ಯುದ್ಧದ ತಂತ್ರ ಬದಲಾಗಿದೆ; ಸಮಾಜವನ್ನು ವಿಭಜಿಸಿ, ದೇಶಕ್ಕೆ ನಷ್ಟ ಉಂಟು ಮಾಡುವುದು ಹೊಸ ತಂತ್ರ: ಅಜಿತ್ ದೋವಲ್

ವಿಶ್ವದೆಲ್ಲೆಡೆ ಯುದ್ಧ ಮಾಡುವ ನೀತಿ ಸಂಪೂರ್ಣ ಬದಲಾಗಿದೆ. ಸಮಾಜವನ್ನು ವಿಭಜಿಸಿ, ದೇಶಕ್ಕೆ ನಷ್ಟ ಉಂಟು ಮಾಡುವುದು ಹೊಸ ತಂತ್ರ ಆರಂಭವಾಗಿದೆ ಅಂತಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಅಜಿತ್ ದೋವಲ್
ಅಜಿತ್ ದೋವಲ್

ಹೈದರಾಬಾದ್: ವಿಶ್ವದೆಲ್ಲೆಡೆ ಯುದ್ಧ ಮಾಡುವ ನೀತಿ ಸಂಪೂರ್ಣ ಬದಲಾಗಿದೆ. ಸಮಾಜವನ್ನು ವಿಭಜಿಸಿ, ದೇಶಕ್ಕೆ ನಷ್ಟ ಉಂಟು ಮಾಡುವುದು ಹೊಸ ತಂತ್ರ ಆರಂಭವಾಗಿದೆ ಅಂತಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಹೈದ್ರಾಬಾದ್ ನಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳ ಸಮಾರಂಭದಲ್ಲಿ ಮಾತನಾಡಿದ ಅಜಿತ್ ದೋವಲ್, ರಾಜಕೀಯ ಹಾಗೂ ಮಿಲ್ಟ್ರಿಯ ಗುರಿಗಳನ್ನು ಈಡೇರಿಸಿಕೊಳ್ಳಲು ಇನ್ಮುಂದೆ ಯುದ್ಧದಿಂದ ಸಾಧ್ಯವಾಗುವದಿಲ್ಲ. ವಾಸ್ತವವಾಗಿ ದೇಶಗಳ ಮಧ್ಯೆ ನಡೆಯುವ ಯುದ್ಧಗಳು ತುಂಬಾ ದುಬಾರಿ. 

ಪ್ರತಿಯೊಂದು ರಾಷ್ಟ್ರವು ಇದಿರಂದ ಲಾಭ ಪಡೆಯಲು ಸಾಧ್ಯವಿಲ್ಲ. ಅಲ್ಲದೆ ಯುದ್ಧದ ಫಲಿತಾಂಶ ಯಾವಾಗಲೂ ಅನಿಶ್ಚಿತತೆಯಿಂದ ಕೂಡಿರುತ್ತದೆ. ಹೀಗಾಗಿ, ಬದಲಾದ ವೇಳೆಯಲ್ಲಿ ಯುದ್ಧದ ತಂತ್ರಗಳು ಸಂಪೂರ್ಣ ವಿಭಿನ್ನವಾಗಿವೆ. ಯುದ್ಧವನ್ನು ಬಿಟ್ಟು ಈಗ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಲಾಗುತ್ತದೆ. ಸಮಾಜವನ್ನು ಒಡೆಯುವ ಮೂಲಕ ದೇಶಕ್ಕೆ ನಷ್ಟ ಉಂಟು ಮಾಡಲಾಗುತ್ತದೆ ಅಂತಾ ಅವರು ತಿಳಿಸಿದರು.

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕ ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳುತ್ತಾನೆ. ಹೀಗಾಗಿ, ನಾಲ್ಕನೇ ತಲೆಮಾರಿನ ಯುದ್ಧ ತಂತ್ರವನ್ನು ಈಗ ಅಳವಡಿಸಿಕೊಳ್ಳಲಾಗಿದೆ. ಈ ತಂತ್ರದ ಮುಖ್ಯ ಗುರಿ ಸಮಾಜ ಒಡೆಯುವುದಾಗಿದೆ ಅಂತಾ ತಿಳಿಸಿದರು. 

ಭಾರತ 32 ಲಕ್ಷ ಚದರು ಕಿಲೋ ಮೀಟರ್ ವಿಸ್ತೀರ್ಣ ಹೊಂದಿದೆ. ಅಲ್ಲದೆ, ಚೀನಾ, ಮಯನ್ಮಾರ್, ಬಾಂಗ್ಲಾದೇಶದ ಜೊತೆಗೆ 15 ಸಾವಿರ ಕಿಲೋ ಮೀಟರ್ ನಷ್ಟು ಗಡಿ ರೇಖೆ ಹೊಂದಿದೆ. ದೇಶದ ಗಡಿಯಲ್ಲಿ ಅನೇಕಾನೇಕ ಸಮಸ್ಯೆಗಳಿವೆ. ಈ ಎಲ್ಲ ಸಮಸ್ಯೆಗಳ ಜೊತೆಗೆ ದೇಶದ ಗಡಿ ರಕ್ಷಣೆ ಮಾಡುವ ಹೆಚ್ಚಿನ ಜವಾಬ್ದಾರಿಯನ್ನು ಪೊಲೀಸರು ಹೊರಬೇಕಾಗುತ್ತದೆ ಅಂತಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com