ಭವಿಷ್ಯದಲ್ಲಿ ದತ್ತಾಂಶವೇ ಇತಿಹಾಸವನ್ನು ನಿರೂಪಿಸಲಿದೆ: ಪ್ರಧಾನಿ ಮೋದಿ

ದತ್ತಾಂಶವು ಮಾಹಿತಿಯಾಗಿದ್ದು, ಭವಿಷ್ಯದಲ್ಲಿ ದತ್ತಾಂಶವೇ ಇತಿಹಾಸವನ್ನು ನಿರೂಪಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದತ್ತಾಂಶವು ಮಾಹಿತಿಯಾಗಿದ್ದು, ಭವಿಷ್ಯದಲ್ಲಿ ದತ್ತಾಂಶವೇ ಇತಿಹಾಸವನ್ನು ನಿರೂಪಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.

ಮೊದಲ ಲೆಕ್ಕಪರಿಶೋಧನೆ ದಿನದ (ಆಡಿಟ್‌ ದಿವಸ್) ಅಂಗವಾಗಿ ದೆಹಲಿಯ ಮಹಾಲೇಖಪಾಲರ (ಸಿಎಜಿ) ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಧಾನಿ ಮೋದಿಯವರು ಮಾತನಾಡಿದರು.

ಲೆಕ್ಕಪತ್ರ ಪರಿಶೋಧನಾ ಸಂಸ್ಥೆಯ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ದೇಶಕ್ಕೆ ತೋರಿಸಲು ಇಂದು ಆಡಿಟ್​ ದಿನವನ್ನು ಆಚರಿಸಲಾಗಿದ್ದು, ಇದೇ ವೇಳೆ ಕಂಟ್ರೋಲರ್​ ಆ್ಯಂಡ್​ ಅಡಿಟರ್​ ಜನರಲ್​ ಕಚೇರಿಯಲ್ಲಿ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಬಳಿಕ ಮಾತನಾಡಿರುವ ಅವರು, ವೈಜ್ಞಾನಿಕ ಮತ್ತು ಕಠಿಣವಾಗಿ ನಡೆಸುವ ಲೆಕ್ಕಪರಿಶೋಧನೆಯಿಂದ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ ಹಾಗೂ ಪಾರದರ್ಶಕವಾಗಿಸುತ್ತದೆ. 'ದತ್ತಾಂಶವು ಮಾಹಿತಿಯಾಗಿದ್ದು, ಅದು ಭವಿಷ್ಯದಲ್ಲಿ ಇತಿಹಾಸವನ್ನು ನಿರೂಪಿಸಲಿದೆ ಎಂದು ಹೇಳಿದರು.

ವಸೂಲಾಗದ ಸಾಲಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಡಗಿಸಲು ಏನೆಲ್ಲ ಕೆಲಸಗಳನ್ನು ಮಾಡಲಾಗಿದೆ ಎಂಬುದು ನಿಮಗೆ ಚೆನ್ನಾಗಿಯೇ ತಿಳಿದಿದೆ. ಕಾಲ ಸರಿದಂತೆ ಕೆಲವು ಸಂಸ್ಥೆಗಳು ಮಾತ್ರವೇ ಬಲಿಷ್ಠಗೊಳ್ಳುತ್ತ, ಪ್ರಬುದ್ಧಗೊಳ್ಳುತ್ತ ಸಾಗುತ್ತವೆ. ಕೆಲವು ದಶಕಗಳ ಬಳಿಕ ಹೆಚ್ಚಿನ ಸಂಸ್ಥೆಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಆದರೆ, ಸಿಎಜಿ ಒಂದು ಪರಂಪರೆಯಾಗಿದ್ದು, ಪ್ರತಿ ತಲೆಮಾರು ಅದನ್ನು ಉಳಿಸಿಕೊಂಡು ಹೋಗಬೇಕಿದೆ. ಅದೊಂದು ದೊಡ್ಡ ಹೊಣೆಗಾರಿಕೆಯಾಗಿದೆ' ಎಂದು ಬಣ್ಣಿಸಿದರು.

