ಪಾಕಿಸ್ತಾನಕ್ಕೆ 'ಟೂಲ್' ನೀಡುವ ಮೂಲಕ ಭಾರತದ ಕೋವಿಡ್-19 ಹೋರಾಟವನ್ನು ಕಾಂಗ್ರೆಸ್ ದುರ್ಬಲಗೊಳಿಸುತ್ತಿದೆ: ಬಿಜೆಪಿ

ಭಾರತವನ್ನು ಕೆಣಕಲು ಪಾಕಿಸ್ತಾನದಂತಹ ದೇಶಗಳಿಗೆ "ಸಾಧನಗಳನ್ನು" ಒದಗಿಸುವ ಮೂಲಕ ಕಾಂಗ್ರೆಸ್ ಪಕ್ಷ ಭಾರತದ ಕೋವಿಡ್-19 ಹೋರಾಟವನ್ನು ದುರ್ಬಲಗೊಳಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷ ಗಂಭೀರ ಆರೋಪ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತವನ್ನು ಕೆಣಕಲು ಪಾಕಿಸ್ತಾನದಂತಹ ದೇಶಗಳಿಗೆ "ಸಾಧನಗಳನ್ನು" ಒದಗಿಸುವ ಮೂಲಕ ಕಾಂಗ್ರೆಸ್ ಪಕ್ಷ ಭಾರತದ ಕೋವಿಡ್-19 ಹೋರಾಟವನ್ನು ದುರ್ಬಲಗೊಳಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷ ಗಂಭೀರ ಆರೋಪ ಮಾಡಿದೆ.

ಸಾಂಕ್ರಾಮಿಕ ರೋಗ ಹರಡಿದ ನಂತರ ಭಾರತ ಶ್ರೇಷ್ಠವಲ್ಲ ಆದರೆ ಕುಖ್ಯಾತವಾಗಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಇಂದು ಟೀಕಾ ಪ್ರಹಾರ ನಡೆಸಿದರು. 'ಕೋವಿಡ್-19 ವಿರುದ್ಧದ ಭಾರತದ ಹೋರಾಟವನ್ನು  "ದುರ್ಬಲಗೊಳಿಸಲು" ಕಾಂಗ್ರೆಸ್ ಕೆಲಸ ಮಾಡುತ್ತಿದೆ. ವಿರೋಧ ಪಕ್ಷವು ಭಾರತವನ್ನು ಕೆಣಕಲು ಪಾಕಿಸ್ತಾನದಂತಹ ದೇಶಗಳಿಗೆ "ಸಾಧನಗಳನ್ನು" ಒದಗಿಸುವ ಮೂಲಕ ಭಾರತದ ಕೋವಿಡ್-19 ಹೋರಾಟವನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದರು.

ಅಂತೆಯೇ ಕಾಂಗ್ರೆಸ್ ಪಕ್ಷದ ನಾಯಕರಿಗೆ ಭಾರತವನ್ನು ದೂಷಿಸುವುದೇ ಆದ್ಯತೆಯಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡರು ಈ ಹಿಂದೆ ಭಾರತದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರವನ್ನು "ಭಾರತೀಯ ರೂಪಾಂತರ" ಎಂದು ವಿವಾದಾತ್ಮಕವಾಗಿ ಹೇಳಿದ್ದಾರೆ. ಆದರೆ ವಾಸ್ತವವಾಗಿ ಕಾಂಗ್ರೆಸ್ ನಾಯಕರು  ಏನು ಹೇಳಿದರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆದೇಶದ ಮೇರೆಗೆ ಮಾಡಲಾಗುತ್ತದೆ ಎಂದು ಭಾಟಿಯಾ ಆರೋಪಿಸಿದ್ದಾರೆ. 

