"ಬೆಳಗಿನ ಜಾವ ಜೋರಾಗಿ ಕೇಳುವ ಶಬ್ಧ ನಿದ್ರೆಗೆ ಭಂಗ ತರುತ್ತದೆ: ಪ್ರಜ್ಞಾ ಸಿಂಗ್ ಠಾಕೂರ್"
ಮುಂಜಾನೆ ಜೋರಾಗಿ ಕೇಳಿಸುವ ಶಬ್ಧದಿಂದ ಜನರ ನಿದ್ರೆಗೆ ತೊಂದರೆಯಾಗುತ್ತಿದೆ. ಅಲ್ಲದೇ ಇದು ಕೆಲವರ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
Published: 10th November 2021 11:09 PM | Last Updated: 11th November 2021 01:09 PM | A+A A-

ಸಾದ್ವಿ ಪ್ರಗ್ಯಾಸಿಂಗ್ ಠಾಕೂರ್
ಭೋಪಾಲ್: ಮುಂಜಾನೆ ಜೋರಾಗಿ ಕೇಳಿಸುವ ಶಬ್ಧದಿಂದ ಜನರ ನಿದ್ರೆಗೆ ತೊಂದರೆಯಾಗುತ್ತಿದೆ. ಅಲ್ಲದೇ ಇದು ಕೆಲವರ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಭೋಪಾಲ್ ಜಿಲ್ಲೆಯ ಬೆರಾಸಿಯಾ ಪಟ್ಟಣದ ದೇವಸ್ಥಾನವೊಂದರಲ್ಲಿ ಮಾತನಾಡಿದ ಅವರು, ಹಿಂದೂಗಳು ಮೈಕ್ ಮತ್ತು ಆಂಪ್ಲಿಫೈಯರ್ ಗಳನ್ನು ಬಳಸಿದರೆ ಅದು ಅನ್ಯಧರ್ಮಿಯರಿಗೆ ತೊಂದರೆ ನೀಡುತ್ತದೆ ಎಂದರು. ಆದ್ರೆ, ಠಾಕೂರ್ ತಮ್ಮ ಭಾಷಣದಲ್ಲಿ 'ಅಜಾನ್' ಎಂಬ ಪದವನ್ನು ಬಳಸಲಿಲ್ಲ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರು ಧನ್ಯವಾದ ಅರ್ಪಿಸಿದರು. ದೇಶಕ್ಕೆ ಅವರಂತ ನಾಯಕನ ಅಗತ್ಯವಿದೆ. ಅವರ ನಾಯಕತ್ವದಲ್ಲಿ ಜನರು ಸನ್ಮಾರ್ಗದಲ್ಲಿ ಮುನ್ನಡೆಯಬಹುದು. ಹಿಂದೂಗಳು ಯಾವುದೇ ವಿವಾದವಿಲ್ಲದೆ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಬಹುದು ಎಂದರು.