ಕೋವ್ಯಾಕ್ಸಿನ್ ಲಸಿಕೆ ಕೋವಿಡ್ ವಿರುದ್ಧ ಶೇ.77.8, ಡೆಲ್ಟಾ ರೂಪಾಂತರಿ ವಿರುದ್ಧ ಶೇ 65.2 ರಷ್ಟು ಪರಿಣಾಮಕಾರಿ!
ಭಾರತದ ಸ್ಥಳೀಯ ಕೋವಿಡ್-19 ಲಸಿಕೆಯಾದ ಕೋವ್ಯಾಕ್ಸಿನ್‌ನ ಎರಡು ಡೋಸ್‌ಗಳು ಕೊರೋನಾ ವಿರುದ್ಧ ಶೇಕಡಾ 77.8 ರಷ್ಟು ರಕ್ಷಣೆಯನ್ನು ನೀಡುತ್ತವೆ ಮತ್ತು ಯಾವುದೇ ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಎಂದು...
Published: 12th November 2021 03:05 PM | Last Updated: 12th November 2021 05:12 PM | A+A A-

ಕೋವ್ಯಾಕ್ಸಿನ್
ಹೈದರಾಬಾದ್: ಭಾರತದ ಸ್ಥಳೀಯ ಕೋವಿಡ್-19 ಲಸಿಕೆಯಾದ ಕೋವ್ಯಾಕ್ಸಿನ್‌ನ ಎರಡು ಡೋಸ್‌ಗಳು ಕೊರೋನಾ ವಿರುದ್ಧ ಶೇಕಡಾ 77.8 ರಷ್ಟು ರಕ್ಷಣೆಯನ್ನು ನೀಡುತ್ತವೆ ಮತ್ತು ಯಾವುದೇ ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಎಂದು ಶುಕ್ರವಾರ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಮೂರನೇ ಹಂತದ ಪ್ರಯೋಗದ ಮಧ್ಯಂತರ ವಿಶ್ಲೇಷಣಾ ವರದಿ ತಿಳಿಸಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಗೆ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ 18 ವರ್ಷ ಮೇಲ್ಪಟ್ಟವರಿಗೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಇದರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿತ ಪಟ್ಟಿಯಲ್ಲಿ ಫೈಜರ್/ಬಯೋಎನ್‌ಟೆಕ್, ಮಾಡರ್ನಾ, ಅಸ್ಟ್ರಾಜೆನೆಕಾ, ಜಾನ್ಸನ್ ಮತ್ತು ಜಾನ್ಸನ್, ಸಿನೋಫಾರ್ಮ್ ಮತ್ತು ಸಿನೋವಾಕ್ ತಯಾರಿಸಿದ ಕೊವಿಡ್ ವಿರೋಧಿ ಲಸಿಕೆಗಳ ಪಟ್ಟಿಯಲ್ಲಿ ಕೋವ್ಯಾಕ್ಸಿನ್ ಸೇರಿಕೊಂಡಿದೆ.
ಇದನ್ನು ಓದಿ: ಭಾರತದ 'ಕೋವ್ಯಾಕ್ಸಿನ್'ಗೆ ಕೊನೆಗೂ ಸಿಕ್ತು WHO ಮನ್ನಣೆ: ತುರ್ತು ಬಳಕೆಗೆ ಒಪ್ಪಿಗೆ
ಕೋವ್ಯಾಕ್ಸಿನ್ ರೋಗಲಕ್ಷಣವಿರುವ ಕೊವಿಡ್ -19 ವಿರುದ್ಧ ಶೇ 77.8 ರಷ್ಟು ಮತ್ತು ಡೆಲ್ಟಾ ರೂಪಾಂತರಿ ವಿರುದ್ಧ ಶೇ 65.2 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ. 130 ದೃಢಪಡಿಸಿದ ಪ್ರಕರಣಗಳ ಮೌಲ್ಯಮಾಪನದ ಮೂಲಕ ಪರಿಣಾಮಕಾರಿತ್ವವನ್ನು ವಿಶ್ಲೇಷಿಸಲಾಗಿದೆ. ಲಸಿಕೆ ಗುಂಪಿನಲ್ಲಿ 24 ಮತ್ತು ಪ್ಲಸೀಬೊ ಗುಂಪಿನಲ್ಲಿ 106 ಪ್ರಕರಣ ಗಮನಿಸಲಾಗಿದೆ ಅಧ್ಯಯನ ತಿಳಿಸಿದೆ.
ಎರಡು ಡೋಸ್ ನೀಡಿದ ಎರಡು ವಾರಗಳ ನಂತರ ಸಾಂಪ್ರದಾಯಿಕ ನಿಷ್ಕ್ರಿಯಗೊಂಡ-ವೈರಸ್ ತಂತ್ರಜ್ಞಾನವನ್ನು ಬಳಸುವ ಕೋವ್ಯಾಕ್ಸಿನ್ “ದೃಢವಾದ ಪ್ರತಿಕಾಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ” ಎಂದು ಲ್ಯಾನ್ಸೆಟ್ ವರದಿಯಲ್ಲ ತಿಳಿಸಿದೆ.
ಕೋವ್ಯಾಕ್ಸಿನ್ ಯಾವುದೇ ತೀವ್ರವಾದ ಲಸಿಕೆ-ಸಂಬಂಧಿತ ಪ್ರತಿಕೂಲ ಪರಿಣಾಮಗಳು ಅಥವಾ ಪ್ರಯೋಗದಲ್ಲಿ ಭಾಗವಹಿಸುವವರಲ್ಲಿ ಸಾವುಗಳು ವರದಿಯಾಗಿಲ್ಲ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.