ಮುಂಬೈ: ವೈದ್ಯಕ್ಷೀಯ ಪರೀಕ್ಷೆಗಾಗಿ ಅನಿಲ್ ದೇಶ್ ಮುಖ್ ಕರೆದೊಯ್ದ ಇಡಿ

ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಪಿಎಂಐಎಲ್ ಕೋರ್ಟ್ ನಲ್ಲಿ ಇಂದು ಹಾಜರುಪಡಿಸುವ ಮೊದಲು ಜಾರಿ ನಿರ್ದೇಶನಾಲಯ ಕಚೇರಿಯಿಂದ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಿತು.
ಅನಿಲ್ ದೇಶ್ ಮುಖ್
ಅನಿಲ್ ದೇಶ್ ಮುಖ್

ಮುಂಬೈ:  ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಪಿಎಂಐಎಲ್ ಕೋರ್ಟ್ ನಲ್ಲಿ ಇಂದು ಹಾಜರುಪಡಿಸುವ ಮೊದಲು ಜಾರಿ ನಿರ್ದೇಶನಾಲಯ ಕಚೇರಿಯಿಂದ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಿತು.

ನವೆಂಬರ್ 2 ರಂದು ಮುಂಬೈ ಕೋರ್ಟ್ ದೇಶ್ ಮುಖ್ ಅವರನ್ನು ನಾಲ್ಕು ದಿನಗಳ ಕಾಲ ಅಂದರೆ ನವೆಂಬರ್ 6 ರವರೆಗೆ ಕಸ್ಟಡಿಗೆ ಒಪ್ಪಿಸಿತ್ತು. ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅನಿಲ್ ದೇಶ್ ಮುಖ್ ಅವರ ಪುತ್ರ ಹೃಷಿಕೇಶ್ ದೇಶ್ ಮುಖ್ ಅವರಿಗೆ ಇಡಿ ಗುರುವಾರ ಸಮನ್ಸ್ ನೀಡಿತ್ತು.

ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರ ವಿರುದ್ಧ ಸುಲಿಗೆ ಮತ್ತು ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದಂತೆ ದೇಶಮುಖ್ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ ಬಂಧಿಸಿತ್ತು. 

ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ 100 ಕೋಟಿ ರೂಪಾಯಿ ವಸೂಲಿ ಮಾಡುವಂತೆ ಸಚಿನ್ ವಾಝೆ ಕೇಳಿದ್ದು ಸೇರಿದಂತೆ ಅನಿಲ್ ದೇಶಮುಖ್ ಅವರು ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಿಂಗ್ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com