ಕಮಲ್ ನಾಥ್ ರಂತಹ ನಾಯಕ ಹೇಳಿಕೆಗಳಿಗೆ ಕಾಂಗ್ರೆಸ್ ಏಕೆ ಮೌನವಾಗಿದೆ?..ಸೋನಿಯಾ ಗಾಂಧಿ ಏಕೆ ಮೌನವಾಗಿದ್ದಾರೆ? ಹಾಗಾದರೆ ಸೋನಿಯಾ ಕಮಲ್ ನಾಥ್ ಹೇಳಿಕೆಗಳನ್ನು ಒಪ್ಪುತ್ತಾರೆಯೇ? ಎಂದು ಭಾಟಿಯಾ ಪ್ರಶ್ನಿಸಿದ್ದಾರೆ. ಕಮಲ್ ನಾಥ್ ಹೇಳಿಕೆಗಳು ಕಾಂಗ್ರೆಸ್ ಮತ್ತು ಸೋನಿಯಾಗಾಂಧಿ ಅವರ  ಸಿದ್ಧಾಂತ ಮತ್ತು ನಿಲುವುಗಳನ್ನು ಪ್ರದರ್ಶಿಸುತ್ತದೆ. ಭಾರತವನ್ನು ದೂಷಿಸುವುದು ಕಾಂಗ್ರೆಸ್ ಪಕ್ಷದ ಆದ್ಯತೆಯಾಗಿದೆ. ಕಾಂಗ್ರೆಸ್ ನಾಯಕ ಹೇಳಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನದಲ್ಲಿ ಭಾರತೀಯ ಕೋವಿಡ್ ರೂಪಂತರ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಅಲ್ಲಿನ ಸುದ್ದಿಮಾಧ್ಯಮದ  ವರದಿಯನ್ನು ಉಲ್ಲೇಖ ನೀಡಿದರು. ಅಲ್ಲದೆ ಭಾರತೀಯ ರೂಪಾಂತರ ವೈರಸ್ ಎಂಬ ಪದವು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ "ಹುಟ್ಟಿಕೊಂಡಿದ್ದಾಗಿದೆ ಎಂದು ಕಿಡಿಕಾರಿದ ಅವರು, ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನದಂತಹ ದೇಶಗಳು ಕಾಂಗ್ರೆಸ್ ಸಾಧನಗಳನ್ನು ವಿರೋಧ ಪಕ್ಷ ಕಾಂಗ್ರೆಸ್ ಒದಗಿಸುತ್ತಿದೆ  ಎಂದು ಅವರು ಆರೋಪಿಸಿದರು.

ಇದೇ ವೇಳೆ ಕೋವಿಡ್ ವಿರುದ್ಧ ಭಾರತದ ಹೋರಾಟವನ್ನು ದುರ್ಬಲಗೊಳಿಸಲು ವಿರೋಧ ಪಕ್ಷವು "ಬೇಜವಾಬ್ದಾರಿಯುತ" ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ ಭಾಟಿಯಾ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಅವರ ಟೀಕೆಗಳನ್ನು ಉಲ್ಲೇಖಿಸಿದರು.  

ಪ್ರಧಾನಿ ಮೋದಿಯದ್ದ ನೌಟಂಕಿಯಾದರೆ ನಿಮ್ಮದೇನು?
ಅಂತೆಯೇ ಕೋವಿಡ್ ಸಾಂಕ್ರಾಮಿಕ ವಿಚಾರದಲ್ಲಿ ಪ್ರಧಾನಿ ಮೋದಿ ಕಣ್ಣೀರು ಹಾಕಿದ್ದನ್ನು ಕಾಂಗ್ರೆಸ್ ನೌಟಂಕಿ ಎಂದು ಟೀಕಿಸಿದೆ. ಆದರೆ ಇದೇ ಕಾಂಗ್ರೆಸ್ ಪಕ್ಷ 2008 ರಲ್ಲಿ ಬಟ್ಲಾ ಹೌಸ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಿಗೆ ಕಾಂಗ್ರೆಸ್ ಕಣ್ಣೀರು ಸುರಿಸಿತು. ಈಗ ಹೇಳಿ ಯಾರ ಕಣ್ಣೀರು  ಪ್ರಾಮಾಣಿಕವಾಗಿದೆ..ಈ ಬಗ್ಗೆ ಜನರಿಗೆ ಅರಿವಿದೆ ಎಂದು ಭಾಟಿಯಾ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com