ಸಂಸತ್
ಸಂಸತ್

ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ಸಂಸತ್ ಚಳಿಗಾಲದ ಅಧಿವೇಶನ

ಈ ವರ್ಷದ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಸುವಂತೆ ಸಂಸತ್ ವ್ಯವಹಾರಗಳ ಸಂಪುಟ ಸಮಿತಿಯು ಶಿಫಾರಸು ಮಾಡಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ನವದೆಹಲಿ: ಈ ವರ್ಷದ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಸುವಂತೆ ಸಂಸತ್ ವ್ಯವಹಾರಗಳ ಸಂಪುಟ ಸಮಿತಿಯು ಶಿಫಾರಸು ಮಾಡಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಕಳೆದ ಒಂದೂವರೆ ವರ್ಷಗಳ ಹಿಂದೆ ನಡೆದ ಸಂಸತ್ತಿನ ಅಧಿವೇಶನಗಳಂತೆ ಈ ವರ್ಷವೂ ಚಳಿಗಾಲದ ಅಧಿವೇಶನವು ಕೋವಿಡ್​​-19 ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ನಡೆಯಲಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿಲ್ಲ. ಅಲ್ಲದೆ ಬಜೆಟ್ ಮತ್ತು ಮಾನ್ಸೂನ್ ಅಧಿವೇಶನಗಳನ್ನೂ ಮೊಟಕುಗೊಳಿಸಲು ಕೊರೋನಾ ಕಾರಣವಾಯಿತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾರಥ್ಯದಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ ಮಾಡಲಾಗಿದೆ. ನವೆಂಬರ್ 29 ರಿಂದ ಡಿಸೆಂಬರ್ 23ರವರೆಗೆ ಅಂದರೆ, 25 ದಿನಗಳ ಅವಧಿಗೆ ಅಧಿವೇಶನ ನಡೆಯಲಿದೆ.

ಲೋಕಸಭೆ ಹಾಗೂ ರಾಜ್ಯಸಭಾ ಕಲಾಪಗಳು ಒಟ್ಟೊಟ್ಟಿಗೇ ನಡೆಯಲಿದ್ದು, ಉಭಯ ಸದನಗಳ ಸದಸ್ಯರು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸೇರಿದಂತೆ ಎಲ್ಲಾ ರೀತಿಯ ಕೋವಿಡ್ ನಿಯಮಾವಳಿ ಪಾಲನೆ ಮಾಡಿ ಅಧಿವೇಶನದಲ್ಲಿ ಭಾಗಿಯಾಗಬೇಕೆಂದು ಮಾಹಿತಿ ನೀಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com