ಉತ್ತರ ಪ್ರದೇಶ: ಟಿ20 ಪಂದ್ಯದಲ್ಲಿ ಪಾಕ್ ಗೆಲುವನ್ನು ಸಂಭ್ರಮಿಸಿ ವಾಟ್ಸಾಪ್ ಸ್ಟೇಟಸ್‌: ಅತ್ತೆ, ಪತ್ನಿ ವಿರುದ್ಧ ವ್ಯಕ್ತಿಯಿಂದ ದೂರು!

ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಸೋತ ನಂತರ ಭಾರತಕ್ಕೆ ಧಕ್ಕೆ ತರುವಂತಾ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪತ್ನಿ ಮತ್ತು ಅತ್ತೆಯ ವಿರುದ್ಧ ವ್ಯಕ್ತಿಯೋರ್ವ ದೂರು ದಾಖಲಿಸಿದ್ದಾನೆ.
ಭಾರತ-ಪಾಕಿಸ್ತಾನ
ಭಾರತ-ಪಾಕಿಸ್ತಾನ

ರಾಂಪುರ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಸೋತ ನಂತರ ಭಾರತಕ್ಕೆ ಧಕ್ಕೆ ತರುವಂತಾ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಪತ್ನಿ ಮತ್ತು ಅತ್ತೆಯ ವಿರುದ್ಧ ವ್ಯಕ್ತಿಯೋರ್ವ ದೂರು ದಾಖಲಿಸಿದ್ದಾನೆ.

ಉತ್ತರ ಪ್ರದೇಶದ ರಾಂಪುರದಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನದ ಗೆಲುವನ್ನು ಆಚರಿಸಿ ಭಾರತೀಯ ಕ್ರಿಕೆಟಿಗರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಶಂಗನಖೇಡ ಗ್ರಾಮದ ನಿವಾಸಿ ಇಶಾನ್ ಮಿಯಾನ್ ತನ್ನ ಪತ್ನಿ ಮತ್ತು ಅತ್ತೆಯ ವಿರುದ್ಧ ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

ಅಕ್ಟೋಬರ್ 24ರಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಹೀನಾಯ ಸೋಲು ಕಂಡಿತ್ತು. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಮಿತ್ತಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com