ನನ್ನನ್ನು ಬಂಧಿಸುವ ತಾಕತ್ತು ಯಾರಿಗೂ ಇಲ್ಲ: ಬಾಬಾ ರಾಮದೇವ್

ಆಲೋಪತಿ ಮೂರ್ಖತನದ ಪದ್ಧತಿ ಎಂದು ಟೀಕಿಸಿದ್ದ ಯೋಗಗುರು ಬಾಬಾ ರಾಮದೇವ್ ತನ್ನನ್ನು ಬಂಧಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ಬಾಬಾ ರಾಮದೇವ್
ಬಾಬಾ ರಾಮದೇವ್

ಡೆಹ್ರಾಡೂನ್: ಆಲೋಪತಿ ಮೂರ್ಖತನದ ಪದ್ಧತಿ ಎಂದು ಟೀಕಿಸಿದ್ದ ಯೋಗಗುರು ಬಾಬಾ ರಾಮದೇವ್ ತನ್ನನ್ನು ಬಂಧಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

ಯಾರಿಂದಲೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಬಾಬಾ ರಾಮದೇವ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಸನ್ಯಾಸಿ ರಾಮದೇವ್ ಬಂಧಿಸಲು ಯಾರಿಗೂ ಸಾಧ್ಯವಿಲ್ಲ, ಅವರು ಕೇವಲ ಶಬ್ದ ಮಾಡುತ್ತಾರೆ ಅಷ್ಟೇ, ಏನಾದರೂ ಮಾಡಿಕೊಳ್ಳಲಿ ಎಂದು ರಾಮದೇವ್ ವಿಡಿಯೋದಲ್ಲಿ ಹೇಳಿದ್ದಾರೆ.

ಆಲೋಪತಿ ಚಿಕಿತ್ಸೆ ವಿರುದ್ಧದ ರಾಮದೇವ್ ಹೇಳಿಕೆಗೆ ಸಂಬಂಧಿಸಿದಂತೆ ಒಂದು ಸಾವಿರ ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿರುವ ಐಎಂಎ, ಪ್ರಧಾನಿ ಮೋದಿಗೆ ಪತ್ರ ಬರೆದು ಬಾಬಾ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆಯೂ ಒತ್ತಾಯಿಸಿದೆ.

ಕೊರೋನಾ ಚಿಕಿತ್ಸೆಗೆ ಅಲೋಪತಿ ಚಿಕಿತ್ಸೆ ಮತ್ತು ಔಷಧಿ ಬಳಕೆಯಿಂದಾಗಿ ದೇಶದಲ್ಲಿ ಲಕ್ಷಾಂತರ ಮಂದಿ ಸಾವು ಕಂಡರು ಮತ್ತು ಕೊರೋನಾ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡ ಬಳಿಕವೂ ದೇಶದಲ್ಲಿ 10 ಸಾವಿರ ಮಂದಿ ವೈದ್ಯರು ಸಾವು ಕಂಡಿದ್ದಾರೆ ಎಂದು ಬಾಬ್ ರಾಮ್ ದೇವ್ ಹೇಳಿರುವುದು ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com