ಜೂನ್ ವೇಳೆಗೆ 12  ಕೋಟಿ ಡೋಸ್ ಗಳಷ್ಟು ಕೋವಿಡ್ ಲಸಿಕೆ ಲಭ್ಯ: ಆರೋಗ್ಯ ಸಚಿವಾಲಯ 

ಕೊರೋನಾ ಲಸಿಕೆಯ ಅಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಜೂನ್ ವೇಳೆಗೆ 12 ಕೋಟಿ ಲಸಿಕೆ ಡೋಸ್ ಗಳು ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 
ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವ ಜನತೆ
ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವ ಜನತೆ

ನವದೆಹಲಿ: ಕೊರೋನಾ ಲಸಿಕೆಯ ಅಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಜೂನ್ ವೇಳೆಗೆ 12 ಕೋಟಿ ಲಸಿಕೆ ಡೋಸ್ ಗಳು ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಮೇ ತಿಂಗಳಲ್ಲಿ 7,94 ಡೋಸ್ ಗಳಷ್ಟು ಲಸಿಕೆ ಲಭ್ಯತೆ ಇತ್ತು. ಬಳಕೆ, ಜನಸಂಖ್ಯೆ ಹಾಗೂ ಲಸಿಕೆ ಪೋಲಾಗುವುದರ ಆಧಾರದಲ್ಲಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಹಾಗೂ ಸರಬರಾಜನ್ನು ನಿರ್ಧರಿಸಲಾಗುತ್ತದೆ.

ಜೂನ್ ತಿಂಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಚಿತವಾಗಿಯೇ ಲಸಿಕೆ ನೀಡಲಾಗಿದೆ.  ಕೇಂದ್ರಾಡಳಿತ ಪ್ರದೇಶಗಳು/ ರಾಜ್ಯಗಳಿಗೆ ಜೂನ್ ತಿಂಗಳಲ್ಲಿ ಆದ್ಯತೆಯ ಗುಂಪಿನ ಕಾರ್ಯಕರ್ತರಿಗೆ ನೀಡುವುದಕ್ಕೆ 6.90 ಕೋಟಿ (6,09,60,000) ಡೋಸ್ ಲಸಿಕೆಯನ್ನು ಉಚಿತವಾಗಿ ಸರಬರಾಜು ಮಾಡಲಾಗಿದೆ. 

ಇನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಸಂಗ್ರಹಿಸುವುದಕ್ಕಾಗಿ 5.86  ಕೋಟಿ ಲಸಿಕೆ ಡೋಸ್ ಗಳು ಲಭ್ಯವಿದೆ. ಆದ್ದರಿಂದ ಜೂನ್ ತಿಂಗಳಲ್ಲಿ ಒಟ್ಟಾರೆ ಹತ್ತಿರ ಹತ್ತಿರ 12 ಕೋಟಿ ಲಸಿಕೆ ಡೋಸ್ ಗಳು ಲಭ್ಯವಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com