲ್ಲಿ ಕೋವಿಡ್-19 ಪೀಳಿಗೆಗಗಳ ವರೆಗೆ ನಮ್ಮೊಂದಿಗೇ ಇರಲಿದೆ, ಬೇರೆ ಬೇರೆ ರಾಜ್ಯಗಳು ನೀಡಿರುವ ಮಾಹಿತಿಯ ಪ್ರಕಾರ ಜೂನ್ ತಿಂಗಳಾಂತ್ಯದ ವೇಳೆಗೆ ಕೋವಿಡ್-19 ಪ್ರಕರಣಗಳು ಕಡಿಮೆಯಾಗಲಿದೆ.ಉತ್ತರ ಹಾಗೂ ಪೂರ್ವ ಭಾರತದಲ್ಲಿ ಜುಲೈ ಮಧ್ಯದ ವೇಳೆಗೆ ಕೋವಿಡ್-19 ಕಡಿಮೆಯಾಗಲಿದೆ ಎಂದು ಪ್ರೊಫೆಸರ್ ಮೂರ್ತಿ ಹೇಳಿದ್ದಾರೆ. 

ದೇಶದಲ್ಲಿ ಸಾಂಕ್ರಾಮಿಕದ ಅವಧಿಯಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು ಕೋವಿಡ್-19 ಹೆಚ್ಚಳಕ್ಕೆ ಕಾರಣ ಎಂದು ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com