ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಗೆ 'ಎನ್ಐಎ' ಹೆಚ್ಚುವರಿ ಹೊಣೆಗಾರಿಕೆ

ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರಿಗೆ ರಾಷ್ಟ್ರೀಯ ತನಿಖಾ ದಳದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದ್ದು, ಎನ್ಐಎ ಡಿಜಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್
ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್

ನವದೆಹಲಿ: ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರಿಗೆ ರಾಷ್ಟ್ರೀಯ ತನಿಖಾ ದಳದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದ್ದು, ಎನ್ಐಎ ಡಿಜಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಹಿಂದೆ ಎನ್ಐಎ ಡಿಜಿಯಾಗಿದ್ದ ವೈಸಿ ಮೋದಿ ಅವರು ಇದೇ ಸೋಮವಾರ ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಇದೀಗ ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರನ್ನು ನಿಯೋಜಿಸಲಾಗಿದೆ.

ವೈಸಿ ಮೋದಿ ಅವರು ಅಸ್ಸಾಂ-ಮೇಘಾಲಯ ಕೇಡರ್ ನ 1984 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, 2017ರ ಸೆಪ್ಟೆಂಬರ್ ನಲ್ಲಿ ಉಗ್ರ ನಿಗ್ರಹದಳದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಇದೀಗ ಕಾಂಪಿಟೆಂಟ್ ಅಥಾರಿಟಿ ಕುಲದೀಪ್ ಸಿಂಗ್ ಅವರನ್ನು ಎನ್ಐಎ ಡಿಜಿಯಾಗಿ ಆಯ್ಕೆ ಮಾಡಿದೆ. ಕುಲದೀಪ್ ಸಿಂಗ್  ಅವರು ಪ್ರಸ್ತುತ ಸಿಆರ್ ಪಿಎಫ್ ನ ಡಿಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಎನ್ಐಎ ಡಿಜಿ ಆಯ್ಕೆಯಾಗುವವರೆಗೂ ಹೆಚ್ಚವರಿ ಎನ್ಐಎ ಡಿಜಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com