ಪುಸ್ತಕ ವಿವಾದ ನಡುವೆ  ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ನಿವಾಸಕ್ಕೆ ಬೆಂಕಿ, ಧ್ವಂಸ

ಅಯೋಧ್ಯೆ ತೀರ್ಪು ಕುರಿತ ಪುಸ್ತಕ ವಿವಾದದ ಕಿಡಿ ಹೊತ್ತಿಸಿರುವ ನಡುವೆ ಸೋಮವಾರ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿ, ಧ್ವಂಸ ಮಾಡಲಾಗಿದೆ.
ಸಲ್ನಾನ್ ಖುರ್ಷಿದ್
ಸಲ್ನಾನ್ ಖುರ್ಷಿದ್

ನೈನಿತಾಲ್: ಅಯೋಧ್ಯೆ ತೀರ್ಪು ಕುರಿತ ಪುಸ್ತಕ ವಿವಾದದ ಕಿಡಿ ಹೊತ್ತಿಸಿರುವ ನಡುವೆ ಸೋಮವಾರ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿ, ಧ್ವಂಸ ಮಾಡಲಾಗಿದೆ.

ಕೆಲವರು ಇಂದು ನೈನಿತಾಲ್ ನಲ್ಲಿರುವ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ರಾಕೇಶ್ ಕಪಿಲ್ ಮತ್ತಿತರ 20 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಚುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಐ ನೀಲೇಶ್ ಆನಂದ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಮನೆ ಧ್ವಂಸದ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಖುರ್ಷಿದ್,   ಇದೀಗ ಸಾಕಷ್ಟು ಚರ್ಚೆಯಾಗಿದೆ. ಅವಮಾನವು ತುಂಬಾ ನಿಷ್ಪರಿಣಾಮಕಾರಿ ಪದವಾಗಿದೆ. ಅದಲ್ಲದೆ ನಾವು ಒಂದು ದಿನ ಒಟ್ಟಿಗೆ ತರ್ಕಿಸಬಹುದು ಮತ್ತು ಹೆಚ್ಚು ಅಲ್ಲದಿದ್ದರೂ ಭಿನ್ನಾಭಿಪ್ರಾಯವನ್ನು ಒಪ್ಪಿಕೊಳ್ಳಬಹುದು ಎಂದು ನಾನು ಇನ್ನೂ ಭಾವಿಸುತ್ತೇನೆ. ನನ್ನ ಸ್ನೇಹಿತರಿಗಾಗಿ ಈಗಲೂ ವಿಶ್ವಾಸದಿಂದ ಬಾಗಿಲು ತೆರೆಯುತ್ತೇನೆ. ನಾನು ಈಗಲೂ ಇಂತಹುದು ಹಿಂದೂ ಧರ್ಮ ಎಂದು ಹೇಳುವುದು ತಪ್ಪೆ ಎಂದು ಪ್ರಶ್ನಿಸಿದ್ದಾರೆ.  

ಸಲ್ಮಾನ್ ಖುರ್ಷಿದ್ ಅವರ ಸನ್ ರೈಸ್ ಓವರ್ ಅಯೋಧ್ಯೆ ಪುಸ್ತಕ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಪುಸ್ತಕದಲ್ಲಿ ಹಿಂದುತ್ವವನ್ನು ಭಯೋತ್ಪಾದಕ ಸಂಘಟನೆಗಳಾದ ಐಸಿಸ್ ಮತ್ತು ಬೊಕೊ ಹರಾಮ್‌ನೊಂದಿಗೆ ಹೋಲಿಸಲಾಗಿದೆ. ಹೀಗಾಗಿ, ಅವರ ಪುಸ್ತಕವನ್ನು ಪ್ರಕಟಿಸಿದಾಗಿನಿಂದ ವಿರೋಧ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com