ಬಂಗಾಳ ಉಪಚುನಾವಣೆ: ಬಿಜೆಪಿ ಭದ್ರಕೋಟೆಯೂ ಸೇರಿ ಎಲ್ಲಾ ಸ್ಥಾನಗಳಲ್ಲೂ ಟಿಎಂಸಿ ಮುನ್ನಡೆ!

ಅ.30 ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ನಾಲ್ಕು ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ನ.02 ರಂದು ನಡೆಯುತ್ತಿದ್ದು ನಾಲ್ಕೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದೆ. 
ಟಿಎಂಸಿ-ಬಿಜೆಪಿ
ಟಿಎಂಸಿ-ಬಿಜೆಪಿ

ಕೋಲ್ಕತ್ತ: ಅ.30 ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ನಾಲ್ಕು ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ನ.02 ರಂದು ನಡೆಯುತ್ತಿದ್ದು ನಾಲ್ಕೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದೆ. 

ಖರ್ದಾಹ್, ಶಾಂತಿಪುರ, ಗೋಸಾಬ ಮತ್ತು ದಿನ್ಹತಾಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿ ಭದ್ರಕೋಟೆಯಾಗಿರುವ ದಿನ್ಹತಾದಲ್ಲಿಯೂ ಟಿಎಂಸಿ ಮುನ್ನಡೆ ಕಾಯ್ದುಕೊಂಡಿದೆ.

ಮತ ಎಣಿಕೆ ಶಾಂತಿಯುತವಾಗಿ ನಡೆಯುತ್ತಿದ್ದು, ಇತ್ತೀಚಿನ ವರೆಗೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಆಯೋಗ ತಿಳಿಸಿವೆ.

ದಿನ್ಹತಾ ಹಾಗೂ ಶಾಂತಿಪುರದಲ್ಲಿ ಬಿಜೆಪಿ ಶಾಸಕರು ತಮ್ಮ ಸಂಸದರ ಪದವಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖರ್ದಾಹ್,  ಗೋಸಾಬಗಳಲ್ಲಿ ಟಿಎಂ ಸಿ ಶಾಸಕರ ನಿಧನದಿಂದಾಗಿ ಈ ಉಪಚುನಾವಣೆ ನಡೆದಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com