ಹರಿಯಾಣ: ಖಾಸಗಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.75 ರಷ್ಟು ಮೀಸಲು, ಮುಂದಿನ ವರ್ಷದಿಂದ ಜಾರಿ
2022 ಜನವರಿ 15 ರಿಂದ ಹರಿಯಾಣದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಾಯ್ದೆ 2020 ಅನುಷ್ಠಾನಗೊಳಿಸುವುದಾಗಿ ಅಲ್ಲಿನ ಸರ್ಕಾರ ಶನಿವಾರ ಹೇಳಿದೆ.
Published: 06th November 2021 07:08 PM | Last Updated: 06th November 2021 07:37 PM | A+A A-

ಸಾಂದರ್ಭಿಕ ಚಿತ್ರ
ಚಂಡೀಘಡ: 2022 ಜನವರಿ 15 ರಿಂದ ಹರಿಯಾಣದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಾಯ್ದೆ 2020 ಅನುಷ್ಠಾನಗೊಳಿಸುವುದಾಗಿ ಅಲ್ಲಿನ ಸರ್ಕಾರ ಶನಿವಾರ ಹೇಳಿದೆ.
ಹರಿಯಾಣ ರಾಜ್ಯದಲ್ಲಿರುವ ವಿವಿಧ ಕಂಪನಿಗಳು, ಸೂಸೈಟಿಗಳು, ಟ್ರಸ್ಟ್ ಗಳು, ಸಂಸ್ಥೆಗಳಲ್ಲಿ ತಿಂಗಳಿಗೆ 50 ಸಾವಿರ ರೂ. ವೇತನ ಮೀರದಂತೆ ಖಾಸಗಿ ಉದ್ಯೋಗದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇಕಡಾ 75 ರಷ್ಟು ಮೀಸಲಾತಿ ಕಲ್ಪಿಸಲು ಈ ಕಾಯ್ದೆ ಸುಗಮ ದಾರಿ ಮಾಡಿಕೊಡುತ್ತದೆ.
ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದೆ 2020 ರ ಸೆಕ್ಷನ್ 3ರ ಅಡಿಯಲ್ಲಿ ನೀಡಲಾದ ಅಧಿಕಾರಿಗಳನ್ನು ಚಲಾಯಿಸಲು ರಾಜ್ಯಪಾಲರು 2022 ದನವರಿ 15ನೇ ದಿನಾಂಕವನ್ನು ನಿಗದಿಪಡಿಸಿದ್ದಾರೆ ಎಂದು ರಾಜ್ಯ ಕಾರ್ಮಿಕ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಕಾಯ್ದೆಯಡಿ ಸ್ಥಳೀಯ ಅಭ್ಯರ್ಥಿಗಳು ತಿಂಗಳಿಗೆ ಒಟ್ಟು 30 ಸಾವಿರ ವೇತನ ಪಡೆಯಬಹುದಾಗಿದೆ.