ವಿಲಕ್ಷಣ ಆದೇಶ: ಛತ್ತೀಸ್ ಗಢದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಸಂಬಳವಿಲ್ಲ!

ಛತ್ತೀಸ್ ಗಢದಲ್ಲಿ ರಾಯಪುರದಿಂದ 160 ಕಿ.ಮೀ ದೂರದಲ್ಲಿರುವ ಗೌರೆಲ್ಲಾ- ಪೆಂಡ್ರಾ-ಮಾರ್ವಾಹಿ ಜಿಲ್ಲೆಯ ಬುಡುಕಟ್ಟ ಇಲಾಖೆ, ತನ್ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ  ಕೋವಿಡ್ ವಿರುದ್ಧದ ಲಸಿಕೆ ಪಡೆಯಬೇಕು, ಇಲ್ಲದಿದ್ದರೆ ಜೂನ್ ತಿಂಗಳ ಸಂಬಳ ಪಡೆಯದಿರಲು ಬದ್ಧರಾಗುವಂತೆ ಹೇಳಿದೆ.
ಆರೋಗ್ಯ ಕಾರ್ಯಕರ್ತೆ
ಆರೋಗ್ಯ ಕಾರ್ಯಕರ್ತೆ

ರಾಯಪುರ: ಕೊರೋನಾವೈರಸ್ ಎರಡನೇ ಅಲೆ ನಡುವೆ ಛತ್ತೀಸ್ ಗಢದಲ್ಲಿ ವಿಲಕ್ಷಣ ಆದೇಶವೊಂದನ್ನು ಹೊರಡಿಸಲಾಗಿದೆ.
ರಾಯಪುರದಿಂದ 160 ಕಿ.ಮೀ ದೂರದಲ್ಲಿರುವ ಗೌರೆಲ್ಲಾ- ಪೆಂಡ್ರಾ-ಮಾರ್ವಾಹಿ ಜಿಲ್ಲೆಯ ಬುಡುಕಟ್ಟ ಇಲಾಖೆ, ತನ್ನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ  ಕೋವಿಡ್ ವಿರುದ್ಧದ ಲಸಿಕೆ ಪಡೆಯಬೇಕು, ಇಲ್ಲದಿದ್ದರೆ ಜೂನ್ ತಿಂಗಳ ಸಂಬಳ ಪಡೆಯದಿರಲು ಬದ್ಧರಾಗುವಂತೆ ಹೇಳಿದೆ.

ನೌಕರರು ಆದಷ್ಟು ಬೇಗ ತಮ್ಮ ಕೋವಿಡ್ ವ್ಯಾಕ್ಸಿನೇಷನ್ ಕಾರ್ಡ್ ನ್ನು  ಜಿಲ್ಲಾಧಿಕಾರಿಗಳ ಬುಡಕಟ್ಟು ವಿಭಾಗದಲ್ಲಿ ದಾಖಲೆಗಳಿಗಾಗಿ ಹಾಜರುಪಡಿಸುವಂತೆ  ಕೋರಲಾಗಿದೆ. ಒಂದು ವೇಳೆ ಲಸಿಕೆ ಪಡೆಯದಿರುವುದು ಕಂಡುಬಂದರೆ, ಜೂನ್ ತಿಂಗಳ ಸಂಬಳವನ್ನು ಸ್ಥಗಿತಗೊಳಿಸಲಾಗುವುದು, ಅದಕ್ಕೆ ಅವರೇ ಹೊಣೆಗಾರರಾಗುತ್ತಾರೆ. ಕೂಡಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಬುಡಕಟ್ಟು ಅಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಕೆ.ಎಸ್. ಮಸ್ರಾಮ್ ಸೋಮವಾರ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ತನ್ನ ಆದೇಶವನ್ನು ಸಮರ್ಥಿಸಿಕೊಂಡಿರುವ ಮಸ್ರಾಮ್, ಯಾವುದೇ ಸರ್ಕಾರಿ ಸಿಬ್ಬಂದಿಯನ್ನು ಹೆದರಿಸುವ ಉದ್ದೇಶವಿಲ್ಲ ಆದರೆ, ನಮ್ಮ ಗುರಿ ಲಸಿಕೆ ನೀಡುವಿಕೆಯಲ್ಲಿ ಶೇಕಡ 100 ರಷ್ಟು ಪ್ರಗತಿ ಸಾಧಿಸುವುದಾಗಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com