ಜರ್ಜರಿತಗೊಂಡಿರುವ ಚೆನ್ನೈಗೆ ಮುಂದಿನ 36 ಗಂಟೆಗಳು ಅಗ್ನಿ ಪರೀಕ್ಷೆ: ಕೆಳಹಂತದ ಪ್ರದೇಶಗಳ ನಿವಾಸಿಗಳಿಗೆ ಸಂಕಷ್ಟ!

ಸತತ ಮಳೆಯಿಂದಾಗಿ ಜರ್ಜರಿತವಾಗಿರುವ ಚೆನ್ನೈಗೆ ಮುಂದಿನ 36 ಗಂಟೆಗಳು ಅಗ್ನಿ ಪರೀಕ್ಷೆ ಎದುರಾಗಳಿದೆ. ದಕ್ಷಿಣ ಆಂಧ್ರದಿಂದ ಪಶ್ಚಿಮ ಕೇಂದ್ರ ಮತ್ತು ಪಕ್ಕದ ಬಂಗಾಳದ ನೈಋತ್ಯ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನಿವಾಸಿಗಳು
ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನಿವಾಸಿಗಳು

ಚೆನ್ನೈ: ಸತತ ಮಳೆಯಿಂದಾಗಿ ಜರ್ಜರಿತವಾಗಿರುವ ಚೆನ್ನೈಗೆ ಮುಂದಿನ 36 ಗಂಟೆಗಳು ಅಗ್ನಿ ಪರೀಕ್ಷೆ ಎದುರಾಗಳಿದೆ. ದಕ್ಷಿಣ ಆಂಧ್ರದಿಂದ ಪಶ್ಚಿಮ ಕೇಂದ್ರ ಮತ್ತು ಪಕ್ಕದ ಬಂಗಾಳದ ನೈಋತ್ಯ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ನವೆಂಬರ್ 20ರವರೆಗೆ ಮಳೆಯಾಗುವ ನಿರೀಕ್ಷೆಯಿದೆ. ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ತೂತುಕುಡಿ, ರಾಮನಾಥಪುರಂ, ವಿಲ್ಲುಪುರಂ, ಕಡಲೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳು ಹಾಗೂ ಪುದುಚೇರಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಂಭವವಿದೆ.

ತಮಿಳುನಾಡಿನ ಮಧುರೈ, ಶಿವಗಂಗಾ, ಡೆಲ್ಟಾ ಜಿಲ್ಲೆಗಳು, ತಿರುವಣ್ಣಾಮಲೈ, ಸೇಲಂ, ವಿರುಧುನಗರ, ಪುದುಕೊಟ್ಟೈ, ಪೆರಂಬಲೂರ್, ಕಲ್ಲಕುರಿಚಿ, ತೇಣಿ, ದಿಂಡಿಗಲ್, ಕರೂರ್, ತಿರುಚಿರಾಪಳ್ಳಿ, ತೆಂಕಶಿ, ತಮಿಳುನಾಡಿನ ಅರಿಯಲೂರು ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಅಂದಾಜಿನ ಪ್ರಕಾರ, ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಳ್ಳುವ ಚಂಡಮಾರುತದಿಂದಾಗಿ 24 ಗಂಟೆಗಳ ಒಳಗೆ 15 ಸೆಂ.ಮೀ ನಿಂದ 20 ಸೆಂ.ಮೀ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯಾಗಬಹುದು. ಇದರಿಂದ ವ್ಯಾಪಕ ಹಾನಿ ಮತ್ತು ಪ್ರವಾಹ ಉಂಟಾಗುವ ಸಾಧ್ಯತೆಗಳು ಹೆಚ್ಚಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com