ದೆಹಲಿಯಲ್ಲಿ ಕೆಲ ರಿಯಾಯಿತಿಯೊಂದಿಗೆ ಜೂ.7ರವರೆಗೂ ನಿರ್ಬಂಧ ಮುಂದುವರಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಲಾಕ್ಡೌನ್ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು  ಕಡಿಮೆಯಾಗದ ಕಾರಣ,  ಕೆಲ ರಿಯಾಯಿತಿಯೊಂದಿಗೆ  ಲಾಕ್ಡೌನ್ ನಿರ್ಬಂಧಗಳು ಬರುವ ಜೂನ್ 7 ವರೆಗೂ  ಮುಂದುವರೆಯಲಿದೆ.
ಕೊನಾಟ್ ಪ್ಯಾಲೇಸ್ ಮುಂಭಾಗದ ರಸ್ತೆ
ಕೊನಾಟ್ ಪ್ಯಾಲೇಸ್ ಮುಂಭಾಗದ ರಸ್ತೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಲಾಕ್ಡೌನ್ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು  ಕಡಿಮೆಯಾಗದ ಕಾರಣ,  ಕೆಲ ರಿಯಾಯಿತಿಯೊಂದಿಗೆ  ಲಾಕ್ಡೌನ್ ನಿರ್ಬಂಧಗಳು ಬರುವ ಜೂನ್ 7 ವರೆಗೂ  ಮುಂದುವರೆಯಲಿದೆ.

ಹಾಲಿ  ಲಾಕ್ಡೌನ್ ಅವಧಿ ನಾಳೆಗೆ ಮುಕ್ತಾಯವಾಗಬೇಕಿದ್ದರೂ  7 ರವರೆಗೂ  ಲಾಕ್ಡೌನ್ ಮುಂದುವರೆಯಲಿದೆ.ಆದರೆ ನಿರ್ಮಾಣ ಮತ್ತು ಉತ್ಪಾದಕ  ಕಂಪನಿಗಳಿಗೆ ಮಾತ್ರ ಲಾಕ್ಡೌನ್ ನಿಮಯ  ಸಡಿಲಿಕೆ ಮಾಡಲಾಗಿದೆ. ಈ ಕಂಪನಿಗಳು ಕಟ್ಟುನಿಟ್ಟಾಗಿ ಕೊರೊನಾ ಮುನ್ನೆಚ್ಚರಿಕೆ ಕ್ರಮ ಪಾಲಿಸಿ ಕಾರ್ಯನಿರ್ವಹಿಸಬಹುದಾಗಿದೆ. 

ಇನ್ನು ಗೋವಾ, ಕೇರಳ,  ಕರ್ನಾಟಕ ಶೇರಿದಂತೆ ವಿವಿಧ  ರಾಜ್ಯಗಳಲಲ್ಲಿ ಜೂನ್ 7ರವರೆಗೂ  ಲಾಕ್ಡೌನ್ ವಿಸ್ತರಣೆಯಾಗಿದೆ. 
ಈ ಅವಧಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಸ್ಥಗಿತವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com