'ಕೊರೋನಾದಿಂದ ಎಷ್ಟು ಮಕ್ಕಳು ಅನಾಥರಾಗಿದ್ದಾರೋ ಊಹಿಸಲು ಅಸಾಧ್ಯ': ನೆರವಾಗುವಂತೆ ರಾಜ್ಯಗಳಿಗೆ 'ಸುಪ್ರೀಂ' ಸೂಚನೆ

ವಿನಾಶಕಾರಿ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈ ದೇಶದಲ್ಲಿ ಎಷ್ಟು ಮಕ್ಕಳು ಅನಾಥರಾಗಿದ್ದಾರೆಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಕೂಡಲೇ ಅವರನ್ನು ಗುರುತಿಸಿ ಪರಿಹಾರ ನೀಡುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿನಾಶಕಾರಿ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈ ದೇಶದಲ್ಲಿ ಎಷ್ಟು ಮಕ್ಕಳು ಅನಾಥರಾಗಿದ್ದಾರೆಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಕೂಡಲೇ ಅವರನ್ನು ಗುರುತಿಸಿ ಪರಿಹಾರ ನೀಡುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳ ಸಂಕಟವನ್ನು ಅರ್ಥಮಾಡಿಕೊಳ್ಳಬೇಕೆಂದು ಉನ್ನತ ನ್ಯಾಯಾಲಯವು ರಾಜ್ಯ ಸರ್ಕಾರಗಳನ್ನು ಸೂಚಿಸಿದೆ. ಅಲ್ಲದೆ ನ್ಯಾಯಾಲಯಗಳಿಂದ ಹೆಚ್ಚಿನ ಆದೇಶಗಳಿಗಾಗಿ ಕಾಯದೆ ತಕ್ಷಣವೇ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. 

ನ್ಯಾಯಮೂರ್ತಿಗಳಾದ ಎಲ್ ಎನ್ ರಾವ್ ಮತ್ತು ಅನಿರುದ್ಧ ಬೋಸ್ ಅವರ ರಜಾ ಪೀಠವು, ತಮ್ಮ ಪ್ರದೇಶಗಳಲ್ಲಿನ ಅನಾಥ ಮಕ್ಕಳನ್ನು ಗುರುತಿಸಿ ಅದರ ಸಂಪೂರ್ಣ ಡೇಟಾವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ(ಎನ್‌ಸಿಪಿಸಿಆರ್) ವೆಬ್‌ಸೈಟ್‌ನಲ್ಲಿ ಶನಿವಾರ ಸಂಜೆ ವೇಳೆಗೆ ಅಪ್‌ಲೋಡ್ ಮಾಡುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ. 

ಕೊರೋನಾ ಕಾರಣದಿಂದಾಗಿ ಅನಾಥ ಮಕ್ಕಳನ್ನು ಗುರುತಿಸಲು ಮತ್ತು ರಾಜ್ಯ ಸರ್ಕಾರಗಳಿಗೆ ತಕ್ಷಣದ ಪರಿಹಾರವನ್ನು ನೀಡುವಂತೆ ಕೋರಿ ಅಮಿಕಸ್ ಕ್ಯೂರಿ ಗೌರವ್ ಅಗ್ರವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. 

ಕೋವಿಡ್ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ 2,900ಕ್ಕೂ ಹೆಚ್ಚು ಮಕ್ಕಳು ತಮ್ಮ ಒಬ್ಬ ಅಥವಾ ಇಬ್ಬರು ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ನಾವು ಎಲ್ಲೋ ಓದಿದ್ದೇವೆ. ಇದನ್ನು ನೋಡಿದರೆ ಈ ದೊಡ್ಡ ದೇಶದಲ್ಲಿ ಇಂತಹ ಎಷ್ಟು ಮಕ್ಕಳು ಇದ್ದಾರೆಂದು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. 

ರಾಜ್ಯ ಸರ್ಕಾರಗಳ ಪರವಾಗಿ ಭಾಗವಹಿಸಿದ್ದು ಸಲಹೆಗಾರರಿಗೆ, 'ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳ ಸಂಕಟವನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ದಯವಿಟ್ಟು ಅವರ ಮೂಲಭೂತ ಅಗತ್ಯಗಳನ್ನು ತಕ್ಷಣ ಪೂರೈಸುವಂತೆ ನೀವು ರಾಜ್ಯದ ಅಧಿಕಾರಿಗಳನ್ನು ತಿಳಿಸಿ. ಕೋವಿಡ್ ನಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ರಕ್ಷಣೆಗಾಗಿ ಕೇಂದ್ರವು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದೆ ಎಂದು ಉನ್ನತ ನ್ಯಾಯಾಲಯ ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com