ಮೇ 31ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ, ಭಾರಿ ಮಳೆ ಸಾಧ್ಯತೆ

ನೈಋತ್ಯ ಮಾನ್ಸೂನ್ ಮಾರುತಗಳು ನೈಋತ್ಯ ಮತ್ತು ಪೂರ್ವಕೇಂದ್ರದ ಬಂಗಾಳ ಕೊಲ್ಲಿಯತ್ತ ಸಾಗಿದ್ದು, ಮೇ 31ರ ಹೊತ್ತಿಗೆ ಕೇರಳ ಪ್ರವೇಶ ಮಾಡಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವನಂತಪುರ: ನೈಋತ್ಯ ಮಾನ್ಸೂನ್ ಮಾರುತಗಳು ನೈಋತ್ಯ ಮತ್ತು ಪೂರ್ವಕೇಂದ್ರದ ಬಂಗಾಳ ಕೊಲ್ಲಿಯತ್ತ ಸಾಗಿದ್ದು, ಮೇ 31ರ ಹೊತ್ತಿಗೆ ಕೇರಳ ಪ್ರವೇಶ ಮಾಡಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ.

ಮುಂಗಾರು ಮಳೆ ಸುರಿಸುವ ನೈಋುತ್ಯ ಮಾನ್ಸೂನ್ ಮಾರುತಗಳು ಮೇ 31ರಂದು ಕೇರಳ ಪ್ರವೇಶಿಸಲಿದ್ದು, ಜೂನ್ ಮೊದಲ ವಾರದ ಕೊನೆಗೆ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಸೃಷ್ಟಿಯಾದ 2 ಚಂಡಮಾರುತಗಳೇ ಮಾನ್ಸೂನ್ ಮಾರುತಗಳ ಈ ಚಲನೆಗೆ ಕಾರಣ  ಎನ್ನಲಾಗಿದೆ. ಕಳೆದ ವಾರವಷ್ಟೇ ಟೌಕ್ಟೇ ಚಂಡಮಾರುತದಿಂದಾಗಿ ಸಾಕಷ್ಟು ರಾಜ್ಯಗಳು ನಲುಗಿ ಹೋಗಿದ್ದವು. ಇದೀಗ ಅದರ ಬೆನ್ನಲ್ಲೇ ಯಾಸ್ ಚಂಡಮಾರುತ ಕೂಡ ಅಪ್ಪಳಿಸಿದೆ. ಹೀಗಾಗಿ ಮಾನ್ಸೂನ್ ಮಾರುತಗಳ ಚಲನೆಯಲ್ಲಿ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

ಮಾಲ್ಡೀವ್ಸ್-ಕೊಮೊರಿನ್ ಪ್ರದೇಶದ ಕೆಲವು ಭಾಗಗಳಲ್ಲಿ ಮಾನ್ಸೂನ್ ಈಗಾಗಲೇ ಪ್ರವೇಶಿಸಿದೆ. ಪಶ್ಚಿಮ ಬಂಗಾಳದ ನೈಋತ್ಯ ಮತ್ತು ಪೂರ್ವ ಕೇಂದ್ರ, ಆಗ್ನೇಯ ಕೊಲ್ಲಿಯ ಹೆಚ್ಚಿನ ಭಾಗ ಹಾಗೂ ಪಶ್ಚಿಮ ಕೇಂದ್ರ ಕೊಲ್ಲಿಯ ಕೆಲವು ಭಾಗಗಳಿಗೆ ಗುರುವಾರದ ವೇಳೆಗೆ ಮಾನ್ಸೂನ್ ಪ್ರವೇಶಿಸಿದೆ.

ಯಾಸ್ ಚಂಡಮಾರುತದಿಂದ ಹೆಚ್ಚಿದ ತೀವ್ರತೆ
ಯಾಸ್ ಚಂಡ ಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ಮಾನ್ಸೂನ್ ಗಾಳಿಯ ತೀವ್ರತೆ ಹೆಚ್ಚಾಗಿದೆ. ಮುಂದಿನ ವಾರ ಕೇರಳದಲ್ಲಿ ಮಾನ್ಸೂನ್ ಪ್ರವೇಶಿಸಲಿದ್ದು, ಭಾರಿ ಮೆಳಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುರುವಾರ ಕೇರಳದ ಕಾಯಂಕುಳಂ  ಮತ್ತು ಅಲಪ್ಪುಳದಲ್ಲಿ 9 ಸೆಂಟಿ ಮೀಟರ್ ಮಳೆಯಾಗಿದೆ. ನೆಡುಮಂಗದ್ ಮತ್ತು ಥಿರುವಿಲ್ಲಾದಲ್ಲಿ 8 ಸೆಂ.ಮೀ ಮಳೆ, ಪೀರ್ಮಡೆ ಮತ್ತು ಕುಮಾರಕಮ್ ಪ್ರದೇಶದಲ್ಲಿ 8 ಸೆಂ.ಮೀ ಮಳೆ ಸುರಿದಿದೆ. ಒಡಿಶಾದ ಮಾಯೂರ್ ಬಂಜ್ 28 ಸೆಂ.ಮೀ, ಕಿಯೊಂಜಿಘರ್ 27 ಸೆಂ.ಮೀ, ಸುಂದರ್ ಘರ್ 21 ಸೆಂ.ಮೀ,  ಮಳೆಯಾಗಿದೆ. ಜಾರ್ಖಂಡ ಪಶ್ಚಿಮ ಸಿಂಘುಮ್ 21 ಸೆಂ.ಮೀ ಮತ್ತು ರಾಂಚಿಯಲ್ಲಿ 18 ಸೆಂಟಿ ಮೀಟರ್ ಮಳೆ ಸುರಿದಿದೆ.

ಇನ್ನು ಚಂಡಮಾರುತದ ಅಬ್ಬರಕ್ಕೆ ಒಳಗಾಗಿದ್ದ ಒಡಿಶಾದ ಹಲವು ಪ್ರದೇಶಗಳಲ್ಲಿ ಬುಧವಾರ ಭಾರಿ ಮಳೆಯಾಗಿದೆ. ಚಾಂದಬಲಿ 29 ಸೆಂ.ಮೀ, ಗರದಪುರ್ ಮತ್ತು ರಾಜಕನಿಕಾದಲ್ಲಿ 25 ಸೆಂ.ಮೀ, ಬಲಿಕುಡಾ 19 ಸೆಂ.ಮೀ, ತಿರ್ತೊಲ್ ಮತ್ತು ಬಿಂಜಾರ್ ಪುರ್ 21 ಸೆಂ.ಮೀ ಮತ್ತು ಪಾರಾದೀಪ್ ಪ್ರದೇಶದಲ್ಲಿ 20 ಸೆಂಟಿ  ಮೀಟರ್ ಮಳೆಯಾಗಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 24 ಸೆಂಟಿ ಮೀಟರ್ ಮಳೆ ಸುರಿದಿದೆ. ಕೇರಳದ ಇಡುಕ್ಕಿ ಪ್ರದೇಶದಲ್ಲಿ 19 ಸೆಂಟಿ ಮೀಟರ್ ಮಳೆಯಾಗಿದೆ. ತಿರುವನಂತಪುರಂನಲ್ಲಿ 17 ಸೆಂ.ಮೀ ಮಳೆಯಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com