ಎಲ್ಎಸಿಯಲ್ಲಿ ಚೀನಾ ಗ್ರಾಮಗಳನ್ನು ನಿರ್ಮಿಸುತ್ತಿರುವ ಆರೋಪ, ವರದಿಯ ಬಗ್ಗೆ ಸಿಡಿಎಸ್ ಬಿಪಿನ್ ರಾವತ್ ಹೇಳಿದ್ದಿಷ್ಟು...

ಚೀನಿಯರು ಭಾರತದ ಭೂ ಭಾಗಕ್ಕೆ ಬಂದು ಅಲ್ಲಿ ಹೊಸ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿವಾದದ ಬಗ್ಗೆ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.
ಜ.ಬಿಪಿನ್ ರಾವತ್
ಜ.ಬಿಪಿನ್ ರಾವತ್

ನವದೆಹಲಿ: ಚೀನಿಯರು ಭಾರತದ ಭೂ ಭಾಗಕ್ಕೆ ಬಂದು ಅಲ್ಲಿ ಹೊಸ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿವಾದದ ಬಗ್ಗೆ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.

"ಭಾರತಕ್ಕೆ ಸೇರಿದ ಪ್ರದೇಶದ ಎಲ್ಎಸಿಯಲ್ಲಿ ಚೀನಾ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ ಎಂಬುದು ಸತ್ಯವಲ್ಲ, ಆ ಗ್ರಾಮಗಳು ಚೀನಾಗೆ ಸೇರುವ ಎಲ್ಎಸಿಯಲ್ಲೇ ಇವೆ ಎಂದು ಹೇಳಿದ್ದಾರೆ. ಭಾರತದ ಎಲ್ಎಸಿಯೊಳಗೆ ಚೀನಾ ಅತಿಕ್ರಮಣ ಪ್ರವೇಶ ಮಾಡಿಲ್ಲ ಎಂದೂ ಬಿಪಿನ್ ರಾವತ್ ಹೇಳಿದ್ದಾರೆ.

ಅಮೆರಿಕದ ರಕ್ಷಣಾ ಇಲಾಖೆ ತನ್ನ ಇತ್ತೀಚಿನ ವರದಿಯಲ್ಲಿ ಚೀನಾ ಟಿಬೆಟ್ ಅಟಾನಾಮಸ್ ಪ್ರದೇಶ ಹಾಗೂ ಭಾರತದ ಅರುಣಾಚಲ ಪ್ರದೇಶದ ಈಶಾನ್ಯ ಸೆಕ್ಟರ್ ಎಲ್ಎಸಿಯ ಮಧ್ಯಭಾಗದಲ್ಲಿರುವ ವಿವಾದಿತ ಪ್ರದೇಶದ ಒಳಭಾಗದಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಹೇಳಿತ್ತು.

ಅಮೆರಿಕದ ವರದಿಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತದ ವಿದೇಶಾಂಗ ಸಚಿವಾಲಯ, ಚೀನಾದ ಅಕ್ರಮ ಪ್ರವೇಶವನ್ನು ಹಾಗೂ ಚೀನಾದ ಅಸಮರ್ಥನೀಯ ಪ್ರತಿಪಾದನೆಗಳನ್ನು ಭಾರತ ಒಪ್ಪುವುದಿಲ್ಲ ಎಂದು ಹೇಳಿದ್ದರು.

ನ.11 ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ, ಚೀನಾ ದಶಕಗಳಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ, ತನ್ನ ಭಾಗದಲ್ಲಿನ ಅಕ್ರಮ ಅತಿಕ್ರಮಣವನ್ನು ಭಾರತ ಎಂದಿಗೂ ಒಪ್ಪಿಲ್ಲ, ಚೀನಾದ  ಅಸಮರ್ಥನೀಯ ಹಕ್ಕು ಪ್ರತಿಪಾದನೆಗಳನ್ನೂ ಭಾರತ ಅಂಗೀಕರಿಸಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com