ದೀಪಾವಳಿ ದಿನ ಬಿರಿಯಾನಿ ಅಂಗಡಿ ತೆರೆಯಲು ಅನುಮತಿ ನೀಡಿದ್ಯಾರು?: ಮಾಲೀಕನಿಗೆ ಬೆದರಿಕೆ ಹಾಕಿದ ವ್ಯಕ್ತಿ

ದೀಪಾವಳಿ ಹಬ್ಬದ ನಿಮಿತ್ತ ಬಿರಿಯಾನಿ ಹೊಟೆಲ್ ಮುಚ್ಚುವಂತೆ ವ್ಯಕ್ತಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೀಪಾವಳಿ ಹಬ್ಬದ ನಿಮಿತ್ತ ಬಿರಿಯಾನಿ ಹೊಟೆಲ್ ಮುಚ್ಚುವಂತೆ ವ್ಯಕ್ತಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

ರಾಜಧಾನಿ ದೆಹಲಿಯ ಸಂತ ನಗರ ಪ್ರದೇಶದಲ್ಲಿ ದೀಪಾವಳಿಯಂದು ಬಿರಿಯಾನಿ ಅಂಗಡಿಯನ್ನು ತೆರೆದಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿಗೆ ಮತ್ತು ಹೋಟೆಲ್ ಸಿಬ್ಬಂದಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಅಂಗಡಿ ತೆರೆದ ಮಾಲೀಕನಿಗೆ ವ್ಯಕ್ತಿಯೋರ್ವ ನಿಂದಿಸಿದ್ದು, ಹಿಂದೂಗಳ ಪ್ರದೇಶದಲ್ಲಿ ದೀಪಾವಳಿಯಂದು ಬಿರಿಯಾನಿ ಅಂಗಡಿ ತೆರೆಯಲು ಅನುಮತಿ ನೀಡಿದ್ಯಾರು.  ನಿನಗೆ ಭಯವಿಲ್ಲವೇ? ಇದೇನು ನಿನ್ನ ಈದ್ ಏನು? ನಿನ್ನ ಬಗ್ಗೆ ನಿನಗೆ ಏನನಿಸುತ್ತದೆ?. ನಿಮ್ಮ ಅಂಗಡಿಯನ್ನು ಹೇಗೆ ತೆರೆದಿದ್ದೀರಿ? ಯಾರು ನಿಮಗೆ ಅನುಮತಿ ನೀಡಿದರು? ಇದು ಹಿಂದೂ ಪ್ರದೇಶ ಎಂದು ನಿಮಗೆ ತಿಳಿದಿಲ್ಲವೇ? ಇಂದು ದೀಪಾವಳಿ. ಮೊದಲು ಅಂಗಡಿ ಮುಚ್ಚಿ. ಇದೇನು  ನಿಮ್ಮ ಪ್ರದೇಶವಲ್ಲ. ಇದು ಜಾಮಾ ಮಸೀದಿಯೇ? ಇದು ಸಂಪೂರ್ಣ 'ಹಿಂದೂ' ಪ್ರದೇಶ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ಇಂದು ಎಫ್‌ಐಆರ್ ದಾಖಲಿಸಿ ಕೊಂಡಿದ್ದಾರೆ. ಬುರಾರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಆರೋಪಿಯ ಗುರುತು ಪತ್ತೆ ಹಚ್ಚಿ ಮತ್ತು ಆತನನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ. ಘಟನೆ ಕುರಿತು ಕಾನೂನಿನ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಡಿಸಿಪಿ (ಉತ್ತರ), ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆದರಿಕೆ ಬೆನ್ನಲ್ಲೇ ಅಂಗಡಿ ಮಾಲೀಕರು ಮತ್ತು ಅವರ ಕೆಲಸಗಾರರು ಅಂಗಡಿಯನ್ನು ಮುಚ್ಚಿದ್ದಾರೆ. ವಿಡಿಯೋದಲ್ಲಿ ಎಚ್ಚರಿಕೆ ನೀಡಿರುವ ವ್ಯಕ್ತಿ ಬಜರಂಗದಳದ ಸದಸ್ಯ ತನ್ನ ಹೆಸರು ನರೇಶ್ ಕುಮಾರ್ ಸೂರ್ಯವಂಶಿ ಎಂದು ಹೇಳಿಕೊಂಡಿದ್ದಾನೆ.  ವಿಡಿಯೋ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದನ್ನು ಅನೇಕ ಮಂದಿ ದೆಹಲಿ ಪೊಲೀಸರಿಗೆ ಟ್ಯಾಗ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜನರು ಟ್ವಿಟರ್‌ನಲ್ಲಿ ಒತ್ತಾಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com