ಜೂನ್ 15ರ ವರೆಗೆ ನಿರ್ಬಂಧ ಮುಂದುವರಿಸಿದ ಮಹಾರಾಷ್ಟ್ರ ಸರ್ಕಾರ: ಪಾಸಿಟಿವ್ ದರ, ಆಕ್ಸಿಜನ್ ಬೆಡ್ ಲಭ್ಯತೆ ಆಧಾರದಲ್ಲಿ ಸಡಿಲಿಕೆ 

ಜೂನ್ 15ರವರೆಗೆ ಲಾಕ್ ಡೌನ್ ರೀತಿಯ ನಿರ್ಬಂಧವನ್ನು ವಿಸ್ತರಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಜೂನ್ 15ರವರೆಗೆ ಲಾಕ್ ಡೌನ್ ರೀತಿಯ ನಿರ್ಬಂಧವನ್ನು ವಿಸ್ತರಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್-19 ಪಾಸಿಟಿವ್ ದರ ಮತ್ತು ಆಕ್ಸಿಜನ್ ಬೆಡ್ ಗಳ ಲಭ್ಯತೆ ನೋಡಿಕೊಂಡು ನಿರ್ಬಂಧ ಸಡಿಲಿಕೆಯನ್ನು ಸರ್ಕಾರ ಮಾಡಲಿದೆ.
ನಗರ ಪಾಲಿಕೆ ಮತ್ತು ಜಿಲ್ಲೆಗಳ ಸ್ಥಳೀಯ ಮಟ್ಟದಲ್ಲಿ ಕೊರೋನಾ ಪಾಸಿಟಿವ್ ದರ ಶೇಕಡಾ 10ಕ್ಕಿಂತ ಕಡಿಮೆಯಿದ್ದರೆ ಅಲ್ಲಿ ಆಕ್ಸಿಜನ್ ಬೆಡ್ ಗಳ ಲಭ್ಯತೆ ಶೇಕಡಾ 40ಕ್ಕಿಂತ ಕಡಿಮೆಯಿದ್ದರೆ ಅಗತ್ಯ ವಸ್ತುಗಳು ಮತ್ತು ಸೇವೆಗಳ ಲಭ್ಯತೆಗೆ ಸರ್ಕಾರ ಈಗಿರುವ 7ರಿಂದ 11 ಗಂಟೆಯವರೆಗಿನ ವಿನಾಯ್ತಿಯನ್ನು ಮುಂದಿನ ದಿನಗಳಲ್ಲಿ 7 ಗಂಟೆಯಿಂದ 2 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ನಿನ್ನೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಶೇಕಡಾ 20ಕ್ಕಿಂತ ಹೆಚ್ಚು ಕೊರೋನಾ ಪಾಸಿಟಿವ್ ದರ ಹೊಂದಿರುವ ಜಿಲ್ಲೆಗಳು ಮತ್ತು ನಗರ ಪಾಲಿಕೆಗಳಲ್ಲಿ ಮತ್ತು ಶೇಕಡಾ 75ಕ್ಕಿಂತ ಹೆಚ್ಚು ಆಕ್ಸಿಜನ್ ಬೆಡ್ ಗಳು ಸಿಗುವ ಜಿಲ್ಲೆಗಳ ಗಡಿ ಜಿಲ್ಲೆಗಳನ್ನು ಮುಚ್ಚಲಾಗುತ್ತದೆ ಹಾಗೂ ಇಂತಹ ಜಿಲ್ಲೆಗಳಿಗೆ ಬಂದು ಹೋಗಲು ಅವಕಾಶವಿರುವುದಿಲ್ಲ.

ಕುಟುಂಬದಲ್ಲಿ ಸಾವಾಗಿದ್ದರೆ, ವೈದ್ಯಕೀಯ ಮತ್ತು ತುರ್ತು ಸೇವೆಗಳ ಸಂಬಂಧಿತ ಪ್ರಯಾಣಕ್ಕೆ ಮಾತ್ರ ಜನರಿಗೆ ಅವಕಾಶ ನೀಡಲಾಗುತ್ತದೆ. ಮಹಾರಾಷ್ಟ್ರ ರಾಜ್ಯಾದ್ಯಂತ ಏಕರೂಪವಾಗಿ ಕೊರೋನಾ ಸೋಂಕಿನ ಸರಪಳಿಯನ್ನು ಮುರಿಯಿರಿ ಎಂಬ ನಿಯಮವನ್ನು ಜಾರಿಗೊಳಿಸುವುದರ ಬದಲಾಗಿ ಜೂನ್ 15ರವರೆಗೆ ನಿರ್ಬಂಧವನ್ನು ಇನ್ನಷ್ಟು ಕಠಿಣಗೊಳಿಸಲಾಗುತ್ತದೆ. ನಗರಪಾಲಿಕೆ, ಪುರಸಭೆ, ಜಿಲ್ಲೆಗಳಲ್ಲಿನ ಪಾಸಿಟಿವ್ ದರ ನೋಡಿಕೊಂಡು, ಆಕ್ಸಿಜನ್ ಬೆಡ್ ಗಳ ಲಭ್ಯತೆ ನೋಡಿಕೊಂಡು ನಿರ್ಬಂಧವನ್ನು ಕಠಿಣಗೊಳಿಸುವುದು, ಸಡಿಲಿಸುವುದನ್ನು ಸರ್ಕಾರ ಮಾಡುತ್ತದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಈಗ 2ಲಕ್ಷದ 71 ಸಾವಿರದ 801 ಸಕ್ರಿಯ ಪ್ರಕರಣಗಳಿವೆ. ನಿನ್ನೆಯ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಕೋವಿಡ್ ನಿಂದ ಇಲ್ಲಿಯವರೆಗೆ 94 ಸಾವಿರದ 844 ಮಂದಿ ಮೃತಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com