ಮೃತದೇಹ ವಿಸರ್ಜನೆಯಿಂದಾಗಿ ಗಂಗಾ ನೀರಿನ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ: ಕೇಂದ್ರ

ಬಿಹಾರ ಮತ್ತು ಉತ್ತರಪ್ರದೇಶ ಗಂಗಾ ಮತ್ತು ಯಮುನಾ ನದಿಯಲ್ಲಿ ಮೃತದೇಹಗಳು ತೇಲಿ ಬಂದು ಆತಂಕ ಸೃಷ್ಟಿಸಿತ್ತು. ಇದೀಗ ಕೇಂದ್ರ ಸರ್ಕಾರ ಮೃತದೇಹಗಳ ವಿಸರ್ಜನೆಯಿಂದ ನೀರಿನ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ ಎಂದು ಹೇಳಿದೆ. 
ಗಂಗಾ ನದಿ
ಗಂಗಾ ನದಿ

ನವದೆಹಲಿ: ಬಿಹಾರ ಮತ್ತು ಉತ್ತರಪ್ರದೇಶ ಗಂಗಾ ಮತ್ತು ಯಮುನಾ ನದಿಯಲ್ಲಿ ಮೃತದೇಹಗಳು ತೇಲಿ ಬಂದು ಆತಂಕ ಸೃಷ್ಟಿಸಿತ್ತು. ಇದೀಗ ಕೇಂದ್ರ ಸರ್ಕಾರ ಮೃತದೇಹಗಳ ವಿಸರ್ಜನೆಯಿಂದ ನೀರಿನ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ ಎಂದು ಹೇಳಿದೆ. 

ಜೈವಿಕ ಮಾದರಿಗಳ ಮಟ್ಟಿಗೆ ಮೃತದೇಹ ವಿಸರ್ಜನೆಯಿಂದಾಗಿ ನೀರಿನ ಮಾದರಿಗಳ ಆರಂಭಿಕ ವಿಶ್ಲೇಷಣೆಯು ನದಿಯ ನೀರಿನ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಕುಮಾರ್ ಹೇಳಿದ್ದು ಕೊರೋನಾ ಮಾಲಿನ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಒಳಚರಂಡಿ ಮತ್ತು ನೀರಿನ ಮಾದರಿಗಳನ್ನು ಪರೀಕ್ಷಿಸಬೇಕು ರಾಜ್ಯಗಳಿಗೆ ನಿರ್ದೇಶಿಸಿದ್ದಾರೆ. 

ಪರಿಸ್ಥಿತಿಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಪಂಕಜ್ ಕುಮಾರ್ ಅವರು, ನೀರಿನ ಮಾದರಿಗಳನ್ನು ಪರೀಕ್ಷಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಎಸ್‌ಪಿಸಿಬಿ)ಯೊಂದಿಗೆ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ(ಎನ್‌ಸಿಎಲ್) ಸಂಪರ್ಕದಲ್ಲಿರಲಿದೆ. ಇನ್ನು ಕೊಳಚೆನೀರಿನಲ್ಲಿ ಕೋವಿಡ್ 19 ವೈರಸ್ ಅನ್ನು ಪರೀಕ್ಷಿಸಲು ಪುಣೆಯಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸಿದ್ದು ಅದು ಪರೀಕ್ಷೆಯನ್ನು ಪ್ರಾರಂಭಿಸಿದೆ ಎಂದರು. 

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಮತ್ತು ಬಿಹಾರದ ಸಿಪಿಸಿಬಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ಗರ್ಗವಾ ಅವರು, ನೈಜ ಸಮಯದ ಪ್ರಕಾರ ನೀರಿನ ಗುಣಮಟ್ಟದ ಮೇಲ್ವಿಚಾರಣೆಯ ದತ್ತಾಂಶದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ ಎಂದು ತಿಳಿಸಿದರು. ಜೈವಿಕ ನಿಯತಾಂಕಗಳಿಗೆ ಸಂಬಂಧಿಸಿದಂತೆ ಮೃತ ದೇಹ ವಿಸರ್ಜನೆಯಿಂದಾಗಿ ನದಿಯ ನೀರಿನ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದರು. 

ಡಬ್ಲ್ಯುಎಚ್‌ಒ ವರದಿಯ ಪ್ರಕಾರ, ವೈರಸ್‌ನ ನೀರಿನ ಮೂಲಕ ಹರಡುತ್ತದೆ ಅಥವಾ ನದಿ ನೀರಿನಲ್ಲಿ ವೈರಸ್ ಬದುಕುಳಿಯುವ ಸಾಧ್ಯತೆಗಳನ್ನು ತಳ್ಳಿಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು. ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಸಿಪಿಸಿಬಿ ಎಸ್‌ಪಿಸಿಬಿಗೆ ಪತ್ರ ಬರೆದಿದೆ ಮತ್ತು ಸಾಂಪ್ರದಾಯಿಕ ನಿಯತಾಂಕಗಳಿಗೆ ಹೆಚ್ಚುವರಿಯಾಗಿ ಬ್ಯಾಕ್ಟೀರಿಯೊಲಾಜಿಕಲ್ ನಿಯತಾಂಕಗಳನ್ನು ಗಮನಿಸಬೇಕು ಎಂದು ಅವರು ಮಾಹಿತಿ ನೀಡಿದರು. ಕೋವಿಡ್ ವೈರಸ್ ವಿಶ್ಲೇಷಣೆಗಾಗಿ, ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ) ಗೆ ಕಳುಹಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಪಿಹೆಚ್, ಕಲರ್, ಬಿಒಡಿ(ಜೀವರಾಸಾಯನಿಕ ಆಮ್ಲಜನಕ ಬೇಡಿಕೆ), ಸಿಒಡಿ (ರಾಸಾಯನಿಕ ಆಮ್ಲಜನಕದ ಬೇಡಿಕೆ) ಅದಾಗಲೇ ನದಿಯ ನೀರಿನ ಮಾದರಿಗಳ ಸಾಪ್ತಾಹಿಕ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಯುಪಿಪಿಸಿಬಿಯ ಸದಸ್ಯ ಕಾರ್ಯದರ್ಶಿ ಆಶಿಶ್ ತಿವಾರಿ ಮಾಹಿತಿ ನೀಡಿದರು. ಮಾಹಿತಿಯ ಪ್ರಕಾರ ನದಿಯ ನೀರಿನ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ನದಿಯ ಹರಿವು ಸಮರ್ಪಕವಾಗಿದೆ. ನೀರಿನ ಮಾದರಿಗಳಿಂದ ಕೋವಿಡ್ ವೈರಸ್‌ನ ವಿಶ್ಲೇಷಣೆಯು ಆರ್‌ಎನ್‌ಎಯನ್ನು ಹೊರತೆಗೆಯುವುದನ್ನು ಒಳಗೊಂಡಿರುತ್ತದೆ. ಇದನ್ನು ಸೂಕ್ತ ಸಂಸ್ಥೆಗಳ ಪರಿಣತರು ಪರೀಕ್ಷೆ ಮಾಡಬಹುದು ಎಂದು ತಿವಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com