ಛತ್ತೀಸ್‌ಗಢದ ಸುಕ್ಮಾದಲ್ಲಿ ಎಂಟು ನಕ್ಸಲರ ಬಂಧನ

ದಕ್ಷಿಣ ಛತ್ತೀಸ್‌ಗಢದ ಕಲಹ ಪೀಡಿತ ಸುಕ್ಮಾ ಜಿಲ್ಲೆಯ ಮೋರೆಪಲ್ಲಿ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಂಟು ಶಂಕಿತ ಮಾವೋವಾದಿಗಳನ್ನು ಬಂಧಿಸಲಾಗಿದೆ.
ಎಂಟು ನಕ್ಸಲರ ಬಂಧನ
ಎಂಟು ನಕ್ಸಲರ ಬಂಧನ

ರಾಯ್‌ಪುರ: ದಕ್ಷಿಣ ಛತ್ತೀಸ್‌ಗಢದ ಕಲಹ ಪೀಡಿತ ಸುಕ್ಮಾ ಜಿಲ್ಲೆಯ ಮೋರೆಪಲ್ಲಿ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಂಟು ಶಂಕಿತ ಮಾವೋವಾದಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ಆರು ಮಂದಿಯ ತಲೆಗೆ ಬಹುಮಾನ ಬಹುಮಾನ ಘೋಷಿಸಲಾಗಿತ್ತು.

ಬಂಧಿತ ನಕ್ಸಲರಿಂದ ನಾಲ್ಕು ಸುಧಾರಿತ ಸ್ಫೋಟಕ ಸಾಧನಗಳು(ಐಇಡಿಗಳು), ಡಿಟೋನೇಟರ್‌ಗಳು, ಬ್ಯಾಟರಿಗಳು, ಕೆಲವು ಶಸ್ತ್ರಾಸ್ತ್ರಗಳು, ಮಾವೋವಾದಿ ಸಾಹಿತ್ಯ ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

ಈ ಪ್ರದೇಶದಲ್ಲಿ ನಕ್ಸಲರ ಚಲನವಲನದ ಕುರಿತಂತೆ ನಮಗೆ ಗುಪ್ತಚರ ದಳ ಮಾಹಿತಿ ನೀಡಿತ್ತು. ಹೀಗಾಗಿ ನವೆಂಬರ್ 2ರಿಂದ ರಕ್ಷಣಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಇದೀಗ ಒಟ್ಟು 8 ಮಂದಿಯನ್ನ ಬಂಧಿಸಲಾಗಿದೆ ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ಅವರು ಹೇಳಿದ್ದಾರೆ.

ಬಂಧಿತರಲ್ಲಿ ‘ಕವಾಸಿ ರಾಜು ಅಲಿಯಾಸ್ ಸಂತು’ ಬೆಟಾಲಿಯನ್ ಸದಸ್ಯನಾಗಿದ್ದು ಮತ್ತು ‘ಕಲ್ಮು ಮಾಡಾ’ ಮಿಲಿಷಿಯಾ ಕಂಪನಿ ಕಮಾಂಡರ್ ಆಗಿದ್ದಾನೆ. ಇವರಿಬ್ಬರ ತಲೆಗೆ ಕ್ರಮವಾಗಿ 8 ಮತ್ತು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇತರೆ ಆರೋಪಿಗಳ ಸುಳಿವು ನೀಡಿದ್ದವರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಬಂಧಿಸಲಾದ ಎಲ್ಲಾ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು 35 ಡಿಟೋನೇಟರ್‌ಗಳು, 6 ಜಿಲೆಟಿನ್ ರಾಡ್‌ಗಳು, ಎರಡು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಬ್ಯಾಟರಿಗಳು, ವೈರ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com