'ಸರ್ಕಾರದ ಕೆಲಸಗಳ ಮೌಲ್ಯಮಾಪನ ನಡೆಸುವಾಗ ಸಿಎಜಿ ಹೊರಗೆ ನಿಂತು ಕಾಣುವ ದೃಷ್ಟಿಕೋನವನ್ನು ಹೊಂದಿದೆ. ಸಿಎಜಿ ನೀಡುವ ಸಲಹೆಗಳಿಂದ ನಾವು ವ್ಯವಸ್ಥಿತ ಬೆಳವಣಿಗೆ ತರಲು ಸಾಧ್ಯವಾಗುತ್ತಿದೆ. ಅದನ್ನು ನಾವು ಸಹಕಾರವೆಂದು ಪರಿಗಣಿಸುತ್ತೇವೆ. ಲೆಕ್ಕಪರಿಶೋಧನೆಯನ್ನು ಸಂಶಯ ಮತ್ತು ಭಯದಿಂದ ಕಾಣುವ ಕಾಲವಿತ್ತು. ಸಿಎಜಿ ವರ್ಸಸ್‌ ಸರ್ಕಾರ ಎಂಬಂತೆ ನಮ್ಮ ವ್ಯವಸ್ಥೆಯಲ್ಲಿ ಕಾಣಲಾಗುತ್ತಿತ್ತು. ಈಗ ಲೆಕ್ಕಪರಿಶೋಧನೆಯು ಮೌಲ್ಯಯುತ ಅಂಶಗಳ ಪ್ರಮುಖ ಭಾಗವಾಗಿ ಕಾಣಲಾಗುತ್ತಿದೆ'.

'ಹಿಂದಿನ ಸರ್ಕಾರಗಳ ವಾಸ್ತವಾಂಶಗಳು, ವಾಸ್ತವ ಸ್ಥಿತಿಯನ್ನು ಪ್ರಮಾಣಿಕವಾಗಿ ನಾವು ರಾಷ್ಟ್ರದ ಮುಂದೆ ತೆರೆದಿಟ್ಟೆವು. ಸಮಸ್ಯೆಯನ್ನು ಗುರುತಿಸಿದಾಗಲೇ ನಮಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಬಳಸದ ಮತ್ತು ಕಡಿಮೆ ಬಳಕೆಗೆ ಒಡ್ಡಿಕೊಂಡಿರುವ ಮೂಲಗಳನ್ನು ಮೌಲ್ಯೀಕರಣಗೊಳಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡೆವು. ಅಂಥ ನಿರ್ಧಾರಗಳಿಂದಾಗಿ ಆರ್ಥಿಕತೆಯ ಪುನಶ್ಚೇತನಗೊಳಿಸುವುದು ಸಾಧ್ಯವಾಗಿದೆ'

ವೈಜ್ಞಾನಿಕ ಮತ್ತು ಕಠಿಣವಾಗಿ ನಡೆಸುವ ಲೆಕ್ಕಪರಿಶೋಧನೆಯಿಂದ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ ಹಾಗೂ ಪಾರದರ್ಶಕವಾಗಿಸುತ್ತದೆ. 'ದತ್ತಾಂಶವು ಮಾಹಿತಿಯಾಗಿದೆ ಹಾಗೂ ಭವಿಷ್ಯದಲ್ಲಿ ದತ್ತಾಂಶವೇ ಇತಿಹಾಸವನ್ನು ನಿರೂಪಿಸಲಿದೆ' ಎಂದು ತಿಳಿಸಿದರು.

ಹಿಂದೆ ಕಥೆಗಳ ಮೂಲಕ ಇತಿಹಾಸವನ್ನು ಉಲ್ಲೇಖಿಸಲಾಗುತ್ತಿತ್ತು. ಆದರೆ, 21ನೇ ಶತಮಾನದಲ್ಲಿ ದತ್ತಾಂಶವೇ ಮಾಹಿತಿಯಾಗಿದೆ ಹಾಗೂ ಮುಂಬರುವ ದಿನಗಳಲ್ಲಿ ನಮ್ಮ ಇತಿಹಾಸವನ್ನು ದತ್ತಾಂಶದ ಮೂಲಕವೇ ಕಾಣಲಾಗುತ್ತದೆ ಮತ್ತು ತಿಳಿಯಲಾಗುತ್ತದೆ' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com