ಕೇಂದ್ರದ ಬಿಎಸ್ ಎಫ್ ನಿರ್ಧಾರದ ವಿರುದ್ಧ ನಿರ್ಣಯ ಅಂಗೀಕರಿಸಿದ ಬಂಗಾಳ

ಗಡಿ ಭದ್ರತಾ ಪಡೆಯ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ. 
ಬಿಎಸ್ಎಫ್
ಬಿಎಸ್ಎಫ್

ಕೋಲ್ಕತ್ತ: ಗಡಿ ಭದ್ರತಾ ಪಡೆಯ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ. 

ಈ ನಿರ್ಣಯಕ್ಕೆ ಶಾಸನ ಸಭೆಯಲ್ಲಿದ್ದ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ನಂತರ ಕೇಂದ್ರದ ಬಿಎಸ್ಎಫ್ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿರುವ ಎರಡನೇ ರಾಜ್ಯವಾಗಿದೆ ಪಶ್ಚಿಮ ಬಂಗಾಳ. 

ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ ಸದನ ನಿಯಮಾವಳಿಯ 169 ರೂಲ್ ನ ಅಡಿಯಲ್ಲಿ ನಿರ್ಣಯ ಅಂಗೀಕರಿಸಿದ್ದು, ನಿರ್ಣಯದ ಪರವಾಗಿ 112 ಮತಗಳು ಬಂದಿದ್ದರೆ, 63 ಮತಗಳು ವಿರುದ್ಧವಾಗಿತ್ತು. 

ಕಾನೂನು ಸುವ್ಯವಸ್ಥೆ ರಾಜ್ಯದ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಬಿಎಸ್ಎಫ್ ನ ವ್ಯಾಪ್ತಿಯನ್ನು ವಿಸ್ತರಿಸುವುದು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂಬುದನ್ನು ಸದನ ನಂಬುತ್ತದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. 

ಕೇಂದ್ರದ ಅಧಿಸೂಚನೆ ಬಿಎಸ್ ಫ್ ಕಾಯ್ದೆಯ ನಿಬಂಧನೆಗಳನ್ನು ಮೀರುತ್ತಿದೆ, ಇದು ರಾಜ್ಯದ ಪೊಲೀಸ್ ಹಾಗೂ ಬಿಎಸ್ಎಫ್ ನ ನಡುವಿನ ಸಮನ್ವಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಬಂಗಾಳದ ವಿಧಾನಸಭೆ ಅಭಿಪ್ರಾಯಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com