ಕೋವ್ಯಾಕ್ಸಿನ್ ಉತ್ಪಾದನೆ, ಪೂರೈಕೆ ಪ್ರಕ್ರಿಯೆಗೆ 4 ತಿಂಗಳು ಬೇಕು: ಭಾರತ್ ಬಯೋಟೆಕ್

ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಿ, ಪೂರೈಕೆ ಮಾಡಲು ನಾಲ್ಕು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ. 
ಕೋವ್ಯಾಕ್ಸಿನ್ ಲಸಿಕೆ
ಕೋವ್ಯಾಕ್ಸಿನ್ ಲಸಿಕೆ

ಹೈದರಾಬಾದ್: ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಿ, ಪೂರೈಕೆ ಮಾಡಲು ನಾಲ್ಕು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ. 

2021ರ ಡಿಸೆಂಬರ್ ಅಂತ್ಯದ ವೇಳೆಗೆ ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ ದೇಶದ ಸ್ವದೇಶಿ ಲಸಿಕಾ ಸಂಸ್ಧೆ ಭಾರತ್ ಬಯೋಟೆಕ್ ಈ ಹೇಳಿಕೆ ನೀಡಿದೆ. 

ಲಸಿಕೆ ಪರೀಕ್ಷೆ, ತಂತ್ರಜ್ಞಾನ ಮತ್ತು ಅನುಮತಿ ಪ್ರಕ್ರಿಯೆ ಮೇಲೆ ಉತ್ಪಾದನೆಯ ಅವಧಿ ನಿರ್ಧಾರವಾಗುತ್ತದೆ. ಲಸಿಕೆ ಉತ್ಪಾದನೆ ವೇಳೆ ನೂರಾರು ಹಂತಗಳಿರುತ್ತವೆ ಎಂದು ಭಾರತ್ ಬಯೋಟೆಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

ಮಾರ್ಚ್ ತಿಂಗಳಲ್ಲಿ ಲಸಿಕೆ ಉತ್ಪಾದನೆ ಆರಂಭಿಸಿದ್ದು 120 ದಿನಗಳು ಬೇಕಾಗುತ್ತದೆ. ಅಂದರೆ ಜೂನ್ ತಿಂಗಳಿನಲ್ಲಷ್ಟೇ ಲಸಿಕೆ ಸಿಗಲಿದೆ. ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್(ಸಿಡಿಎಸ್ ಸಿಒ) ಮಾರ್ಗಸೂಚಿಗೆ ಅನುಸಾರವಾಗಿ ಎಲ್ಲ ಲಸಿಕೆಗಳನ್ನು ಪರೀಕ್ಷಿಸಿ ಕೇಂದ್ರ ಸರ್ಕಾರದ ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿಗೆ ಕಳುಹಿಸಲಾಗುತ್ತದೆ. 

ಇನ್ನು ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ ಲಸಿಕೆಗಳ ಆಧಾರದಲ್ಲಿ ರಾಜ್ಯ ಮತ್ತು ಕೇಂದ್ರಕ್ಕೆ ಪೂರೈಕೆ ಮಾಡಲಾಗುತ್ತದೆ. ಲಸಿಕೆ ಉತ್ಪಾದನೆ ಕೇಂದ್ರದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಲಸಿಕಾ ಕೇಂದ್ರಗಳಿಗೆ ಪೂರೈಕೆ ಮಾಡಲು ಎರಡು ದಿನಗಳು ಬೇಕಾಗುತ್ತದೆ. ಇನ್ನು ಅಲ್ಲಿನ ಸರ್ಕಾರಗಳು ಆಯಾ ಕೇಂದ್ರಗಳಿಗೆ ಪೂರೈಕೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com