ಕೋವಿಡ್-19 ನಿಂದ ಅನಾಥರಾದ ಮಕ್ಕಳಿಗೆ ಪ್ರಧಾನಿಯಿಂದ "ಪಿಎಂ ಕೇರ್ಸ್​ ಫಾರ್ ಚಿಲ್ಡ್ರನ್​' ಉಚಿತ ಶಿಕ್ಷಣದ ಘೋಷಣೆ!

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ವರ್ಷ ಪೂರ್ಣಗೊಳಿಸುತ್ತಿರುವ ನಡುವೆ ಮೇ.29 ರಂದು ಮಹತ್ವದ ಘೋಷಣೆ ಪ್ರಕಟಿಸಿದ್ದು, ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ವರ್ಷ ಪೂರ್ಣಗೊಳಿಸುತ್ತಿರುವ ನಡುವೆ ಮೇ.29 ರಂದು ಮಹತ್ವದ ಘೋಷಣೆ ಪ್ರಕಟಿಸಿದ್ದು, ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. 

ಅಂಥ ಮಕ್ಕಳಿಗಾಗಿ 'ಪಿಎಂ ಕೇರ್ಸ್​ ಫಾರ್ ಚಿಲ್ಡ್ರೆನ್​' ಯೋಜನೆ ರೂಪಿಸಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೊರೊನಾದಿಂದ ಅನಾಥರಾದ ಮಕ್ಕಳಿಗೆ ನೆರವಾಗಲು ನಿರ್ಧರಿಸಲಾಗಿದೆ.

ದೇಶದಲ್ಲಿ ಕೊರೊನಾದಿಂದ ಅನೇಕ ಮಕ್ಕಳು ತಂದೆತಾಯಿಗಳು ಹಾಗೂ ಪೋಷಕರನ್ನು ಕಳೆದು ಕೊಂಡು ಅನಾಥರಾಗಿದ್ದಾರೆ. ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಪ್ರತಿ ತಿಂಗಳು ಹಣ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಅನಾಥ ಮಕ್ಕಳಿಗೆ ತಕ್ಷಣವೇ ಹಣಕಾಸು ನೆರವು ಸಿಗುವುದಿಲ್ಲ. ಅನಾಥ ಮಕ್ಕಳ ವಯಸ್ಸು 18 ವರ್ಷ ಆಗುತ್ತಿದ್ದಂತೆ ಅವರಿಗೆ ಮಾಸಿಕ ವೇತನ ಸಿಗಲಾರಂಭಿಸುತ್ತದೆ. ಅಲ್ಲದೆ ಆ ಮಕ್ಕಳಿಗೆ 23 ವರ್ಷವಾಗುತ್ತಿದ್ದಂತೆ 10 ಲಕ್ಷ ರೂಪಾಯಿ ಪಿಎಂ ಕೇರ್ಸ್​ ಕಡೆಯಿಂದ ಸಿಗಲಿದೆ ಎಂದು ಪಿಎಂ ಓ ಕಾರ್ಯಾಲಯ ಹೇಳಿದೆ.

ಮಕ್ಕಳು ದೇಶದ ಭವಿಷ್ಯ ಪ್ರತಿನಿಧಿಸುತ್ತಾರೆ. ಅವರ ರಕ್ಷಣೆ, ಉಜ್ವಲ ಭವಿಷ್ಯ ರೂಪಿಸುವುದು ಸರ್ಕಾರದ ಜವಾಬ್ದಾರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪಿಎಂ ಕೇರ್ಸ್ ಫಾರ್ ಚಿಲ್ಟ್ರನ್ ಯೋಜನೆಯಡಿ ಉಚಿತ ಶಿಕ್ಷಣ, ಪ್ರತಿ ತಿಂಗಳು ಆರ್ಥಿಕ ನೆರವು, ಆರೋಗ್ಯ ವಿಮೆ, ಮಕ್ಕಳ ಹೆಸರಲ್ಲಿ ಠೇವಣಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com