ಹಾಲು ಕರೆಯೋಕೆ ಬಿಟ್ಟಿಲ್ಲ ಎಂದು ಎಮ್ಮೆ ವಿರುದ್ಧವೇ ದೂರು ಕೊಟ್ಟ ಭೂಪ!

ನಮ್ಮ ದೇಶದಲ್ಲಿ ಎಂಥೆಂತ ವಿಚಿತ್ರ ಘಟನೆಗಳು ನಡೆಯುತ್ತವೆ, ವಿಚಿತ್ರ ವ್ಯಕ್ತಿಗಳು ಇರ್ತಾರೆ ಅನ್ನೋದಕ್ಕೆ ಆಗಾಗ ವಿಚಿತ್ರಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಅಂಥದ್ದೊಂದು ಸ್ವಾರಸ್ಯಕರ ಪ್ರಕರಣ ಇಲ್ಲಿದೆ.
ಎಮ್ಮೆ ವಿರುದ್ಧವೇ ದೂರು ನೀಡಿದ ಭೂಪ
ಎಮ್ಮೆ ವಿರುದ್ಧವೇ ದೂರು ನೀಡಿದ ಭೂಪ

ಮಧ್ಯಪ್ರದೇಶ: ನಮ್ಮ ದೇಶದಲ್ಲಿ ಎಂಥೆಂತ ವಿಚಿತ್ರ ಘಟನೆಗಳು ನಡೆಯುತ್ತವೆ, ವಿಚಿತ್ರ ವ್ಯಕ್ತಿಗಳು ಇರ್ತಾರೆ ಅನ್ನೋದಕ್ಕೆ ಆಗಾಗ ವಿಚಿತ್ರಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಅಂಥದ್ದೊಂದು ಸ್ವಾರಸ್ಯಕರ ಪ್ರಕರಣ ಇಲ್ಲಿದೆ.

ಮಧ್ಯಪ್ರದೇಶದ ಭಿಂಡ್ ಪೊಲೀಸರು ವಿಚಿತ್ರ ಪ್ರಕರಣವೊಂದನ್ನು ಎದುರಿಸಬೇಕಾಯಿತು. ಇದು ಎಮ್ಮೆಯಿಂದ ಹಾಲು ಕರೆಯುವ ಪ್ರಕರಣವಾಗಿತ್ತು. ಅಂದ್ಹಾಗೆ ಇದು ಎಮ್ಮೆ ಹಾಲು ಕರೆಯೋಕೆ ಬಿಡ್ತಿಲ್ಲಾಂತ ವ್ಯಕ್ತಿಯೊಬ್ಬ ಎಮ್ಮೆ ವಿರುದ್ಧವೇ ದೂರು ನೀಡಿದ್ದಾಗಿತ್ತು.

ಭಿಂಡ್ ಜಿಲ್ಲೆಯ ನಯಾ ಗ್ರಾಮದಲ್ಲಿ ವಾಸಿಸುವ ಬಾಬುರಾಮ್ ತನ್ನ ಎಮ್ಮದ ಹಾಲು ಕರೆಯೋಕೆ ಬಿಡುತ್ತಿಲ್ಲ ಎಂದು ನಾಯಗಾಂವ್ ಪೊಲೀಸ್ ಸ್ಟೇಷನ್‌ಗೆ ಬಂದು ಪೊಲೀಸರಿಗೆ ಲಿಖಿತವಾಗಿ ದೂರಿನ ಅರ್ಜಿ ಸಲ್ಲಿಸಿದ್ದಾನೆ. ಎಮ್ಮೆಯನ್ನು ತೆಗೆದುಕೊಂಡು ಹೋಗಿ ಠಾಣೆಗೆ ಕಟ್ಟಿ ನನ್ನ ಎಮ್ಮೆಯ ಹಾಲು ಕರೆಯಲು ಸಹಾಯ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರೋಲ್ಲ ಎಂದು ಪೊಲೀಸರು ತಿಳಿಸಿ ಹೇಳಿದರೂ  ಬಾಬುರಾಮ್ ಒಪ್ಪಲೇ ಇಲ್ಲ.  ಹಾಲು ಕರಿಯಲೇಬೇಕಂತ ಠಾಣೆಯಲ್ಲೇ ಹಠ ಹಿಡಿದಿದ್ದಾನೆ. ಇದನ್ನು ನೋಡಿದ ನಾಯಗಾಂವ್ ಠಾಣೆಯ ಪೊಲೀಸರಿಗೂ ವಿಷಯ ಅಷ್ಟು ಸುಲಭವಲ್ಲ ಅಂತ ಅರಿವಾಗಿದೆ.
 
ಬಳಿಕ ನಾಯಗಾಂವ್ ಠಾಣೆ ಪೊಲೀಸರು ಪಶುವೈದ್ಯರನ್ನ ಠಾಣೆಗೆ ಕರೆಸಿದ್ದಾರೆ. ಪಶುವೈದ್ಯರ ನೆರವಿನೊಂದಿಗೆ ಬಾಬುಲಾಲ್‌ಗೆ ಎಮ್ಮೆಯಿಂದ ಹಾಲು ಕರೆಯೋದು ಹೇಗೆ ಅಂತ ತಿಳಿಸಿದ್ದಾರೆ. ಮಾಲೀಕರ ದೂರಿನ ಮೇರೆಗೆ ಪೊಲೀಸರು ಪಶುವೈದ್ಯರನ್ನು ಕರೆಸಿ ಹಾಲು ತೆಗೆಯೋಕೆ ಕಲಿಸಿದ್ದಾರೆ. ಇದರೊಂದಿಗೆ ಎಮ್ಮೆಗೆ ಯಾವುದೇ ರೋಗದ ಲಕ್ಷಣಗಳಿಲ್ಲ ಎಂಬ ಮಾಹಿತಿಯನ್ನೂ ನೀಡಲಾಗಿದೆ. ಇನ್ನು ಡಿಎಸ್‌ಪಿ ಅರವಿಂದ್ ಷಾ ಬಾಬುಲಾಲ್‌ಗೆ ಯಾವುದೇ ಸಮಸ್ಯೆ ಎದುರಾದರೆ ಖಂಡಿತವಾಗಿಯೂ ಸಹಾಯ ಮಾಡುವುದಾಗಿ ಹೇಳಿ ಕಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com