Online Desk
ಮುಂಬೈ: ಬಂಧಿತ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ದೊಡ್ಡ ಮೊತ್ತದ ಹಣ ವಸೂಲಿ ಮಾಡಿದ್ದಾರೆ ಎಂದು ವಿಶೇಷ ಪ್ರಾಸಿಕ್ಯೂಟರ್ ಶೇಖರ್ ಜಗತಾಪ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: 10 ಡಿಸಿಪಿಗಳಿಂದ ದೇಶ್ ಮುಖ್, ಪರಬ್ ಗೆ 40 ಕೋಟಿ ರೂ. ಪಾವತಿ: ಇಡಿಗೆ ಸಚಿನ್ ವಾಜೆ ಹೇಳಿಕೆ
ದೂರುದಾರರು ವಾಜೆ ಅವರೊಂದಿಗಿನ ದೂರವಾಣಿ ಕರೆ ಸಂಭಾಷಣೆಗಳ ಸಂಖ್ಯೆಯನ್ನು ಸಾಬೀತುಪಡಿಸಲು ಅಪರಾಧ ವಿಭಾಗವು ವಾಜೆ ಅವರ ಧ್ವನಿ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಅಗರ್ವಾಲ್ ಅವರು ರೆಕಾರ್ಡ್ ಮಾಡಿದ ಆಡಿಯೊ ಕ್ಲಿಪ್‌ಗಳನ್ನು ಅಪರಾಧ ವಿಭಾಗಕ್ಕೆ ಸಲ್ಲಿಸಿದ್ದಾರೆ.
ಈ ನಂತರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಜಾಗೊಂಡಿರುವ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಜೆ ಅವರನ್ನು ಏಳು ದಿನಗಳ ಕಾಲ ಮುಂಬೈ ಪೊಲೀಸ್ ಅಪರಾಧ ವಿಭಾಗದ ಕಸ್ಟಡಿಗೆ ನೀಡಿದೆ.
ಇದನ್ನೂ ಓದಿ: ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಚಿನ್ ವಾಜೆ ಮತ್ತೆ 'ಸೂಪರ್ಕಾಪ್' ಆಗಲು ಬಯಸಿದ್ದರು; ಎನ್‌ಐಎ
ವಾಜೆ ಅವರು ಕ್ರಿಕೆಟ್ ಬುಕ್ಕಿಗಳಿಂದ ಹಣವನ್ನು ಸುಲಿಗೆ ಮಾಡಿರುವ ಮತ್ತು ಇತರರಿಂದಲೂ ಹಣವನ್ನು ಸುಲಿಗೆ ಮಾಡಿದ್ದಾರೆಯೇ ಎಂಬ ಕುರಿತ ತನಿಖೆಗಾಗಿ ಹೆಚ್ಚಿನ ವಿಚಾರಣೆಗಾಗಿ ಅವರ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿದ್ದಾರೆ ಎಂದು ಜಗತಾಪ್ ಗಮನ ಸೆಳೆದಿದ್ದರು
ಆಗಸ್ಟ್‌ನಲ್ಲಿ, ಆಂಟಿಲಿಯಾ ಸ್ಫೋಟಕ ಬೆದರಿಕೆ ಮತ್ತು ಮನ್‌ಸುಖ್ ಹಿರಾನ್ ಹತ್ಯೆ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿರುವ ಸಿಂಗ್, ವಾಜೆ ಮತ್ತು ನಾಲ್ವರು ನಾಗರಿಕರಾದ ಸುಮೀತ್ ಸಿಂಗ್, ಅಲ್ಪೇಶ್ ಪಟೇಲ್, ವಿನಯ್ ಸಿಂಗ್ ವಿರುದ್ಧ ಗೋರೆಗಾಂವ್ ಪೊಲೀಸರು ಸುಲಿಗೆ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಚಿನ್ ವಾಜೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಐಎ
ಆರೋಪಿಗಳು ರೂ 11.92 ಲಕ್ಷ ಸುಲಿಗೆ ಮಾಡಿದ್ದಾರೆ ಎಂದು ಅಗರ್ವಾಲ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅವರ ಹೋಟೆಲ್ ರೆಸ್ಟೋರೆಂಟ್ ಮತ್ತು ಬಾರ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಕ್ರೈಂ ಬ್ರಾಂಚ್ ಈಗಾಗಲೇ ವಾಜೆಗಾಗಿ ಹಣ ಸಂಗ್ರಹಿಸುತ್ತಿದ್ದ ಸುಮೀತ್ ಸಿಂಗ್ ಅವರನ್ನು ಬಂಧಿಸಿದೆ, ಅವರ ಆದೇಶದ ಮೇರೆಗೆ ಸುಮೀತ್ ಸಿಂಗ್ ಅವರು ಅಗರ್ವಾಲ್ ಅವರಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಪರಮ್ ಬೀರ್ ಸಿಂಗ್, ದಾವೂದ್ ಇಬ್ರಾಹಿಂನ ಸಹಾಯಕ ರಿಯಾಜ್ ಭಾಟಿ ಮತ್ತು ವಿನಯ್ ಸಿಂಗ್ ವಿರುದ್ಧ ನ್ಯಾಯಾಲಯ ಈಗಾಗಲೇ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಇದನ್ನೂ ಓದಿ: ಸಚಿನ್ ವಾಜೆ ಬಾರ್ ಮಾಲೀಕರಿಂದ 4.7 ಕೋಟಿ ರೂ. ಸಂಗ್ರಹಿಸಿ ಅನಿಲ್ ದೇಶ್ ಮುಖ್ ಆಪ್ತ ಸಹಾಯಕನಿಗೆ ಹಸ್ತಾಂತರ-ಇಡಿ
ಈ ಪ್ರಕರಣದಲ್ಲಿ ವಾಜೆ ಅವರನ್ನು ನವೆಂಬರ್ 1 ರಂದು ಬಂಧಿಸಲಾಗಿದ್ದು, ನ.13 ವರೆಗೆ ಅಪರಾಧ ವಿಭಾಗದ ಕಸ್ಟಡಿಗೆ ನೀಡಿದೆ. ನೀಡಲಾಗಿದೆ. ಹಿಂದಿನ ಕಸ್ಟಡಿ ಅವಧಿ ಮುಕ್ತಾಯವಾದ ಕಾರಣ ಶನಿವಾರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಕ್ರೈಂ ಬ್ರಾಂಚ್ ಪರವಾಗಿ ಹಾಜರಾದ ವಕೀಲ ಜಗತಾಪ್ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿದರು.